ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೆತ್ತವರ ನಿರ್ಲಕ್ಷಿಸುವ ಮಕ್ಕಳನ್ನು ಜೈಲಿಗೆ ಹಾಕಲು ಕಾನೂನು! (Rajasthan | neglecting parents | Welfare of Parents | Senior Citizens)
Bookmark and Share Feedback Print
 
ಅವಿಭಕ್ತ ಕುಟುಂಬಗಳು ಈಗ ಎಲ್ಲೆಲ್ಲೋ ಹಂಚಿ ಹರಿದು ಹೋಗಿವೆ, ಹೋಗುತ್ತಿವೆ. ಇಂತಹ ಸಂದರ್ಭಗಳಲ್ಲಿ ಹೆತ್ತವರು ನಿರ್ಲಕ್ಷ್ಯಕ್ಕೊಳಗಾಗುವ ಸಾಧ್ಯತೆಗಳೇ ಹೆಚ್ಚು. ತಮ್ಮ ಆಧುನಿಕ ಜೀವನ ಶೈಲಿಗೆ ಹೊಂದಿಕೊಳ್ಳದ ಹೆತ್ತವರನ್ನು ಬೀದಿಪಾಲು ಮಾಡುವ ಹತ್ತುಹಲವು ಪ್ರಕರಣಗಳನ್ನು ಬಹುತೇಕರು ಕೇಳಿ-ನೋಡಿಯಾಗಿದೆ.

ಅಂತಹ ಪ್ರಕರಣಗಳಿಗೆ ಕಡಿವಾಣ ಹಾಕಿ, ವೃದ್ಧ ಹೆತ್ತವರ ಕೈ ಹಿಡಿಯಲು ಮುಂದಾಗಿರುವುದು ರಾಜಸ್ತಾನ ಸರಕಾರ. ಅಪ್ಪ-ಅಮ್ಮ ಅಥವಾ ಪೋಷಕರನ್ನು ನಿರ್ಲಕ್ಷಿಸುವ ಮಕ್ಕಳಿಗೆ ಬುದ್ಧಿ ಕಲಿಸುವ ನೀತಿಯನ್ನು ಜಾರಿಗೆ ತರುವುದಾಗಿ ಹೇಳಿದೆ.
WD

ತಮ್ಮ ಹೆತ್ತವರನ್ನು ನಿರ್ಲಕ್ಷಿಸಿ ಬೀದಿಗೆ ತಳ್ಳಿರುವುದು ರುಜುವಾತಾದರೆ ಅವರ ನಿರ್ವಹಣೆಗಾಗಿ ತಿಂಗಳ ಭತ್ಯೆ ನೀಡುವುದು ಕಡ್ಡಾಯ. ಅದಕ್ಕೆ ತಪ್ಪಿದಲ್ಲಿ ಮೂರು ತಿಂಗಳು ಜೈಲಿನಲ್ಲಿ ಕಳೆಯಲು ಸಿದ್ಧರಾಗಬೇಕು. ಅಂತಹ ಕಠಿಣ ನೀತಿಯನ್ನು ರಾಜಸ್ತಾನ ಸರಕಾರ ಜಾರಿಗೆ ತರುತ್ತಿದೆ.

ಹೆತ್ತವರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕ್ಷೇಮಾಭ್ಯುದಯ ಕಾಯ್ದೆಗೆ ಮುಖ್ಯಮಂತ್ರಿ ಕಚೇರಿಯಲ್ಲಿ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಅಂಗೀಕಾರ ದೊರೆತಿದೆ. ಇದನ್ನು ವಿಧಾನಸಭೆಯಲ್ಲಿ ಶೀಘ್ರವೇ ಮಂಡಿಸಲಾಗುತ್ತದೆ. ನಂತರ ಅದು ಕಾನೂನಿನ ರೂಪ ಪಡೆಯಲಿದೆ.

ಹಿರಿಯ ನಾಗರಿಕರ ಪೋಷಣೆಗಾಗಿ ಕಾಲದಿಂದ ಕಾಲಕ್ಕೆ ತಿಂಗಳ ಭತ್ಯೆಯನ್ನು ನೀಡಬೇಕು ಎಂದು ಅವರ ಅವಲಂಬಿತರು ಅಥವಾ ಮಕ್ಕಳಿಗೆ ಈ ಕುರಿತು ರಚಿಸಲಾಗುವ ನ್ಯಾಯಾಧಿಕರಣವು ಆದೇಶ ನೀಡುವ ಅಧಿಕಾರ ಹೊಂದಿರುತ್ತದೆ ಎಂದು ಸರಕಾರದ ವಕ್ತಾರರು ಕಾಯ್ದೆಯ ಕುರಿತು ಮಾಹಿತಿ ನೀಡಿದ್ದಾರೆ.

ರಾಜ್ಯ ಸರಕಾರವು ನಿಗದಿಪಡಿಸುವ ಮೊತ್ತವನ್ನು ಪ್ರತಿ ತಿಂಗಳು 10,000 ರೂಪಾಯಿಗಳನ್ನು ಮೀರದಂತೆ ಹೆತ್ತವರಿಗೆ ಭತ್ಯೆ ರೂಪದಲ್ಲಿ ಪೋಷಣೆಗಾಗಿ ನೀಡಬೇಕಾಗುತ್ತದೆ.

ಹೆತ್ತವರ ನಿರ್ಲಕ್ಷ್ಯ, ಹೆತ್ತವರನ್ನು ಪೋಷಿಸಲು ನಿರಾಕರಿಸುವುದು, ಅವರನ್ನು ನಿರ್ಗತಿಕರನ್ನಾಗಿ ಮಾಡುವುದು ಸೇರಿದಂತೆ ಹೆತ್ತವರ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಅವರ ಮಕ್ಕಳು ಅಥವಾ ಆಶ್ರಿತರು ನಡೆದುಕೊಳ್ಳುವ ಅಮಾನವೀಯ ರೀತಿಗೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 5,000 ರೂಪಾಯಿಗಳವರೆಗೆ ದಂಡ ವಿಧಿಸುವ ನೀತಿಗಳನ್ನು ಈ ಮಸೂದೆ ಹೊಂದಿದೆ.
ಸಂಬಂಧಿತ ಮಾಹಿತಿ ಹುಡುಕಿ