ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾನವ ಹಕ್ಕು ಕಾರ್ಯಕರ್ತೆಯಿಂದ ಹಸುಳೆಗಳ ಅಪಹರಣ! (infants kidnapping | human rights activist | Krishnagiri | Lalitha)
Bookmark and Share Feedback Print
 
ಈಗೀಗ ಗಲ್ಲಿಗೊಂದರಂತೆ ಮಾನವ ಹಕ್ಕುಗಳ ಹೋರಾಟಗಾರರು, ಸಂಘಟನೆಗಳು ಹುಟ್ಟಿಕೊಳ್ಳುತ್ತಿರುವುದು ಗೊತ್ತೇ ಇದೆ. ಇವರಲ್ಲಿ ಕೆಲವರದ್ದು ನಿಜವಾದ ಸಮಾಜ ಸೇವೆಯಾದರೆ, ಉಳಿದವರದ್ದು ಹಣ ಮಾಡಲು ಆರಿಸಿಕೊಂಡಿರುವ ಒಂದು ಮಾರ್ಗ ಎನ್ನುವುದು ಆಗಾಗ ಬಯಲಾಗುತ್ತಿರುತ್ತದೆ.

ಅದಕ್ಕೊಂದು ಸೇರ್ಪಡೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಖಿಲ ಭಾರತ ಮಾನವ ಹಕ್ಕುಗಳ ಸಂಘಟನೆ. ಇದರ ಮುಖ್ಯಸ್ಥೆ ಲಲಿತಾ ಎಂಬಾಕೆ ಹಸುಗೂಸುಗಳ ಅಪಹರಣ ಪ್ರಕರಣದಲ್ಲಿ ಸಿಕ್ಕಿ ಬಿದ್ದು ಇದೀಗ ಜೈಲು ಸೇರಿದ್ದಾಳೆ.

ಪುಟ್ಟ ಮಕ್ಕಳನ್ನು ಅಪಹರಿಸುವ ಈ ಗ್ಯಾಂಗ್‌ನ ಎಂಟು ಮಂದಿಯನ್ನು ಇದೀಗ ಬಂಧಿಸಲಾಗಿದೆ. ಕೃಷ್ಣಗಿರಿ, ಚೆನ್ನೈ, ಪುದುಚೇರಿ, ಪನ್ರುತಿ (ಕಡಲೂರು ಕೇಂದ್ರ) ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಈ ಕುಖ್ಯಾತರ ತಂಡ ಕಾರ್ಯಾಚರಣೆ ನಡೆಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕೃಷ್ಣಗಿರಿಯಲ್ಲಿನ ನೂತನ ಬಸ್ ನಿಲ್ದಾಣದಿಂದ ಮಗುವೊಂದನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೇ 18ರಂದು ಧನಲಕ್ಷ್ಮಿ ಎಂಬಾಕೆಯನ್ನು ಬಂಧಿಸಲಾಗಿತ್ತು. ಈಕೆಯನ್ನು ವಿಚಾರಣೆ ನಡೆಸಿದಾಗ ತಾನು ಮಗುವೊಂದನ್ನು ಚೆನ್ನೈಯಲ್ಲಿನ ಪೆರಂಬೂರ್‌ನಲ್ಲಿನ ದಂಪತಿಗೆ ಮಗುವೊಂದನ್ನು ಹಸ್ತಾಂತರ ಮಾಡಿರುವುದಾಗಿ ಒಪ್ಪಿಕೊಂಡಿದ್ದಳು.

ಆಕೆ ನೀಡಿದ ಮಾಹಿತಿಗಳನ್ನಾಧರಿಸಿ ಇತರ ಏಳು ಮಂದಿಯನ್ನು ಬಂಧಿಸಲಾಗಿತ್ತು. ಅವರಲ್ಲಿ ಮಾನವ ಹಕ್ಕುಗಳ ಹೋರಾಟಗಾರ್ತಿಯೂ ಸೇರಿದ್ದಳು. ಈ ಹಿನ್ನೆಲೆಯಲ್ಲಿ ಇದುವರೆಗೆ ಎಂಟು ಮಕ್ಕಳನ್ನು ವಶಕ್ಕೆ ಪಡೆಯಲಾಗಿದೆ.

ಗಿರಿಜಾ, ಧನಲಕ್ಷ್ಮಿ, ಶಿವ, ಅಲ್ಫೋನ್ಸ್ ಸೇವಿಯರ್ ಮತ್ತು ರಾಣಿ ಎಂಬವರು ಈ ಗ್ಯಾಂಗ್‌ನಲ್ಲಿದ್ದಾರೆ. ಲಲಿತಾ ಎಂಬಾಕೆ ಮಾನವ ಹಕ್ಕು ಸಂಘಟನೆಯ ಅಧ್ಯಕ್ಷೆ. ಈಕೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದಳು. ಎಲ್ಲರನ್ನೂ 15 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಐವರು ಆರೋಪಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ಸಮಯದ ಹಿಂದೆ ಪ್ರೇಮ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಸ್ವಯಂಘೋಷಿತ ಮಾನವ ಹಕ್ಕುಗಳ ಸಂಘಟನೆಯೊಂದರ ಮುಖ್ಯಸ್ಥನನ್ನು ಬಂಧಿಸಿರುವ ಪ್ರಕರಣವನ್ನು ಇದೀಗ ಸ್ಮರಿಸಿಕೊಳ್ಳಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ