ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರೀತ್ಸೋದು ತಪ್ಪಾ?: ಚಿತ್ರಹಿಂಸೆ ನೀಡಿ ಪ್ರೇಮಿಗಳ ಹತ್ಯೆ (Lover | mercy | Delhi | Swaroop Nagar | Honour killing)
Bookmark and Share Feedback Print
 
ದೇಶದಲ್ಲಿ ಮರ್ಯಾದಾ ಹತ್ಯೆ ಹೆಚ್ಚುತ್ತಿರುವ ಬಗ್ಗೆ ಮಾನವ ಹಕ್ಕುಗಳ ಸಂಘಟನೆಗೆ ಧ್ವನಿ ಎತ್ತುತ್ತಿರುವ ನಡುವೆಯೇ, ಅಂತಹ ಘಟನೆಗಳು ಮುಂದುವರಿದಿದ್ದು, ಅದಕ್ಕೆ ಸೇರ್ಪಡೆ ಎಂಬಂತೆ ರಾಜಧಾನಿಯ ಸ್ವರೂಪನಗರದ ಮನೆಯೊಂದರಲ್ಲಿ ಬೇರೆ ಜಾತಿಯವನನ್ನು ಪ್ರೇಮಿಸಿದ ಕಾರಣಕ್ಕೆ 19ರ ಹರೆಯದ ಯುವತಿ ಮತ್ತು 21ರ ಹರೆಯದ ಯುವಕನಿಗೆ ಚಿತ್ರಹಿಂಸೆ ನೀಡಿ ಇಬ್ಬರನ್ನೂ ವಿದ್ಯುತ್ ಶಾಕ್ ನೀಡಿ ಹತ್ಯೆಗೈದ ಭಯಾನಕ ಘಟನೆ ಸೋಮವಾರ ನಡೆದಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಆಶಾ(19) ಹಾಗೂ ಆಕೆಯ ಪ್ರಿಯಕರ ಯೋಗೇಶ್(21) ಎಂಬವರನ್ನು ಭೀಕರವಾಗಿ ಕೊಲೆ ಮಾಡಿದ್ದು, ಯುವತಿಯ ಪೋಷಕರು ಮತ್ತು ಚಿಕ್ಕಪ್ಪನೇ ಈ ದುಷ್ಕೃತ್ಯ ಎಸಗಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಘಟನೆಯ ನಂತರ ಯುವತಿಯ ಮನೆಯರುವ ಮತ್ತು ಚಿಕ್ಕಪ್ಪನ ಕುಟುಂಬದ ಸದಸ್ಯರು ನಾಪತ್ತೆಯಾಗಿದ್ದಾರೆಂದು ಮೂಲಗಳು ತಿಳಿಸಿವೆ.

ಮೂಲತಃ ಗೋಕುಲಪುರಿ ನಿವಾಸಿಗಳಾದ ಯುವ ಜೋಡಿ ಯುವತಿಯ ಚಿಕ್ಕಪ್ಪನನ್ನು ಭೇಟಿಯಾಗಲು ಸ್ವರೂಪನಗರದ ಮನೆಗೆ ಬಂದಾಗ ಈ ಘಟನೆ ನಡೆದಿದೆ.ಆಕೆಯ ಚಿಕ್ಕಪ್ಪನ ಮನೆಯಿಂದ ಕಿರುಚಾಡುತ್ತಿರುವ ಶಬ್ದ ಕೇಳಿಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಯುವತಿ ಯೋಗೇಶ್‌ನ್ನು ಬಿಡುವಂತೆ ಪರಿ, ಪರಿಯಾಗಿ ಕೇಳಿಕೊಂಡರೂ ಕೂಡ ಆಕೆಯ ಪೋಷಕರು ಮತ್ತು ಸಂಬಂಧಿಗಳು ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಇಬ್ಬರನ್ನೂ ಕೊಲೆ ಮಾಡಿರುವುದಾಗಿ ಸ್ಥಳೀಯ ನಿವಾಸಿ ಕಿರಣ್ ದೇವಿ ಮಾಧ್ಯಮವೊಂದಕ್ಕೆ ವಿವರಿಸಿದ್ದಾರೆ.

ಆಶಾ ಯೋಗೇಶ್‌ನನ್ನು ಪ್ರೀತಿಸುತ್ತಿದ್ದು, ಆತ ಆಕೆಯ ಜಾತಿಯವನಲ್ಲ ಎಂಬ ಕಾರಣಕ್ಕೆ ಮನೆಯವರು ತೀವ್ರ ವಿರೋಧಿಸಿದ್ದರು. ಅಲ್ಲದೇ ಯುವತಿಯ ಮನೆಯವರು ಶ್ರೀಮಂತರಾಗಿದ್ದು, ಆತ ತಮ್ಮ ಘನತೆಗೆ ತಕ್ಕುದಾದ ಯುವಕನಲ್ಲ ಎಂಬ ಕಾರಣಕ್ಕೆ ಈ ರೀತಿ ಹತ್ಯೆಗೈದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ