ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೇಟ್ ಲತೀಫ್ ವಿದ್ಯಾರ್ಥಿಗಳ ತಲೆ ಬೋಳಿಸಿದ ಶಿಕ್ಷಕರು! (hair chopped off | Srinagar | Burn Hall School | Students)
Bookmark and Share Feedback Print
 
ಶಾಲೆಗೆ ಬರುವಾಗ ತಡವಾಯಿತು ಎಂಬುದನ್ನೇ ಮುಂದಿಟ್ಟುಕೊಂಡ ಇಲ್ಲಿನ ಶಾಲೆಯೊಂದರ ಶಿಕ್ಷಕರು ಹತ್ತಾರು ವಿದ್ಯಾರ್ಥಿಗಳನ್ನು ಥಳಿಸಿದ್ದಲ್ಲದೆ, ತಲೆ ಬೋಳಿಸಿದ ಹೇಯ ಪ್ರಕರಣವೊಂದು ಬಯಲಿಗೆ ಬಂದಿದೆ.

ಈ ವಿದ್ಯಾರ್ಥಿಗಳು ಶ್ರೀನಗರದ 'ಬರ್ನ್ ಹಾಲ್ ಸ್ಕೂಲ್'ಗೆ ಸೇರಿದವರು. ತಾವು ಸಂಚಾರ ದಟ್ಟಣೆಯಲ್ಲಿ ಸಿಕ್ಕಿ ಬಿದ್ದಿದ್ದ ಪರಿಣಾಮ ಶಾಲೆಗೆ ಬರುವುದು ತಡವಾಯಿತು ಎಂದು ಸಂಬಂಧಪಟ್ಟವರಲ್ಲಿ ಭಿನ್ನವಿಸಿಕೊಂಡರೂ ನಮ್ಮನ್ನು ಈ ರೀತಿ ನಡೆಸಿಕೊಳ್ಳಲಾಗಿದೆ ಎಂದು ವಿದ್ಯಾರ್ಥಿಗಳು ದೂರಿಕೊಂಡಿದ್ದಾರೆ.

ಸುಮಾರು 50 ವಿದ್ಯಾರ್ಥಿಗಳ ತಲೆ ಬೋಳಿಸಿದ ಘಟನೆಯ ನಂತರ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿ ಶಾಲೆಯ ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ. ಶಾಲಾಡಳಿತ ವಿರುದ್ಧವೂ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅವರು ನನ್ನ ಕೂದಲನ್ನೇ ಕತ್ತರಿಸಿದರು. ಆ ರೀತಿ ಕೂದಲನ್ನು ಕತ್ತರಿಸುತ್ತಿರುವ ಸಂದರ್ಭದಲ್ಲಿ ನಾನು ಪ್ರತಿಭಟಿಸಿದಾಗ ಗಾಯಗೊಂಡೆ ಎಂದು ಒಮರ್ ಅಹ್ಮದ್ ಎಂಬ ವಿದ್ಯಾರ್ಥಿ ಹೇಳಿಕೊಂಡಿದ್ದಾನೆ.

ಆದರೆ ಇದಕ್ಕೆ ಈ ಶಾಲೆಯ ಪ್ರಾಂಶುಪಾಲ ಜಯ ಕುಮಾರ್ ಪ್ರತಿಕ್ರಿಯೆ ಹೀಗಿದೆ: ವಿದ್ಯಾರ್ಥಿಗಳು ತಡವಾಗಿ ಶಾಲೆಗೆ ಬಂದಿದ್ದರು. ಇದು ಶಾಲಾ ನಿಯಮಗಳಿಗೆ ವಿರುದ್ಧವಾದುದು. ಹಾಗಾಗಿ ಅವರನ್ನು ಸ್ವಲ್ಪ ಹೊತ್ತು ತರಗತಿಯಿಂದ ಹೊರಗೆ ನಿಲ್ಲಿಸಲಾಗಿದೆ. ಉದ್ದುದ್ದ ಕೂದಲು ಬಿಟ್ಟಿದ್ದ ಕೆಲವು ವಿದ್ಯಾರ್ಥಿಗಳ ಕೂದಲುಗಳನ್ನು ಕತ್ತರಿಸಲಾಗಿದೆ ಎಂದಿದ್ದಾರೆ.

ಶಿಸ್ತು ಪರಿಪಾಲನೆ ಹೆಸರಿನಲ್ಲಿ ಶಾಲಾ ಆಡಳಿತವು ಕ್ರಿಮಿನಲ್ ಕೃತ್ಯವನ್ನೆಸಗಿದ್ದು, ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳ ಹೆತ್ತವರು ಪೊಲೀಸರಿಗೆ ಆಗ್ರಹಿಸಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ