ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮದರಸದಲ್ಲಿ ಲೈಂಗಿಕ ಕಿರುಕುಳ: ಮೌಲ್ವಿ ವಿರುದ್ಧ ದೂರು (madrasa | Maulvi | Mahebub Malek | molesting | minor girl)
Bookmark and Share Feedback Print
 
ಮದರಸದಲ್ಲಿ ಏಳರ ಹರೆಯದ ಹುಡುಗಿಯರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮೌಲ್ವಿ ವಿರುದ್ಧ ಕೋಲಾಂಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಮದರಸದಲ್ಲಿ ಏಳರ ಹರೆಯದ ಇಬ್ಬರು ಬಾಲಕಿಯರಲ್ಲಿ ಮೌಖಿಕ ಲೈಂಗಿಕಕ್ಕಾಗಿ ಒತ್ತಾಯಿಸಿರುವುದಾಗಿ ಆರೋಪಿಸಿ ಮೌಲ್ವಿ ಮಾಹೆಬೂಬ್ ಮಲಿಕ್ ವಿರುದ್ಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿರುವುದಾಗಿ ಹೇಳಿದ್ದಾರೆ.

ಮೌಲ್ವಿಯ ಲೈಂಗಿಕ ಕಿರುಕುಳದಿಂದ ರೋಸಿಹೋದ ಬಾಲಕಿಯೊಬ್ಬಳು ತನ್ನ ಪೋಷಕರಲ್ಲಿ ಹೇಳಿಕೊಂಡ ನಂತರ ಆತನ ನಿಜಬಣ್ಣ ಬಯಲಾಗಿತ್ತು. ಆತ ಮದರಸದಲ್ಲಿ ಮೌಖಿಕ ಸೆಕ್ಸ್‌ಗೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದನಂತೆ. ಅಲ್ಲದೇ ಈ ವಿಷಯವನ್ನು ಯಾರಲ್ಲಿ ಬಾಯ್ಬಿಟ್ಟರೆ ಎಚ್ಚರ ಎಂಬುದಾಗಿಯೂ ಬೆದರಿಕೆ ಒಡ್ಡಿದ್ದ. ಕಳೆದ ಕೆಲವು ತಿಂಗಳಿನಿಂದ ಈ ಮೌಲ್ವಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆಕೆ ದೂರಿದ್ದಾಳೆ.

ಲೈಂಗಿಕ ಕಿರುಕುಳಕ್ಕೆ ಒಳಗಾದ ಬಾಲಕಿಯರನ್ನು ಹಲವು ಬಾರಿ ತನಿಖೆ ನಡೆಸಿದ ನಂತರ ಮಲಿಕ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಇದೀಗ ಮಾನ್‌ಗ್ರೋಲ್ ತಾಲೂಕಿನ ನಾನಿ ನಾರೋಲಿ ಗ್ರಾಮದ ಮೌಲ್ವಿ ಮಲಿಕ್ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ