ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವರುಣ್ ಗಾಂಧಿ ಮೇಲೆ ಸೋದರ ಮಾವನಿಂದ ಮಾನನಷ್ಟ ಕೇಸ್ (Varun Gandhi | Bharatiya Janata Party | V M Singh | Congress)
Bookmark and Share Feedback Print
 
ಬಿಜೆಪಿ ನಾಯಕ ಹಾಗೂ ಫಿಲಿಭಿತ್ ಸಂಸದ ವರುಣ್ ಗಾಂಧಿ ವಿರುದ್ಧ ಅದೇ ಕ್ಷೇತ್ರದಿಂದ 2009ರ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರ ಸೋದರ ಮಾವ ವಿ.ಎಂ. ಸಿಂಗ್ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ.
PTI

ದೆಹಲಿ ಹೈಕೋರ್ಟ್‌ನಲ್ಲಿ ಕಳೆದ ವಾರ ಗಾಂಧಿ ವಿರುದ್ಧ ಸಿಂಗ್ ಮಾನಹಾನಿ ದಾವೆ ಹೂಡಿದ್ದಾರೆ. ಘಟನೆ ತೀರಾ ಹಳತಾಗಿರುವುದರಿಂದ ಮಾನನಷ್ಟ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ನ್ಯಾಯಮೂರ್ತಿ ಜೆ.ಆರ್. ಮಿಧಾ ಆಕ್ಷೇಪ ವ್ಯಕ್ತಪಡಿಸಿದರೂ, ಜುಲೈ 28ರೊಳಗೆ ಉತ್ತರಿಸುವಂತೆ ಗಾಂಧಿಗೆ ನೊಟೀಸ್ ಜಾರಿಗೊಳಿಸಿದ್ದಾರೆ.

ಉತ್ತರ ಪ್ರದೇಶದ ಫಿಲಿಭಿತ್ ಕ್ಷೇತ್ರದಿಂದ ಇಬ್ಬರೂ ಸಂಸದ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಸಿಂಗ್ ವಿರುದ್ಧ ಗಾಂಧಿ ಮಾನ ಹಾನಿಕರ ಭಾಷೆಯಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಹಲವು ನಿದರ್ಶನಗಳನ್ನು ಸಿಂಗ್ ತನ್ನ ಅರ್ಜಿಯಲ್ಲಿ ನಮೂದಿಸಿದ್ದಾರೆ.

ಶ್ರೀಮಂತ ಅಭ್ಯರ್ಥಿಗಳಲ್ಲೊಬ್ಬರಾಗಿರುವ ಸಿಂಗ್ ಸ್ವತಃ ವರುಣ್ ಗಾಂಧಿಯ ಸೋದರ ಮಾವ. ಇವರನ್ನು ಗಾಂಧಿ ಕುಟುಂಬದ ವರುಣ್ ವಿರುದ್ಧ ಕಾಂಗ್ರೆಸ್ ಕಣಕ್ಕಿಳಿಸಿತ್ತು. ಅರ್ಜಿದಾರ ಸಿಂಗ್ ಫಿಲಿಭಿತ್ ಸಂಸದ ಗಾಂಧಿಯ ತಾಯಿ, ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿಯವರ ಹಿರಿಯ ಸಹೋದರ.

ಮಹಾ ಚುನಾವಣೆ ಸಂದರ್ಭದಲ್ಲಿ ಫಿಲಿಭಿತ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಗಾಂಧಿ ಮುಸ್ಲಿಮರ ವಿರುದ್ಧ ದ್ವೇಷಮಯ ಭಾಷಣಗಳನ್ನು ಮಾಡಿ ತೀವ್ರ ವಿವಾದಕ್ಕೆ ಸಿಲುಕಿದ್ದನ್ನು ಇದೀಗ ಸ್ಮರಿಸಬಹುದಾಗಿದೆ. ಇದೇ ಕಾರಣಕ್ಕಾಗಿ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಉತ್ತರ ಪ್ರದೇಶ ಸರಕಾರವು ಬಂಧಿಸಿ ಜೈಲಿಗೆ ಕಳುಹಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ