ಮಾಜಿ ಸಚಿವ ಜಾಮೀನು ಅರ್ಜಿ
ಪಣಜಿ: ಎನ್ಸಿಪಿ ನಾಯಕ ಹಾಗೂ ಗೋವಾ ಮಾಜಿ ಪ್ರವಾಸೋದ್ಯಮ ಸಚಿವ ಮಿಕಿ ಪಚೆಕೊ ಸ್ಥಳೀಯ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ತನ್ನ ಪರಮಾಪ್ತೆ ನಾಡಿಯಾ ಟೊರಾಡೋ ನಿಗೂಢ ಸಾವಿಗೆ ಸಂಬಂಧಪಟ್ಟಂತೆ ಅವರು ಇತ್ತೀಚೆಗಷ್ಟೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.