ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಭಾರತ 129ಕ್ಕೆ ಕುಸಿತ (India | Global Peace Index | Pakistan | Israel)
Bookmark and Share Feedback Print
 
ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಭಾರತವು ಬರೋಬ್ಬರಿ ಏಳು ಸ್ಥಾನಗಳ ಕುಸಿತ ಕಂಡಿದ್ದು, 129ನೇ ಸ್ಥಾನಕ್ಕೆ ತಲುಪಿದೆ. ಆದರೂ 149 ದೇಶಗಳು ಒಳಗೊಂಡಿರುವ ಈ ಪಟ್ಟಿಯಲ್ಲಿ ಪಾಕಿಸ್ತಾನ (145) ಮತ್ತು ಶ್ರೀಲಂಕಾಗಳಿಗಿಂತ (133) ಉತ್ತಮ ಗೌರವ ಪಡೆದ ಹೆಮ್ಮೆ ಭಾರತಕ್ಕಿದೆ.

ಆಸ್ಟ್ರೇಲಿಯಾ ಮೂಲದ ಅರ್ಥಶಾಸ್ತ್ರ, ಶಾಂತಿ ಮತ್ತು ವಾಣಿಜ್ಯ ಬೇಹುಗಾರಿಕಾ ವಿದ್ಯಾಸಂಸ್ಥೆಯ ತಜ್ಞರು ಈ ಸೂಚ್ಯಂಕವನ್ನು ಸಿದ್ಧಪಡಿಸಿದ್ದು, ಭಾರತದ ಪಕ್ಕದ ದೇಶಗಳಾದ ಬಾಂಗ್ಲಾದೇಶ 87, ನೇಪಾಳ 82 ಹಾಗೂ ಭೂತಾನ್ 36ನೇ ಸ್ಥಾನಗಳನ್ನು ಪಡೆದಿವೆ.

ಕಳೆದ ವರ್ಷ ಭಾರತವು 122ನೇ ರ‌್ಯಾಂಕ್ ಪಡೆದುಕೊಂಡಿತ್ತು. 2008ರಲ್ಲಿ 107 ಹಾಗೂ 2007ರಲ್ಲಿ 109ನೇ ಸ್ಥಾನದಲ್ಲಿದ್ದ ಭಾರತ ಈ ಬಾರಿ ದೊಪ್ಪನೆ ಕುಸಿತ ಕಂಡಿದೆ. ಅಚ್ಚರಿಯ ವಿಚಾರವೆಂದರೆ ನ್ಯೂಜಿಲೆಂಡ್ ಶಾಂತಿಯ ಸೂಚ್ಯಂಕದಲ್ಲಿ ಸತತ ಎರಡನೇ ವರ್ಷವೂ ಅಗ್ರ ಸ್ಥಾನದಲ್ಲೇ ಮುಂದುವರಿದಿದುರುವುದು. ನಂತರದ ಸ್ಥಾನಗಳು ಐರ್ಲೆಂಡ್ ಮತ್ತು ಜಪಾನ್ ಪಾಲಾಗಿವೆ.

ಶಾಂತಿ ಸೂಚ್ಯಂಕದ ಕೊನೆಯ ಸ್ಥಾನ ಪಡೆದಿರುವ ದೇಶ ಇರಾಕ್. ಸೋಮಾಲಿಯಾ, ಅಫಘಾನಿಸ್ತಾನ, ಸೂಡಾನ್, ಪಾಕಿಸ್ತಾನ, ಇಸ್ರೇಲ್ ಮತ್ತು ರಷ್ಯಾಗಳು ಕ್ರಮವಾಗಿ ಕೆಳಮುಖದಿಂದ ರ‌್ಯಾಂಕಿಂಗ್‌ನಲ್ಲಿ ಸ್ಥಾನ ಪಡೆದುಕೊಂಡಿವೆ.

ಈ ಸೂಚ್ಯಂಕ ತಯಾರಿಸಲು ದೇಶದ ಆಂತರಿಕ ಮತ್ತು ಬಾಹ್ಯ ಸಂಘರ್ಷಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಸಂಘರ್ಷ ಅಥವಾ ಯುದ್ಧಗಳಿಂದ ಸಾವನ್ನಪ್ಪಿದವರ ಸಂಖ್ಯೆ, ಸಂಘರ್ಷ ನಡೆದ ಮಟ್ಟ, ನೆರೆ ರಾಷ್ಟ್ರಗಳ ಜತೆಗಿನ ಸಂಬಂಧ ಮುಂತಾದುವುಗಳು ಕೂಡ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಈ ವರದಿಯು ಭಾರತ ಮತ್ತು ಪಾಕಿಸ್ತಾನಗಳ ಸಂಬಂಧವನ್ನು ಕೂಡ ಉಲ್ಲೇಖಿಸಿದೆ. ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸರಕಾರಿ ಮಟ್ಟದ ಸಂಬಂಧ ಪ್ರಸಕ್ತ ಈ ಹಿಂದಿಗಿಂದ ಸುಧಾರಿಸಿದೆ. ಅಲ್ಲದೆ ರಾಷ್ಟ್ರದಲ್ಲಿ ಯುಪಿಎ ಸರಕಾರ ಮತ್ತೆ ಆಡಳಿತ ಚುಕ್ಕಾಣಿ ಹಿಡಿದಿರುವುದರಿಂದ ಪಾಕಿಸ್ತಾನದ ಕಡೆಗಿನ ಸ್ಥಿರ ನೀತಿಗಳು ಮುಂದುವರಿಯಲಿವೆ ಎಂದಿದೆ.
ಸಂಬಂಧಿತ ಮಾಹಿತಿ ಹುಡುಕಿ