ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಗನ ಜತೆ ಸೆಕ್ಸ್‌‌ಗೆ ಒತ್ತಾಯಿಸಿದ ಪರಮಪಾಪಿ ಪೊಲೀಸರು! (strip in front of her son | Sex with son | Sex | Mayuri)
Bookmark and Share Feedback Print
 
ಜನರನ್ನು ರಕ್ಷಿಸಬೇಕಾದ ಪೊಲೀಸರು ಭಕ್ಷಿಸುತ್ತಿರುವ ಸಂಗತಿಗಳೇನೂ ಹೊಸತಲ್ಲವಾದರೂ, ಅವೆಲ್ಲವನ್ನೂ ಮೀರಿ ನಿಂತ ಕಲ್ಪನೆಗೂ ನಿಲುಕದ ರಾಕ್ಷಸೀ ಕೃತ್ಯವೊಂದು ಈಗ ನಡೆದು ಹೋಗಿದೆ. ತನ್ನ ಪುತ್ರನೆದುರೇ ಹೊಡೆದು ಬಡಿದು ಮಹಿಳೆಯೊಬ್ಬರ ಬಟ್ಟೆ ಬಿಚ್ಚಿಸಿದ್ದಲ್ಲದೆ, ಬಾಲಕನ ಜತೆ ಲೈಂಗಿಕ ಸಂಪರ್ಕ ನಡೆಸುವಂತೆ ಬಲವಂತಪಡಿಸಿದ ಹೇಯಾತಿಹೇಯ ಘಟನೆಯಿದು.

ಇದು ಬೆಳಕಿಗೆ ಬರುತ್ತಿದ್ದಂತೆ ಇಡೀ ದೇಶಕ್ಕೆ ದೇಶವೇ ಬೆಚ್ಚಿ ಬಿದ್ದಿದೆ. ಖಾಕಿಗಳ ಈ ರಾಕ್ಷಸೀ ಕೃತ್ಯ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಎಚ್ಚೆತ್ತಿರುವ ಪೊಲೀಸ್ ಇಲಾಖೆ ತಕ್ಷಣವೇ ತನಿಖೆಗೆ ಆದೇಶ ನೀಡಿದೆ.

ಘಟನೆಯ ಬಗ್ಗೆ ನಮಗೆ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಆ ವಲಯದ ಎಸಿಪಿಯವರಲ್ಲಿ ತನಿಖೆ ನಡೆಸಿ ವಿಸ್ತೃತ ವರದಿ ಸಲ್ಲಿಸುವಂತೆ ಆದೇಶ ನೀಡಿದ್ದೇನೆ. ವರದಿ ಬಂದ ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ಬಿಡುವುದಿಲ್ಲ ಎಂದು ಪಶ್ಚಿಮ ದೆಹಲಿಯ ಡಿಸಿಪಿ ಶರದ್ ಅಗರ್ವಾಲ್ ತಿಳಿಸಿದ್ದಾರೆ.

ಇದು ಕಳ್ಳತನ ಕೇಸು...
ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೇ 22ರಂದು ರಾಜೌರಿ ಗಾರ್ಡನ್ ಠಾಣಾ ವ್ಯಾಪ್ತಿಯ ಪೊಲೀಸರು ಇಬ್ಬರು ಸಹೋದರರನ್ನು ವಶಕ್ಕೆ ತೆಗೆದುಕೊಂಡಿದ್ದರು. ನಂತರ ಈ ಇಬ್ಬರು ಆರೋಪಿ ಹುಡುಗರು ಹಾಗೂ ಅವರ ಹೆತ್ತವರಿಗೆ ಮನಬಂದಂತೆ ಹೊಡೆಯುವಷ್ಟಕ್ಕೆ ನಿಲ್ಲದ ಪೊಲೀಸರ ಕ್ರೂರತೆ ಅಮಾನವೀಯತೆಯ ಹಂತವನ್ನು ತಲುಪಿತ್ತು.

ಕಳ್ಳತನ ನಡೆಸಿದ್ದಾರೆ ಎನ್ನಲಾದ ಹುಡುಗರು ರಾಜು (12) ಮತ್ತು ರಮೇಶ್ (10). ಅವರ ಹೆತ್ತವರನ್ನು 30ರ ಹರೆಯದ ಮಯೂರಿ (ಎಲ್ಲಾ ಹೆಸರುಗಳನ್ನು ಬದಲಾಯಿಸಲಾಗಿದೆ) ಮತ್ತು ತಂದೆಯನ್ನು ಸತೀಶ್ (45) ಎಂದು ಗುರುತಿಸಲಾಗಿದೆ.

ವಿವರ ತಾಯಿಯ ಮಾತಲ್ಲಿ...
ನಾವಿಬ್ಬರೂ ಮಕ್ಕಳನ್ನು ಬಿಡಿಸಲೆಂದು ಪೊಲೀಸ್ ಠಾಣೆಗೆ ಹೋಗಿದ್ದೆವು. ಈ ಸಂದರ್ಭದಲ್ಲಿ ನಮ್ಮನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು, ನನ್ನ ಗಂಡ ಮತ್ತು ಚಿಕ್ಕ ಮಗ ರಮೇಶ್‌ನನ್ನು ಮತ್ತೊಂದು ಕೊಠಡಿಯಲ್ಲಿ ಕೂಡಿ ಹಾಕಿದರು. ಬಳಿಕ ನನ್ನನ್ನು ಮತ್ತು ದೊಡ್ಡ ಮಗ ರಾಜುವನ್ನು ಪ್ರಶ್ನಿಸಲಾರಂಭಿಸಿದರು.

ನನ್ನ ಮಗ ಮಹಿಳೆಯೊಬ್ಬರ ಕಾರಿನಿಂದ ಕಳ್ಳತನ ಮಾಡಿದ್ದಾನೆ ಎನ್ನಲಾದ 6,000 ರೂಪಾಯಿ ಹಣ ಮತ್ತು ಇತರ ವಸ್ತುಗಳನ್ನು ವಾಪಸ್ ಮಾಡುವಂತೆ ಪೊಲೀಸರು ಒತ್ತಾಯಿಸಿದರು. ಆದರೆ ಈ ಆರೋಪಗಳನ್ನು ಹೊತ್ತುಕೊಳ್ಳಲು ನಾವು ನಿರಾಕರಿಸಿದೆವು. ಆ ಹೊತ್ತಿನಲ್ಲಿ ಅಲ್ಲಿದ್ದ ಕಾನ್ಸ್‌ಟೇಬಲ್ ಒಬ್ಬ ನನ್ನಲ್ಲಿ ಮಗನೆದುರೇ ಬಟ್ಟೆ ಬಿಚ್ಚುವಂತೆ ಬಲವಂತಪಡಿಸಿದ.

ನಾನು ನಿರಾಕರಿಸಿದಾಗ ಪೊಲೀಸ್ ನನಗೆ ಲಾಠಿಯಿಂದ ಹೊಡೆಯಲಾರಂಭಿಸಿದ. ನಂತರ ಅನಿವಾರ್ಯವಾಗಿ ನಾನು ಮಗನೆದುರೇ ಬೆತ್ತಲಾಗಬೇಕಾಯಿತು ಎಂದು ಮಯೂರಿ ಘಟನೆಯನ್ನು ಕಣ್ಣೀರಿಡುತ್ತಲೇ ವಿವರಿಸಿದ್ದಾರೆ.

ಅಷ್ಟಕ್ಕೆ ನಿಲ್ಲದ ಪೊಲೀಸರ ಹಿಂಸೆ ನನಗೆ ಆಘಾತ ತಂದದ್ದು ಮಗನೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಒತ್ತಾಯಿಸಿದ್ದು. ಈ ಹೊತ್ತಿನಲ್ಲಿ ನಾವಿಬ್ಬರೂ ಅಳುತ್ತಾ ಅವರಲ್ಲಿ ನಮ್ಮನ್ನು ಬಿಟ್ಟು ಬಿಡಿ ಎಂದು ಬೇಡಿಕೊಂಡೆವು. ಆಗ ಅಲ್ಲಿದ್ದ ಕಾನ್ಸ್‌ಟೇಬಲ್ ಒಬ್ಬ, ಮಗನ ಜತೆ ಆಗದಿದ್ದರೆ ನನ್ನ ಜತೆ ಬಾ ಎಂದ. ಕೊನೆಗೂ ಸಾಕಷ್ಟು ಥಳಿತಕ್ಕೊಳಗಾದ ನಾವು ಸುಮಾರು ಎರಡು ಗಂಟೆಗಳ ನಂತರ ಬಿಡುಗಡೆ ಹೊಂದಿದೆವು ಎಂದಿದ್ದಾರೆ.

ಅದೇ ಹೊತ್ತಿಗೆ ಮಕ್ಕಳ ತಂದೆ ಸತೀಶ್, ಪೊಲೀಸರು ಹಣದ ಆಮಿಷ ಒಡ್ಡಿರುವುದನ್ನೂ ಬಹಿರಂಗಪಡಿಸಿದ್ದಾರೆ. ನೀವು ಈ ಪ್ರದೇಶವನ್ನು ಬಿಟ್ಟು ಬೇರೆ ಕಡೆ ಹೋಗಬೇಕೆಂದು ಪೊಲೀಸರು 3,500 ರೂಪಾಯಿಗಳನ್ನು ನೀಡಿ ಹೇಳಿದ್ದರು. ನಂತರ ಮತ್ತೆ 20,000 ರೂಪಾಯಿಗಳನ್ನು ನೀಡುವುದಾಗಿಯೂ ಭರವಸೆ ನೀಡಿದರು. ಆದರೆ ನನಗೆ ಅವರ ಹಣ ಬೇಕಿಲ್ಲ. ನನ್ನ ಕುಟುಂಬದ ಗೌರವ ಮುಖ್ಯ ಎಂದಿದ್ದಾರೆ.

ತುಚ್ಛೀಕರಣಕ್ಕೊಳಗಾದ ಇಡೀ ಕುಟುಂಬಕ್ಕೀಗ ಹಲವು ಸಮಾಜ ಸೇವಾ ಸಂಸ್ಥೆಗಳು ಸೇರಿದಂತೆ ನಾಗರಿಕರಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ