ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಗಾತಿ ಸಾವು; ರಾಜೀನಾಮೆ ನೀಡಿದ ಗೋವಾ ಸಚಿವ ಭೂಗತ (Goa minister | Goa | Tourism Minister | Mickky Pacheco)
Bookmark and Share Feedback Print
 
ತನ್ನ ಪತ್ನಿಯಿಂದ ದ್ವಿಪತ್ನಿತ್ವ ಆರೋಪ ಎದುರಿಸುತ್ತಿದ್ದ ಗೋವಾ ಪ್ರವಾಸೋದ್ಯಮ ಸಚಿವ ಮಿಕ್ಕಿ ಪಾಚೆಕೊ ತನ್ನ ಮೂರನೇ ಸಂಗಾತಿಯ ಸಾವಿನ ವಿವಾದಕ್ಕೆ ಸಂಬಂಧಪಟ್ಟಂತೆ ಶನಿವಾರ ರಾಜೀನಾಮೆ ನೀಡಿದ್ದು, ನಂತರ ತಲೆ ಮರೆಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ನಾಡಿಯಾ ಟೊರಾಡೋ ಎಂಬ 28ರ ಹರೆಯದ ಸಂಗಾತಿಯ ಸಾವಿಗೆ ಸಂಬಂಧಪಟ್ಟಂತೆ ಶುಕ್ರವಾರ ಕ್ರೈಂ ಬ್ರಾಂಚ್ ಅಧಿಕಾರಿಗಳು ಮಿಕ್ಕಿಯವರನ್ನು ನಿರಂತರ ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.

ಸಚಿವರು ತನ್ನ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ದಿಗಂಬರ ಕಾಮತ್ ಅವರಿಗೆ ಶನಿವಾರ ಅಪರಾಹ್ನ ಕಳುಹಿಸಿಕೊಟ್ಟಿದ್ದು, ನಂತರ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.

ನಾಡಿಯಾ ಅವರ ಸಾವಿಗೆ ಸಂಬಂಧಪಟ್ಟಂತೆ ತನ್ನ ಮೇಲೆ ಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಸಂಪುಟಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಮಿಕ್ಕಿ ತನ್ನ ಪತ್ರದಲ್ಲಿ ತಿಳಿಸಿದ್ದಾರೆ.

ಇಲಿ ಪಾಷಾಣ ಸೇವಿಸಿದ 15 ದಿನಗಳ ನಂತರ ಮೇ 30ರಂದು ನಾಡಿಯಾ ಚೆನ್ನೈಯ ಆಸ್ಪತ್ರೆಯೊಂದರಲ್ಲಿ ಮೃತರಾಗಿದ್ದರು. ನಾಡಿಯಾ ಜತೆ ಮಿಕ್ಕಿಯವರು ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ.

ನ್ಯಾಷನಲ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಬೆನಾಲಿಂ ಕ್ಷೇತ್ರದ ಶಾಸಕರಾಗಿರುವ ಮಿಕ್ಕಿ ರಾಜೀನಾಮೆಯ ನಂತರ ನಾಪತ್ತೆಯಾಗಿದ್ದಾರೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.

ಇಂದು ಅವರನ್ನು ಎರಡನೇ ಸುತ್ತಿನ ವಿಚಾರಣೆಗಾಗಿ ನಾವು ಕ್ರೈಂ ಬ್ರಾಂಚ್ ಕಚೇರಿಗೆ ಬರಲು ಹೇಳಿದ್ದೆವು. ಆದರೆ ಅವರು ರಾಜೀನಾಮೆ ನೀಡಿದ ನಂತರ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಕ್ರೈಂ ಬ್ರಾಂಚ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಾರ್ವಜನಿಕ ಸಂಬಂಧಗಳ ಪೊಲೀಸ್ ಅಧಿಕಾರಿ ಆತ್ಮರಾಮ್ ದೇಶಪಾಂಡ್ ಪತ್ರಕರ್ತರೊಂದಿಗೆ ಮಾತನಾಡುತ್ತಾ, ನಾವು ಎಲ್ಲಾ ಪೊಲೀಸ್ ಠಾಣೆಗಳಿಗೂ ಸೂಚನೆ ನೀಡಿದ್ದೇವೆ. ಆದರೂ ಮಾಜಿ ಸಚಿವರು ಇನ್ನೂ ಪತ್ತೆಯಾಗಿಲ್ಲ ಎಂದಿದ್ದಾರೆ.

ದ್ವಿಪತ್ನಿತ್ವ, ಹಲ್ಲೆ ಮತ್ತು ದರೋಡೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಮಿಕ್ಕಿಯವರ ವಿರುದ್ಧ ಪ್ರತಿಪಕ್ಷಗಳು ಮತ್ತು ಮಹಿಳಾ ಹಕ್ಕುಗಳ ಸಂಘಟನೆಗಳು ಪಣಜಿ ಸೇರಿದಂತೆ ಗೋವಾದಾದ್ಯಂತ ತೀವ್ರ ಪ್ರತಿಭಟನೆ ನಡೆಸಿ ಪ್ರಕರಣವನ್ನು ಸಿಬಿಐ ಅಥವಾ ಹಿರಿಯ ಐಪಿಎಎಸ್ ಅಧಿಕಾರಿಯೊಬ್ಬರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದವು. ನಾಡಿಯಾ ಸಾವಿನ ಹಿಂದೆ ಮಿಕ್ಕಿಯವರ ಕೈವಾಡವಿದೆ ಎಂದು ಆರೋಪಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ