ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನ್ನ ತಂದೆ ಪಾಕಿಸ್ತಾನದಲ್ಲೇ ಇದ್ದಾರೆ: ದಾವೂದ್ ಪುತ್ರಿ (Dawood Ibrahim | Karachi | Facebook | Mahrukh Ibrahim)
Bookmark and Share Feedback Print
 
ಕುಖ್ಯಾತ ಕ್ರಿಮಿನಲ್ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ನೆಲೆಸಿದ್ದಾನೆ ಎಂದು ಆತನ ಪುತ್ರಿ ಸಾಮಾಜಿಕ ಸಂಪರ್ಕತಾಣ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ಬಹಿರಂಗಪಡಿಸಿದ್ದಾಳೆ.

ಪಾಕಿಸ್ತಾನವು ದಾವೂದ್ ಇಬ್ರಾಹಿಂ ವಾಸಸ್ಥಾನದ ಬಗ್ಗೆ ತನ್ನಲ್ಲಿ ಯಾವುದೇ ಮಾಹಿತಿಯಿಲ್ಲ ಎಂದು ಆಗಿಂದಾಗ್ಗೆ ಹೇಳುತ್ತಾ ಬಂದಿದೆ. ಆದರೆ ದಾವೂದ್ ಪುತ್ರಿ ಮಹ್ರೂಖ್ ಇಬ್ರಾಹಿಂ ಮೇ ಐದರಂದು ತನ್ನ ಪ್ರೊಫೈಲ್‌ನಲ್ಲಿ ತನ್ನ ತಂದೆಯ ವಾಸಸ್ಥಾನದ ಮಾಹಿತಿ ನೀಡಿದ್ದಾಳೆ.

'ಅಮ್ಮ, ಅಪ್ಪ, ಜುನೈದ್, ರೀಂಜ್, ಮೊಯೀನ್ ಮತ್ತು ಮಾಜಿಯಾ ಸೇರಿದಂತೆ ಕರಾಚಿಯಲ್ಲಿನ ಪ್ರತಿಯೊಬ್ಬರನ್ನೂ ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ಆಕೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ಹೇಳಿದ್ದಾಳೆ.

ಪಾಕಿಸ್ತಾನದ ಕ್ರಿಕೆಟ್ ಆಟಗಾರ ಜಾವೇದ್ ಮಿಯಾಂದಾದ್ ಪುತ್ರ ಜುನೈದ್‌ನನ್ನು ಮದುವೆಯಾಗಿರುವ ಮಹ್ರೂಖ್ ವರದಿಗಳ ಪ್ರಕಾರ ಲಾಹೋರ್‌ನಲ್ಲಿ ನೆಲೆಸಿದ್ದಾಳೆ.

ತಾನು ಕರಾಚಿಯಲ್ಲಿನ ಕ್ಲಿಫ್ಟಾನ್‌ನಲ್ಲಿ ಶಾಲೆಗೆ ಹೋಗಿದ್ದೆ ಎಂದೂ ಆಕೆ ಹೇಳಿಕೊಂಡಿದ್ದು, ಭಾರತೀಯ ತನಿಖಾ ದಳಗಳು ಕೂಡ ದಾವೂದ್ ಕರಾಚಿಯಲ್ಲಿನ ಕ್ಲಿಫ್ಟಾನ್‌ನಲ್ಲಿ ವಾಸಿಸುತ್ತಿದ್ದಾನೆ ಎಂದು ಹೇಳುತ್ತಾ ಬಂದಿವೆ.

ಫೇಸ್‌ಬುಕ್ ಖಾತೆಯಲ್ಲಿ ಮಹ್ರೂಖ್ ಮತ್ತು ಜುನೈದ್ ಜತೆಯಾಗಿ ತೆಗೆಸಿಕೊಂಡಿರುವ ಹಲವು ಭಾವಚಿತ್ರಗಳನ್ನೂ ಹಾಕಲಾಗಿದೆ. ಜಗತ್ತಿನಾದ್ಯಂತದಿಂದ ತಾನು 250 ಫೇಸ್‌ಬುಕ್ ಸ್ನೇಹಿತರನ್ನು ಹೊಂದಿರುವುದು ಕೂಡ ಇಲ್ಲಿ ದಾಖಲಾಗಿದೆ.

ವಿಚಾರ ಬಹಿರಂಗವಾಗುತ್ತಿದ್ದಂತೆ ಮಹ್ರೂಖ್ ಖಾತೆಯನ್ನು ಶುಕ್ರವಾರ ಬದಲಾವಣೆ ಮಾಡಲಾಗಿದ್ದು, ಫೇಸ್‌ಬುಕ್‌ನಲ್ಲಿ ಹಾಕಲಾಗಿರುವ ಚಿತ್ರಗಳನ್ನು ಬ್ಲಾಕ್ ಮಾಡಲಾಗಿದೆ. ಈ ಹಿಂದೆ ಆಕೆಯ ಪ್ರೊಫೈಲನ್ನು ಫೇಸ್‌ಬುಕ್‌ನಲ್ಲಿ ಖಾತೆ ಹೊಂದಿರುವ ಯಾರು ಬೇಕಾದರೂ ವೀಕ್ಷಿಸಬಹುದಾಗಿತ್ತು.

ಮಹ್ರೂಖ್ ಫೇಸ್‌ಬುಕ್ ಖಾತೆಯ ಕುರಿತು ನಮಗೆ ತಿಳಿದಿದೆ ಎಂದು ಭಾರತೀಯ ಬೇಹುಗಾರಿಕಾ ಇಲಾಖೆ ಮೂಲಗಳು ಹೇಳಿಕೊಂಡಿವೆ.

ದಾವೂದ್ ಪಾಕಿಸ್ತಾನದ ಕರಾಚಿಯಲ್ಲಿ ಎರಡು ಮನೆಗಳನ್ನು ಹೊಂದಿದ್ದಾನೆ ಎಂದು ಭಾರತ ಹೇಳುತ್ತಾ ಬಂದಿದೆ. ಅವುಗಳ ವಿಳಾಸಗಳು ಹೀಗಿವೆ. 1) ಮನೆ ನಂಬರ್ 37, 30ನೇ ಸ್ಟ್ರೀಟ್, ಡಿಎಚ್ಎ, ಕರಾಚಿ. 2) ವೈಟ್ ಹೌಸ್, ಸೌದಿ ಮಸೀದಿ ಸಮೀಪ, ಕ್ಲಿಫ್ಟಾನ್, ಕರಾಚಿ.
ಸಂಬಂಧಿತ ಮಾಹಿತಿ ಹುಡುಕಿ