ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುರುಷರು ಮಹಿಳೆಯರಲ್ಲಿ ಮೊದಲು ನೋಡೋದು ಎದೆಯಂತೆ! (Women | breasts | waist | hips)
Bookmark and Share Feedback Print
 
ಪುರುಷರು ತಮ್ಮ ಮುಖವನ್ನು ಕೊನೆಗೆ ನೋಡುತ್ತಾರೆ ಎಂದು ಮಹಿಳೆಯರು ಆಗಾಗ ದೂರುತ್ತಾ ಬಂದಿರುವುದು ಇದೀಗ ವೈಜ್ಞಾನಿಕವಾಗಿ ಸತ್ಯವೆಂಬುದು ಅಧ್ಯಯನವೊಂದರಿಂದ ಸಾಬೀತಾಗಿದೆ. ಅದರ ಪ್ರಕಾರ ಶೇ.47ರಷ್ಟು ಪುರುಷರು ಮೊದಲು ಕಣ್ಣು ಹಾಯಿಸುವುದು ಮಹಿಳೆಯರ ಎದೆಯತ್ತ!

ಶೇ.35ರಷ್ಟು ಮಂದಿ ಗಂಡಸರು ಮಹಿಳೆಯರಲ್ಲಿ ತಮ್ಮ ಮೊದಲ ನೋಟ ಬೀರುವುದು ಸೊಂಟ ಮತ್ತು ಪೃಷ್ಠದತ್ತ. ಶೇ.20 ಮಂದಿ ಮಾತ್ರ ಸ್ತ್ರೀಯರ ಮುಖದ ಮೇಲೆ ವ್ಯಾಮೋಹ ಹೊಂದಿದ್ದಾರೆ.
IFM

ಅಂದ ಹಾಗೆ ಪುರುಷರು ಮಹಿಳೆಯರ ಎದೆಯನ್ನು ಮಾತ್ರ ಹೆಚ್ಚಾಗಿ ಮೊದಲು ನೋಡುವುದಲ್ಲ. ದೇಹದ ಯಾವುದೇ ಭಾಗವು ವಿಸ್ತಾರವಾಗಿದ್ದರೆ ಅದರತ್ತಲೂ ಕಣ್ಣು ಹಾಯಿಸುತ್ತಾರೆ ಎಂದು ತಜ್ಞರು ಕಂಡುಕೊಂಡಿಡ್ದಾರೆ ಎಂದು ಇಂಗ್ಲೆಂಡ್‌ನ 'ಡೈಲಿ ಮೇಲ್' ತನ್ನ ವರದಿಯಲ್ಲಿ ತಿಳಿಸಿದೆ.

ಸಾಮಾನ್ಯ ಅಭಿಪ್ರಾಯದ ಪ್ರಕಾರ ಪುರುಷರು ಮಹಿಳೆಯರ ಎದೆಯತ್ತ ನೋಡುವ ಕಾರಣ ಅವರು ದೊಡ್ಡ ಎದೆಯನ್ನು ಅಥವಾ ಸಾಧಾರಣ ಎದೆಯನ್ನು ಹೊಂದಿರುವುದು. ಆದರೆ ಅಧ್ಯಯನಕಾರರ ಪ್ರಕಾರ ಪುರುಷರ ಕಾರಣಗಳು ಇವಲ್ಲ.

ಮಹಿಳೆಯರ ಎದೆಯ ಗಾತ್ರದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಖಾಸುಮ್ಮನೆ ತಮ್ಮ ಸಂತೋಷಕ್ಕಾಗಿಯಷ್ಟೇ ಪುರುಷರು ಮೊದಲು ಎದೆಯ ಭಾಗದತ್ತ ಹೆಚ್ಚಾಗಿ ನೋಡುತ್ತಾರೆ ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆಂದು 'ಡೈಲಿ ಟೆಲಿಗ್ರಾಫ್' ವರದಿ ಮಾಡಿದೆ.

ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್ ವಿಶ್ವವಿದ್ಯಾಲಯದ ಅಧ್ಯಯನಕಾರರು ಒಬ್ಬಳೇ ಮಹಿಳೆಯ ಆರು ಛಾಯಾಚಿತ್ರಗಳನ್ನು ಡಿಜಿಟಲ್ ತಂತ್ರಜ್ಞಾನ ಬಳಸಿ ಆಕೆಯ ಎದೆ, ಸೊಂಟ, ಪೃಷ್ಠ, ವಕ್ಷಸ್ಥಳ ಮುಂತಾದುವುಗಳ ಗಾತ್ರವನ್ನು ಕಿರಿದು ಅಥವಾ ಹಿರಿದು ಮಾಡಿ ಪುರುಷರನ್ನು ಪರೀಕ್ಷೆಗೊಳಪಡಿಸಿದ್ದರು.

ಈ ಸಂದರ್ಭದಲ್ಲಿ ಪುರುಷರು ಆ ಚಿತ್ರದ ಯಾವ ಭಾಗವನ್ನು ಮೊದಲು ಮತ್ತು ಎಷ್ಟು ಸುದೀರ್ಘ ಸಮಯ ನೋಡುತ್ತಾರೆ, ನಂತರ ಯಾವ ಭಾಗಕ್ಕೆ ಅವರ ಕಣ್ಣು ಹೋಗುತ್ತದೆ ಮುಂತಾದುವುಗಳನ್ನು ಕ್ಯಾಮರಾ ಮತ್ತು ಕನ್ನಡಿಗಳನ್ನು ಬಳಸಿ ದಾಖಲು ಮಾಡಿಕೊಳ್ಳಲಾಗಿತ್ತು.

ಅದರ ಪ್ರಕಾರ ಶೇ.80ರಷ್ಟು ಪುರುಷರು ಮೊದಲು ನೋಡುವುದು ಮಹಿಳೆಯ ಎದೆ ಮತ್ತು ವಕ್ಷಸ್ಥಳವನ್ನು. ಅವರು ಎದೆಯ ಭಾಗವನ್ನು ನೋಡಲು ಅತಿ ಹೆಚ್ಚು ಸಮಯವನ್ನು ವ್ಯಯಿಸುತ್ತಾರೆ. ನಂತರ ದೇಹ ಇತರ ಭಾಗಗಳತ್ತ ಗಮನ ಹರಿಸುತ್ತಾರೆ ಎಂಬ ನಿರ್ಧಾರಕ್ಕೆ ವಿಜ್ಞಾನಿಗಳು ಬಂದರು.
ಸಂಬಂಧಿತ ಮಾಹಿತಿ ಹುಡುಕಿ