ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಹಜೀವನ ಅಸಾಧ್ಯವೇ?; ಸಿಗಲಿದೆ ಸುಲಭದಲ್ಲಿ ವಿಚ್ಛೇದನ (Hindu divorce law | Marriage Laws | Union Cabinet | Manmohan Singh)
Bookmark and Share Feedback Print
 
ವೈವಾಹಿಕ ಜೀವನವು ರಿಪೇರಿ ಮಾಡಲಾಗದ ಹಂತಕ್ಕೆ ತಲುಪಿದ ಸಂದರ್ಭದಲ್ಲಿ ಸುಲಭವಾಗಿ ವಿಚ್ಛೇದನ ಲಭಿಸುವಂತೆ ಮಾಡಲು ಕಾನೂನೊಂದಕ್ಕೆ ತಿದ್ದುಪಡಿ ಮಾಡುವ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿದೆ. ಇದರೊಂದಿಗೆ ಸಹಜೀವನ ಅಸಾಧ್ಯ ಎನ್ನುವುದು ಕೂಡ ಇನ್ನು ಮುಂದಿನ ದಿನಗಳಲ್ಲಿ ವಿಚ್ಛೇದನಕ್ಕೆ ಕಾರಣ ನೀಡಬಹುದಾಗಿದೆ.

ಸಹಜೀವನ ಅಸಾಧ್ಯ ಎನ್ನುವುದನ್ನು ರುಜುವಾತುಪಡಿಸಿದರೆ ಮತ್ತು ವಿಚ್ಛೇದನ ಪ್ರಕರಣಗಳಲ್ಲಿ ಸಂಗಾತಿಯನ್ನು ಸತಾಯಿಸುವ ಸಲುವಾಗಿ ಒಂದು ಪಕ್ಷವು ನ್ಯಾಯಾಲಯಕ್ಕೆ ಗೈರು ಹಾಜರಾಗುವ ಮೂಲಕ ಕಿರುಕುಳ ನೀಡಿದಲ್ಲಿ ವಿಚ್ಛೇದನ ನೀಡಲು ಅವಕಾಶವಿದೆ.

ವೈವಾಹಿಕ ಕಾನೂನು (ತಿದ್ದುಪಡಿ) ಮಸೂದೆ 2010ಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸಂಪುಟವು ಅಂಗೀಕಾರ ನೀಡಿದೆ. ಈ ಮಸೂದೆಯು ಹಿಂದೂ ವಿವಾಹ ಕಾಯ್ದೆ 1955ಕ್ಕೆ ಮತ್ತು ವಿಶೇಷ ವಿವಾಹ ಕಾಯ್ದೆ 1954ಕ್ಕೆ ತಿದ್ದುಪಡಿ ತರಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ ತಿಳಿಸಿದ್ದಾರೆ.

ವಿವಾಹ ವಿಚ್ಛೇದನ ಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಪಕ್ಷವು ಮತ್ತೊಂದು ಪಕ್ಷದಿಂದ ನ್ಯಾಯಾಲಯಕ್ಕೆ ಉದ್ದೇಶ ಪೂರ್ವಕವಾಗಿ ಹಾಜರಾಗದೇ ಇರುವ ಮೂಲಕ ಕಲಾಪಗಳನ್ನು ನಿರ್ಣಾಯಕರಹಿತವಾಗಿಸಿ ಕಿರುಕುಳಕ್ಕೆ ಯತ್ನಿಸಿದರೆ ಆಗ ವಿಚ್ಛೇದನ ಬಯಸುವ ಪಕ್ಷಕ್ಕೆ ಅನುಕೂಲವನ್ನು ಈ ಮಸೂದೆ ಒದಗಿಸುತ್ತದೆ.

ಸರಿಪಡಿಸಲಾಗದ ಹಂತ ತಲುಪಿದ ದಾಂಪತ್ಯಕ್ಕೆ ಈ ಹಿಂದೆ ವಿಚ್ಛೇದನ ನೀಡಲು ಅವಕಾಶವಿರಲಿಲ್ಲ. ಆದರೆ ಕಾನೂನು ಆಯೋಗ ಮತ್ತು ಸುಪ್ರೀಂ ಕೋರ್ಟ್ ಶಿಫಾರಸಿನಂತೆ ಕಾನೂನಿನಲ್ಲಿ ಬದಲಾವಣೆ ತರಲಾಗುತ್ತಿದ್ದು, ಈ ಮಸೂದೆಯ ಪ್ರಕಾರ ಮೇಲೆ ಹೇಳಿದ ಕಾರಣವನ್ನೂ ವಿಚ್ಛೇದನಕ್ಕೆ ಬಳಸಬಹುದಾಗಿದೆ.

ವ್ಯಭಿಚಾರ, ಕ್ರೂರತೆ, ಪರಿತ್ಯಾಗ, ಅನ್ಯ ಧರ್ಮಕ್ಕೆ ಮತಾಂತರ, ಮಾನಸಿಕ ಅಸ್ವಸ್ಥತೆ, ತೊನ್ನು ರೋಗ ಗುಣಪಡಿಸಲಾಗದ ಹಂತ ಮತ್ತು ತೀಕ್ಷ್ಣವಾಗಿರುವುದು, ಗಮನಾರ್ಹ ಗುಹ್ಯರೋಗ, ಗೃಹಹಿಂಸೆ ಮುಂತಾದ ಕಾರಣಗಳಿಗೆ ಈ ಹಿಂದೆ ವಿಚ್ಛೇದನ ದೊರಕುತ್ತಿತ್ತು. ಆದರೆ ಪ್ರಸಕ್ತ ಸರಕಾರವು ಉದ್ದೇಶಿಸಿರುವ ತಿದ್ದುಪಡಿ ಕಾನೂನಿನ ರೂಪ ಪಡೆದುಕೊಂಡಲ್ಲಿ ಮೇಲೆ ಹೇಳಲಾದ ಎರಡು ಕಾರಣಗಳು ವಿಚ್ಛೇದನಕ್ಕೆ ಇರಬೇಕಾದ ಕಾರಣಪಟ್ಟಿಗೆ ಸೇರ್ಪಡೆಯಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ