ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಾತನನ್ನು ಮರಕ್ಕೆ ತೂಗು ಹಾಕಿ ಹಿಂಸಿಸಿದವರೂ ಪೊಲೀಸರೇ? (Dholpur | Rajasthan police | Jaidev | bawariya gang)
Bookmark and Share Feedback Print
 
ಈ ಪೊಲೀಸರೇ ಹೀಗೆ, ಖಾಕಿ ಮೈಮೇಲೇರಿದ ಕೂಡಲೇ ದೆವ್ವ ಬಡಿದಂತಾಡುವವರು, ಹಿಟ್ಲರ್ ಸಂತತಿಯವರು ಎಂದೆಲ್ಲ ದಿನಾ ಬಯ್ಯುತ್ತೇವೆ. ಇವರನ್ನು ನಿಯಂತ್ರಿಸಲು ಮಾನವ ಹಕ್ಕುಗಳ ಆಯೋಗ ಮತ್ತು ಸಂಘಟನೆಗಳು ಶತಯತ್ನ ನಡೆಸುತ್ತವೆ. ಆದರೂ ಅಮಾನವೀಯ ಕೃತ್ಯಗಳು ಮಾತ್ರ ನಿಲ್ಲುತ್ತಿಲ್ಲ.

ಇದೀಗ ಬಹಿರಂಗವಾಗಿರುವ ಪ್ರಕರಣವೂ ಅದೇ ಸಾಲಿಗೆ ಸೇರುವಂತದ್ದು. 75ರ ವೃದ್ಧನೊಬ್ಬನನ್ನು ಮರಕ್ಕೆ ನೇತು ಹಾಕಿದ ಪೊಲೀಸರು ಮನಸೋ ಇಚ್ಛೆ ಹಿಂಸಿಸಿದ್ದನ್ನು ಸ್ಥಳೀಯ ಛಾಯಾಚಿತ್ರಗಾರನೊಬ್ಬ ಸೆರೆ ಹಿಡಿದ ನಂತರ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಇದು ನಡೆದಿರುವುದು ರಾಜಸ್ತಾನದ ಧೋಲ್ಪುರ್ ಎಂಬಲ್ಲಿ. ಮಾರ್ಚ್ 27ರಂದು ಇಲ್ಲಿನ ಗ್ಯಾರೇಜ್ ಒಂದರಲ್ಲಿ 1.5 ಲಕ್ಷ ರೂಪಾಯಿ ದರೋಡೆ ನಡೆದಿತ್ತು. ಇಲ್ಲಿದ್ದ ಮೊಬೈಲ್ ಫೋನನ್ನೂ ದರೋಡೆಕೋರರು ಹೊತ್ತೊಯ್ದಿದ್ದರು. ಇದೇ ಆಧಾರದಲ್ಲಿ (ಮೊಬೈಲ್ ಐಎಂಐ) ಪೊಲೀಸರು ಬಲೆ ಬೀಸಿ ವೃದ್ಧ ಜೈದೇವ್ ಅವರನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ ಇಲ್ಲಿನ 'ಬಾವಾರಿಯಾ ಗ್ಯಾಂಗ್' ನಾಯಕ ಈ 75ರ ವೃದ್ಧ. ಇವರ ಜತೆ ಇತರ 12 ಮಂದಿಯನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಜೈದೇವ್ ಮತ್ತು ಇನ್ನೊಬ್ಬ ವ್ಯಕ್ತಿಗೆ ಮಾತ್ರ ಈ ರೀತಿ ಚಿತ್ರಹಿಂಸೆ ನೀಡಲಾಗಿದೆ.

ಸತ್ಯ ಬಾಯ್ಬಿಡಿಸಲು ಪೊಲೀಸರು ಏನೇನೋ ತಂತ್ರಗಳನ್ನು ಬಳಸುವುದು ಗೊತ್ತೇ ಇದೆ. ಅದೇ ರೀತಿ ಈ ಇಳಿ ವಯಸ್ಸಿನ ವ್ಯಕ್ತಿಯ ಕೈಗಳನ್ನು ಹಿಂದಿನಿಂದ ಕಟ್ಟಿ, ಠಾಣೆಯ ಆವರಣದಲ್ಲೇ ಇದ್ದ ಮರಕ್ಕೆ ನೇತು ಹಾಕಿದ್ದರು. ಪೊಲೀಸರ ದುರದೃಷ್ಟವೆಂದರೆ, ಇಲ್ಲೇ ಇದ್ದ ಫೋಟೋಗ್ರಾಫರ್ ಜಿತೇಂದ್ರ ಎಂಬಾತ ಇದನ್ನು ಕ್ಲಿಕ್ಕಿಸಿದ್ದ.

ಮಾಧ್ಯಮಗಳಲ್ಲಿ ಚಿತ್ರಸಹಿತ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಪೊಲೀಸರು ತೇಪೆ ಹಚ್ಚಲು ಯತ್ನಿಸಿದ್ದಾರೆ. ಜೈದೇವ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗಿದೆ.

ಪ್ರಕರಣ ತಿಳಿಯುತ್ತಿದ್ದಂತೆ ಅಚ್ಚರಿ ವ್ಯಕ್ತಪಡಿಸಿರುವ ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿಯವರು ಸ್ಥಳೀಯ ಪೊಲೀಸ್ ಠಾಣೆಯ ಮುಖ್ಯಸ್ಥ ರಾಜೇಂದ್ರ ಕಾವಿಯಾ ಅವರನ್ನು ಅಮಾನತುಗೊಳಿಸಿ, ಆದೇಶ ಹೊರಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ