ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೆಲಸ ಮಾಡದ ವಿಜಯ ಮಲ್ಯರನ್ನು ವಜಾಗೊಳಿಸಿದ ಸ್ವಾಮಿ (Vijay Mallya | Janata Party | JDS | Subramanian Swamy)
Bookmark and Share Feedback Print
 
ವಿಜಯ ಮಲ್ಯ ಕೆಲಸ ಮಾಡದೆ ನಿದ್ದೆ ಮಾಡುತ್ತಿದ್ದರು ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ ಟೀಕಿಸಿದ್ದು, ಈ ಪಕ್ಷದ ಕಾರ್ಯಾಧ್ಯಕ್ಷ ಹುದ್ದೆಯಲ್ಲಿದ್ದ ಮದ್ಯದ ದೊರೆಯನ್ನು ಹೊರದಬ್ಬಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದ ಜೆಡಿಎಸ್ ಬೆಂಬಲದಿಂದ ಮಲ್ಯ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ನಂತರ ಸ್ವಾಮಿ ಈ ಕ್ರಮಕ್ಕೆ ಮುಂದಾಗಿದ್ದಾರೆ.

ಕಾರ್ಯಾಧ್ಯಕ್ಷ ಸ್ಥಾನದಿಂದ ಮಲ್ಯರನ್ನು ವಜಾಗೊಳಿಸಿರುವ ಸ್ವಾಮಿ, ಪಕ್ಷದ ಕರ್ನಾಟಕ ರಾಜ್ಯ ಘಟಕವನ್ನು ಕೂಡ ವಿಸರ್ಜನೆ ಮಾಡಿದ್ದಾರೆ.

ಜನತಾ ಪಕ್ಷದ ಸಂವಿಧಾನದಂತೆ ನನಗಿರುವ ಅಧಿಕಾರವನ್ನು ಬಳಸಿಕೊಂಡು ವಿಜಯ ಮಲ್ಯ ಅವರನ್ನು ಜನತಾ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕುತ್ತಿದ್ದೇನೆ. 2002ರಲ್ಲಿ ಅವರನ್ನು ಈ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು ಎಂದು ಸ್ವಾಮಿ ವಿವರಣೆ ನೀಡಿದ್ದಾರೆ.

2004ರ ನಂತರ ಅವರು ಕಚೇರಿಯಲ್ಲಿ ಕೆಲಸ ನಿರ್ವಹಿಸದೆ ನಿದ್ದೆಯಲ್ಲಿದ್ದರು. ಈಗ ಅವರು ಜೆಡಿಎಸ್ ಬೆಂಬಲವನ್ನು ಪಡೆದುಕೊಂಡು ರಾಜ್ಯಸಭೆ ಪ್ರವೇಶಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಹಾಗಾಗಿ ಅವರು ಜನತಾ ಪಕ್ಷದ ಸದಸ್ಯತ್ವವನ್ನು ಕೂಡ ಕಳೆದುಕೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಪಕ್ಷದ ಕೇಂದ್ರೀಯ ಸಂಸದೀಯ ಸಮಿತಿ ಸಭೆಯು ಚೆನ್ನೈಯಲ್ಲಿ ಜೂನ್ 14ರಂದು ನಡೆಯಲಿದೆ. ಅಂದು ಮಲ್ಯ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹಿಂದಕ್ಕೆ ಪಡೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಜನತಾ ಪಕ್ಷದ ಕರ್ನಾಟಕ ಘಟಕವನ್ನು ಅಸ್ತಿತ್ವಕ್ಕೆ ತಂದಿದ್ದ ಮಲ್ಯ ಸಾಕಷ್ಟು ಹಣ ಸುರಿದು ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತೀವ್ರ ನಿರಾಸೆ ಅನುಭವಿಸಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ