ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಇಷ್ಟು ಕೀಳುಮಟ್ಟಕ್ಕೆ ಇಳಿಯುವುದೇ?:ನಿತೀಶ್ ಕಿಡಿ (Nitish Kumar | Bihar | Gujarat | Narendra Modi | advertisement)
Bookmark and Share Feedback Print
 
PTI
ಬಿಹಾರದ ಸ್ಥಳೀಯ ಪತ್ರಿಕೆಗಳಿಗೆ ಗುಜರಾತ್ ನೀಡಿರುವ ಜಾಹೀರಾತುಗಳು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದು, ಕೋಶಿ ಪ್ರವಾಹದ ವೇಳೆ ಬಿಹಾರಕ್ಕೆ ಉದಾರ ದೇಣಿಗೆ ನೀಡಲಾಗಿದೆ ಎಂದು ಗುಜರಾತ್ ಹೇಳಿಕೊಂಡಿರುವುದು ಹಾಗೂ ಮುಖ್ಯಮಂತ್ರಿ ಮೋದಿ ಜೊತೆ ನಿತೀಶ್ ಇರುವ ಫೋಟೋ ಜಾಹೀರಾತಿನ ಬಗ್ಗೆ ಕೆಂಡಕಾರಿದ್ದಾರೆ. ಅಲ್ಲದೇ ಬಿಜೆಪಿ ಕಾರ್ಯಕಾರಿಣಿ ಸಭೆ ಸಂದರ್ಭ ನಿತೀಶ್ ಆಯೋಜಿಸಿದ್ದ ಡಿನ್ನರ್ ಪಾರ್ಟಿಯನ್ನೇ ರದ್ದುಪಡಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಮುಸ್ಲಿಮರ ವೋಟ್‌ಬ್ಯಾಂಕ್ ಕಬಳಿಸಲು ಯೋಜಿಸಿರುವ ಜೆಡಿಯುನ ನಿತೀಶ್ ಕುಮಾರ್, ಮೋದಿ ಜತೆಗೆ ತಮ್ಮ ಭಾವಚಿತ್ರ ಪ್ರಕಟಿಸಲು ಅನುಮತಿ ಪಡೆದಿಲ್ಲ. ಈ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ನಿತೀಶ್ ಗುಡುಗಿದ್ದಾರೆ. ದೇಣಿಗೆ ನೀಡಿರುವ ಬಗ್ಗೆ ಜಾಹೀರಾತು ನೀಡಿರುವುದನ್ನು ಅನಾಗಕರಿಕ ಕ್ರಮ ಎಂದು ವಾಗ್ದಾಳಿ ನಡೆಸಿದ್ದು, ಗುಜರಾತ್ ನೀಡಿರುವ ದೇಣಿಗೆಯನ್ನು ವಾಪಸ್ ನೀಡಲಾಗುವುದು ಎಂದು ಕಿಡಿಕಾರಿದ್ದಾರೆ.

ಈ ಸಂದರ್ಭದಲ್ಲಿ ಇಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಆಗಮಿಸುವ ಬಿಜೆಪಿ ಮುಖಂಡರಿಗೆ ನಿತೀಶ್ ಕುಮಾರ್ ಡಿನ್ನರ್ ಪಾರ್ಟಿ ಆಯೋಜಿಸಿದ್ದರು. ಆದರೆ ಮೋದಿಯ ಅಗ್ಗದ ಪ್ರಚಾರ ತಂತ್ರದ ಜಾಹೀರಾತು ವಿವಾದದಿಂದ ಕಿಡಿಕಿಡಿಯಾದ ನಿತೀಶ್ ಡಿನ್ನರ್ ಪಾರ್ಟಿಯನ್ನು ರದ್ದುಗೊಳಿಸಿದ್ದಾರೆ.

ಗುಜರಾತಿನ ಆಡಳಿತರೂಢ ಮೋದಿ ಸರ್ಕಾರ ಅನಾಗರಿಕವಾದದ್ದು ಎಂದು ಬಣ್ಣಿಸಿರುವ ನಿತೀಶ್, ಒಂದು ರಾಜ್ಯಕ್ಕೆ ನೆರವು ಕೊಟ್ಟು ಆ ರಾಜ್ಯದ ಮುಖ್ಯಮಂತ್ರಿಯ ಫೋಟೋ ಹಾಕಿಕೊಂಡು ತಾನು ಅಭಿವೃದ್ಧಿಯ ಹರಿಕಾರ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ. ತನ್ನ ಫೋಟೋ ಹಾಕಿಕೊಳ್ಳುವ ಬಗ್ಗೆ ಅನುಮತಿಯನ್ನೂ ಪಡೆದಿಲ್ಲ ಎಂದಿರುವ ಅವರು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ