ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಲಿತರಿಂದ ದಲಿತರಿಗಾಗಿ ನಿರ್ಮಾಣವಾಗಿದೆ ದೇವಸ್ಥಾನ..! (Dalits temple | Kendrapara | Baldevjew temple | Mahalaxmi temple)
Bookmark and Share Feedback Print
 
ನಗರೀಕರಣ, ಕೈಗಾರೀಕರಣಗಳಿಂದಾಗಿ ಎಷ್ಟೇ ಆಧುನಿಕತೆ ಭಾರತವನ್ನು ಪ್ರವೇಶಿಸಿದರೂ ದಲಿತರ ಪರಿಸ್ಥಿತಿ ಅಸ್ಪ್ರಶ್ಯತೆಯಿಂದ ಮುಕ್ತವಾಗಿಲ್ಲ ಎನ್ನುವುದು ಕನ್ನಡಿಯಷ್ಟೇ ಸತ್ಯ. ಅದೇ ಕಾರಣದಿಂದ ಹಲವು ದಶಕಗಳ ಹಿಂದೆಯೇ ದಲಿತರಿಗೆಂದೇ ಆರಂಭಿಸಲಾಗಿದ್ದ ದೇವಳದ ನಿರ್ಮಾಣ ಕಾರ್ಯ ಇದೀಗ ಮುಕ್ತಾಯಗೊಂಡಿದ್ದು, ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗಿದೆ. ವಿಶೇಷವೆಂದರೆ ಇದು ದೇವಸ್ಥಾನವೊಂದರ ಒಳಗೆ ನಿರ್ಮಾಣವಾಗಿರುವುದು.

ಒರಿಸ್ಸಾದ ಕೇಂದ್ರಾಪರ ಎಂಬ ಜಿಲ್ಲೆಯಲ್ಲಿದೆ ಈ ವಿಶೇಷತೆಗಳನ್ನು ಹೊಂದಿದ ದೇವಸ್ಥಾನ. ಇಲ್ಲಿನ 300 ವರ್ಷ ಪುರಾತನವಾದ ಬಲ್ದೇವ್ ಜ್ಯೂ ದೇವಸ್ಥಾನದ ಒಳಗೆ ಮಹಾಲಕ್ಷ್ಮಿ ದೇವಳವನ್ನು ನಿರ್ಮಿಸಲಾಗಿದೆ.

ಇಲ್ಲಿನ ಮೀನುಗಾರಿಕೆ ವೃತ್ತಿ ನಡೆಸುವ ದಲಿತ ಸಮುದಾಯದವರು 47 ಅಡಿ ವಿಸ್ತಾರದಲ್ಲಿ ಹರಡಿಕೊಂಡಿರುವ ಈ ದೇವಸ್ಥಾನ ನಿರ್ಮಿಸಿದ್ದು, ಇತರರಿಂದ ಸಹಕಾರ ಪಡೆದುಕೊಂಡಿಲ್ಲ ಎನ್ನುವುದು ಮತ್ತೊಂದು ವಿಶೇಷ ಎಂದು ಬಲ್ದೇವ್ ದೇವಳದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ದೇವಸ್ಥಾನದ ಅಂಗಣದೊಳಗೆ ಇದೀಗ ನಿರ್ಮಿಸಲಾಗಿರುವ ಈ ದೇವಸ್ಥಾನಕ್ಕೆ 1927ರಲ್ಲೇ ಕೆಸರುಗಲ್ಲು ಹಾಕಲಾಗಿತ್ತು. ಹಣಕಾಸು ಅಡಚಣೆಯ ಕಾರಣದಿಂದ ಸರಿಸುಮಾರು 83 ವರ್ಷಗಳ ನಂತರ ಪೂಜೆಗೆ ಸಿದ್ಧವಾಗಿದೆ.

ಜೂನ್ 25ರಂದು ಈ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ. ಪುರಿ ಗಜಪತಿ ಮಹಾರಾಜ ದಿಬ್ಯಾ ಸಿಂಗಾ ದೇಬ್ ಮೊದಲ ಪೂಜೆ ಸಲ್ಲಿಸುವ ಮೂಲಕ ಪ್ರಥಮ ಭಕ್ತರಾಗಲಿದ್ದಾರೆ.

ಇತರ ದೇವಸ್ಥಾನಗಳಲ್ಲಿದ್ದಂತೆ ಇಲ್ಲಿ ದಲಿತರಿಗೆ ದೇವಳ ಪ್ರವೇಶಕ್ಕೆ ಯಾವುದೇ ನಿರ್ಬಂಧಗಳಿರುವುದಿಲ್ಲ. ಯಾರು ಬೇಕಾದರೂ ದರ್ಶನ ಪಡೆಯಬಹುದು. ಅಚ್ಚರಿಯ ವಿಚಾರವೆಂದರೆ ಹಿಂದೂಯೇತರ ವ್ಯಕ್ತಿಗಳು ಕೂಡ ಭೇಟಿ ನೀಡಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ