ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೋನಿಯಾ ಮೇಡಂ ಬಾಯ್ಬಿಡಿ-ಸಾವಿನ ವ್ಯಾಪಾರಿ ಯಾರು?: ಮೋದಿ (maut ka saudagar | Sonia Gandhi | Bhopal gas tragedy | Narendra Modi)
Bookmark and Share Feedback Print
 
PTI
ಭೋಪಾಲ್ ಅನಿಲ ದುರಂತದ ಸತ್ಯಾಂಶವನ್ನು ಹೊರಹಾಕಿ, ಪ್ರಕರಣದ ಪ್ರಮುಖ ಆರೋಪಿಯನ್ನು ದೇಶದಿಂದ ಹೊರಹೋಗಲು ಬಿಟ್ಟವರು ಯಾರು? ಸಾವಿರಾರು ಜನರ ಸಾವಿಗೆ ಕಾರಣದ ದಲ್ಲಾಳಿ ಯಾರು? ನಾನೋ....ನೀವೋ...ಸೋನಿಯಾ ಮೇಡಂ ಯಾಕೆ ಮೌನವಾಗಿದ್ದೀರಿ...ಹೀಗೆಂದು ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ವರಿಷ್ಠೆಯನ್ನು ತರಾಟೆಗೆ ತೆಗೆದುಕೊಂಡದ್ದು ಗುಜರಾಜ್ ಮುಖ್ಯಮಂತ್ರಿ ನರೇಂದ್ರ ಮೋದಿ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಭೋಪಾಲ್ ಅನಿಲ ದುರಂತದ ಪ್ರಮುಖ ರೂವಾರಿಯಾಗಿರುವ ವಾರ್ರೆನ್ ಆಂಡರ್ಸನ್‌ನನ್ನು ಬಂಧಮುಕ್ತಗೊಳಿಸಿದ ಪ್ರಕರಣದ ಸಂಬಂಧ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಕಾಂಗ್ರೆಸ್ ಕೆಲ ನಾಯಕರ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸೋನಿಯಾ ಗಾಂಧಿ ಅವರನ್ನೇ ಸಾವಿನ ವ್ಯಾಪಾರಿ ಯಾರು ಎಂದು ಪ್ರಶ್ನಿಸಿದ್ದಾರೆ.

ಇಲ್ಲಿ ನಡೆಯುತ್ತಿರುವ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯ ಸ್ವಾಭಿಮಾನ್ ರಾಲಿಯನ್ನು ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಿದರು.

2002ರ ಗುಜರಾತ್ ನರಮೇಧಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಅವರು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿಯನ್ನು ಸಾವಿನ ವ್ಯಾಪಾರಿ (ಮೌತ್ ಕಾ ಸೌದಾಗರ್) ಎಂದು ಬಣ್ಣಿಸಿದ್ದರು. ಈ ಹೇಳಿಕೆ ತೀವ್ರ ವಿವಾದಕ್ಕೂ ಕಾರಣವಾಗಿತ್ತು.ಇದೀಗ ಭೋಪಾಲ್ ಅನಿಲ ದುರಂತ ಕುರಿತಂತೆ ಸೋನಿಯಾ ಆರೋಪದಂತೆ ಅವರಿಗೆ ತಿರುಗೇಟು ನೀಡಿದ್ದಾರೆ.ಭೋಪಾಲ್ ಅನಿಲ ದುರಂತ ಕುರಿತಂತೆ ವ್ಯಾಪಕ ಚರ್ಚೆ, ವಿವಾದ ನಡೆಯುತ್ತಿದ್ದರೂ ಕೂಡ ಸೋನಿಯಾಗಾಂಧಿ ಮಾತ್ರ ಮೌನವಾಗಿದ್ದಾರೆ. ಇದಕ್ಕೆ ಕಾರಣವೇನು? ಎಂದು ಪ್ರಶ್ನಿಸಿದರು.

1984ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ದುರಂತದಲ್ಲಿ ಕೆಲವು ಸಾವಿರ ಅಮಾಯಕ ಜನರು ಸಾವನ್ನಪ್ಪಿದ್ದಾರೆ. ಆ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿ ಅಧಿಕಾರದ ಗದ್ದುಗೆಯಲ್ಲಿ ಇದ್ದದ್ದು ಕಾಂಗ್ರೆಸ್ ಪಕ್ಷ. ಅಷ್ಟೆಲ್ಲಾ ಆದ ಮೇಲೂ ಸುಮಾರು 26ವರ್ಷಗಳ ನಂತರ ನ್ಯಾಯಾಲಯದಿಂದ ತೀರ್ಪು ಹೊರಬಿದ್ದಿದೆ. ಆದರೂ ಕೂಡ ಸೋನಿಯಾಗಾಂಧಿ ಈ ವಿಷಯದಲ್ಲಿ ಮೌನಕ್ಕೆ ಶರಣಾಗಿದ್ದಾರೆ ಎಂದು ಮೋದಿ ಟೀಕಿಸಿದರು.
ಸಂಬಂಧಿತ ಮಾಹಿತಿ ಹುಡುಕಿ