ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇಶದಲ್ಲಿದ್ದಾರೆ ಕೋಟ್ಯಂತರ ಬಾಂಗ್ಲಾ ಅಕ್ರಮ ವಲಸಿಗರು..! (Bangladesh | India | Uttar Pradesh | Illegal migrants)
Bookmark and Share Feedback Print
 
ಬಾಂಗ್ಲಾದೇಶ ಪ್ರಜೆಗಳು ಕೋಟಿಗಳ ಲೆಕ್ಕದಲ್ಲಿ ಭಾರತಕ್ಕೆ ಅಕ್ರಮವಾಗಿ ವಲಸೆ ಬರುತ್ತಿದ್ದರೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಸುಮ್ಮನೆ ಕುಳಿತಿದೆ ಎಂಬ ಬಿಜೆಪಿ ಆರೋಪವೇನೂ ಸಂಪೂರ್ಣ ಹುರುಳಿಲ್ಲದ್ದಲ್ಲ. ರಾಜ್ಯ ಸರಕಾರಗಳು ತಮ್ಮ ಪ್ರಯತ್ನದಿಂದ ಈಗಾಗಲೇ ಹಲವು ಮಂದಿಯನ್ನು ಹೊರ ನೂಕಲು ಯತ್ನಿಸಿದೆಯಾದರೂ, ಕೇಂದ್ರದ ಇಚ್ಛಾಶಕ್ತಿಯ ಕೊರತೆಯಿಂದ ಇದು ಸಂಪೂರ್ಣ ಯಶಸ್ವಿಯಾಗಿಲ್ಲ.

ಗಡಿಭಾಗದಲ್ಲಿರುವ ಭಾರತದ ರಾಜ್ಯಗಳಾದ ಪಶ್ಚಿಮ ಬಂಗಾಲ, ತ್ರಿಪುರಾ, ಮಿಜೋರಾಂ, ಮೇಘಾಲಯ, ಅಸ್ಸಾಂ ಮೂಲಕ ಅಕ್ರಮವಾಗಿ ಬಾಂಗ್ಲಾದೇಶದ ಪ್ರಜೆಗಳು ಸವಲತ್ತಿನ ಲಾಭಕ್ಕಾಗಿ ವಲಸೆ ಬರುತ್ತಿದ್ದಾರೆ. ದೇಶದಲ್ಲಿ ಸರಿಸುಮಾರು ಎರಡು ಕೋಟಿ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂದು ಈ ಹಿಂದೆ 2003ರಲ್ಲಿ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

ಮೊದಲೇ ಜನಸಂಖ್ಯಾ ಹೆಚ್ಚಳದಿಂದ ಸಂಪನ್ಮೂಲ ಕೊರತೆಯನ್ನೆದುರಿಸುತ್ತಿರುವ ಭಾರತ, ಪಕ್ಕದ ರಾಷ್ಟ್ರದ ವಲಸಿಗರ ಪುನಶ್ಚೇತನಕ್ಕೂ ಯತ್ನಿಸಬೇಕಾದ ಅನಿವಾರ್ಯತೆಯಲ್ಲಿದೆ. ಪರಿಣಾಮ ದೇಶದ ನಿಜವಾದ ಪ್ರಜೆಗಳು ವಂಚನೆಗೊಳಗಾಗುತ್ತಿದ್ದಾರೆ. ಆದರೂ ಕೇಂದ್ರ ಈ ಬಗ್ಗೆ ಗಂಭೀರವಾಗಿ ಚಿಂತಿಸದೆ, ಮೃದು ನೀತಿ ಅನುಸರಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.

ನಿನ್ನೆಯಷ್ಟೇ ಈ ಕುರಿತು ಬಾಂಗ್ಲಾ ಗಡಿಯಿಂದ ದೂರದಲ್ಲಿರುವ ಉತ್ತರ ಪ್ರದೇಶ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ರಾಜ್ಯದಲ್ಲಿ ಸುಮಾರು 8,500 ಬಾಂಗ್ಲಾದೇಶೀಯರು ಅಕ್ರಮವಾಗಿ ವಾಸಿಸುತ್ತಿದ್ದಾರೆ.

ಸುಮಾರು 6,000 ಮಂದಿ ಮೀರತ್‌ನಲ್ಲಿಯೂ, 1,800 ಮಂದಿ ಲಕ್ನೋದಲ್ಲಿಯೂ ಹಾಗೂ 350 ಮಂದಿ ನೋಯ್ಡಾದಲ್ಲಿಯೂ ವಾಸಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಗೃಹ ಕಾರ್ಯದರ್ಶಿ ದೀಪಕ್ ಕುಮಾರ್ ವಿವರಣೆ ನೀಡಿದ್ದಾರೆ.

ಅವರಲ್ಲಿ ಈ ವರ್ಷ ಸುಮಾರು 57 ಮಂದಿಯನ್ನು ಬಂಧಿಸಲಾಗಿದೆ. ಮೇ ತಿಂಗಳ ಅಂತ್ಯದವರೆಗೆ 18 ಮಂದಿಯನ್ನು ಮರಳಿ ಬಾಂಗ್ಲಾಕ್ಕೆ ಗಡೀಪಾರು ಮಾಡಲಾಗಿದೆ. ಉಳಿದವರು ಇನ್ನೂ ರಾಜ್ಯದಲ್ಲಿ ಭಾರತದ ಪ್ರಜೆಗಳಂತೆ ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ. ಹಲವರು ಸರಕಾರಿ ಗುರುತು ಚೀಟಿಗಳನ್ನು ಪಡೆಯುವಲ್ಲಿಯೂ ಸಫಲರಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ