ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ.ಬಂಗಾಲ ಸಿಎಂ ಬುದ್ಧದೇವ್ ರಾಜೀನಾಮೆಯಿಲ್ಲ: ಸಿಪಿಐಎಂ (Biman Bose | Buddhadeb Bhattacharya | CPI(M) | West Bengal)
Bookmark and Share Feedback Print
 
ಪಶ್ಚಿಮ ಬಂಗಾಲ ಸ್ಥಳೀಯ ಚುನಾವಣೆಗಳಲ್ಲಿ ಸಿಪಿಐ(ಎಂ) ಕಳಪೆ ನಿರ್ವಹಣೆ ತೋರಿಸಿರುವ ಹಿನ್ನೆಲೆಯಲ್ಲಿ ಬುದ್ಧದೇವ್ ಭಟ್ಟಾಚಾರ್ಯ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ ಎಂಬ ವರದಿಗಳ ನಡುವೆಯೇ ಶನಿವಾರ ಸ್ಪಷ್ಟನೆ ನೀಡಿರುವ ಪಕ್ಷದ ರಾಜ್ಯ ಕಾರ್ಯದರ್ಶಿ ಭೀಮಾನ್ ಬೋಸ್, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಪದತ್ಯಾಗದ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಇಲ್ಲಿ ಅಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ವಿಚಾರವನ್ನು ಸಿಪಿಐಎಂ ಕೇಂದ್ರೀಯ ಸಮಿತಿಯ ಗಮನಕ್ಕೆ ತರಲಾಗಿಲ್ಲ. ರಾಜ್ಯ ಸಮಿತಿಯಲ್ಲೂ ಈ ಕುರಿತು ಚರ್ಚೆ ನಡೆದಿಲ್ಲ ಎಂದು ರಾಜಧಾನಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಪಾಲಿಟ್ ಬ್ಯೂರೋ ಸಭೆಗಾಗಿ ಆಗಮಿಸಿರುವ ಬೋಸ್ ಹೇಳಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಸೆಮಿಫೈನಲ್ ಎಂದು ಕರೆಯಲಾಗುವ ಸ್ಥಳೀಯ ಚುನಾವಣೆಗಳಲ್ಲಿ ಎಡರಂಗವು ತೀವ್ರ ಹಿನ್ನೆಡೆ ಅನುಭವಿಸಿದ ನಂತರ ಭಟ್ಟಾಚಾರ್ಯ ರಾಜೀನಾಮೆ ಪ್ರಸ್ತಾಪ ಮುಂದಿಟ್ಟಿದ್ದರು ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ಬಂದಿದೆ.

ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಿಪಿಐಎಂ ಕಳಪೆ ನಿರ್ವಹಣೆ ನೀಡಿದ ಸಂದರ್ಭದಲ್ಲೂ ಭಟ್ಟಾಚಾರ್ಯ ಪದತ್ಯಾಗ ಪ್ರಸ್ತಾಪ ಮುಂದಿಟ್ಟಿದ್ದರು.

ಇತ್ತೀಚೆಗಷ್ಟೇ ನಡೆದ 81 ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎಡರಂಗ ಕೇವಲ 18 ಕಡೆಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಇದರ ಬದ್ಧವೈರಿ ತೃಣಮೂಲ ಕಾಂಗ್ರೆಸ್ 26 ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿತ್ತು. ಕಾಂಗ್ರೆಸ್ ಏಳು ಹಾಗೂ ಎಡರಂಗ ವಿರೋಧಿ ಪಾಳಯವು ನಾಲ್ಕು ಸ್ಥಾನ ಗೆದ್ದಿತ್ತು. 23 ಕಡೆಗಳ ಫಲಿತಾಂಶ ಅಮಾನತಾಗಿದ್ದರೆ, ಮೂರು ಕಡೆ ಸಮಬಲ ಕಂಡು ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ