ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 66ರ ಅಜ್ಜಿಗೆ ತ್ರಿವಳಿ ಮಕ್ಕಳು, ಸಖತ್ ಖುಷಿಯಲ್ಲಿದ್ದಾರೆ ತಾತ! (Bhateri Devi | Haryana | Deva Singh | Madina village)
Bookmark and Share Feedback Print
 
70ರ ಹರೆಯದಲ್ಲಿ ಅಜ್ಜಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ ಖುಷಿಯನ್ನು ತನ್ನ 72ನೇ ವಯಸ್ಸಿನಲ್ಲೂ ಸಂತಸದಿಂದ ವಿವರಿಸಿದ ಸುದ್ದಿಯನ್ನು ನಿನ್ನೆಯಷ್ಟೇ ಇದೇ ವೆಬ್‌ಪತ್ರಿಕೆಯಲ್ಲಿ ನೋಡಿದ್ದೀರಿ. ಇದೀಗ 66ರ ಹರೆಯದ ಅಜ್ಜಿಯ ಸರದಿ. ಆ ಅಜ್ಜಿಯನ್ನು ಮೀರಿಸಿರುವ ಈ ಅಜ್ಜಿ ತ್ರಿವಳಿಗಳಿಗೆ ಜನ್ಮ ನೀಡಿದ್ದಾರೆ. ಮೊದಲ ಪತ್ನಿಯ ಕನಸು ನನಸಾಗಿರುವುದನ್ನು ಕಂಡ ತಾತನೂ ಹಣ್ಣಾದ ಮೀಸೆಯಡಿ ನಗುತ್ತಿದ್ದಾರೆ.

ಇದು ನಡೆದಿರುವುದು ಹರ್ಯಾಣದ ರೋಹ್ಟಕ್ ಎಂಬಲ್ಲಿನ ಮದೀನಾ ಗ್ರಾಮದಲ್ಲಿ. 1944ರ ಮೇ 21ರಂದು ಹುಟ್ಟಿದ್ದ ಭಾತೇರಿ ದೇವಿಯವರಿಗೆ ಇದುವರೆಗೂ ಮಕ್ಕಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ತಂತ್ರಜ್ಞಾನ ಐವಿಎಫ್ ನೆರವಿನಿಂದ (ಅಂಡಾಣುಗಳನ್ನು ಫಲಕಾರಿಯಾಗಿ ಬೆಳೆಸಿ ನಂತರ ಅಂಡಾಶಯಕ್ಕೆ ಕಳುಹಿಸುವ ತಂತ್ರಜ್ಞಾನ) ಮಕ್ಕಳನ್ನು ಪಡೆಯುವ ನಿರ್ಧಾರಕ್ಕೆ ಬರಲಾಗಿತ್ತು.

44 ವರ್ಷಗಳಿಂದ ಕನಿಷ್ಠ ಒಂದು ಮಗುವಿನ ನಿರೀಕ್ಷೆಯಲ್ಲಿದ್ದ 66ರ ದೇವಾ ಸಿಂಗ್-ಭಾತೇರಿ ದೇವಿ ದಂಪತಿಗೆ ಭರ್ಜರಿ ಕೊಡುಗೆ ಲಭಿಸಿದ್ದು ಮೇ 29ರಂದು. ಇಲ್ಲಿನ ರಾಷ್ಟ್ರೀಯ ವೈದ್ಯಕೀಯ ಕೇಂದ್ರದಲ್ಲಿ ಅಜ್ಜಿ ಇಬ್ಬರು ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಕ್ಕಳ ತೂಕ ಕಡಿಮೆಯಿರುವುದರಿಂದ ತೀವ್ರ ನಿಗಾ ಘಟಕದಲ್ಲಿಡಲಾಗಿದೆ.

ಅದೇ ಹೊತ್ತಿಗೆ 66ನೇ ವಯಸ್ಸಿನಲ್ಲಿ ತ್ರಿವಳಿಗಳಿಗೆ ಜನ್ಮ ನೀಡುವ ಮೂಲಕ ಈ ಅಜ್ಜಿ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಇದುವರೆಗೆ ತ್ರಿವಳಿಗಳಿಗೆ ಜನ್ಮ ನೀಡಿದ ಹಿರಿಯ ತಾಯಿಯೀಕೆ ಎಂದು ಆಸ್ಪತ್ರೆ ತನ್ನ ಪ್ರಮಾಣ ಪತ್ರದಲ್ಲಿ ಹೇಳಿದೆ.

ಅಜ್ಜನಿಗೆ ಸಖತ್ ಖುಷಿ...
ದೇವಿಗಿಂತ ವಯಸ್ಸಿನಲ್ಲಿ ಎರಡು ವರ್ಷ ಕಿರಿಯವರಾಗಿರುವ ಗಂಡ ದೇವಾ ಸಿಂಗ್ (64) ಈ ವಯಸ್ಸಿನಲ್ಲಿ ತಂದೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ನನ್ನಿಂದ ಮಗುವೊಂದನ್ನು ಪಡೆಯಬೇಕೆಂಬ ಭಾತೇರಿ ಕನಸು ಇಂದು ನನಸಾಗಿದೆ. ಆಕೆ ನನ್ನ ಮೊದಲ ಪತ್ನಿ. ಮಕ್ಕಳನ್ನು ಹೆರದ ಕಾರಣ ನಾನು ಮತ್ತೆರಡು ಮದುವೆಯಾಗಿದ್ದೆ. ಆದರೆ ಮೂರೂ ಹೆಂಡತಿಯರಿಂದ ನನಗೆ ಮಕ್ಕಳಾಗಿರಲಿಲ್ಲ ಎಂದು ಅಜ್ಜ ವಿವರಣೆ ನೀಡಿದ್ದಾರೆ.

ಇದೀಗ ನನಗೆ ಮೂವರು ಮಕ್ಕಳಾಗಿರುವುದರಿಂದ ಸಂತೋಷಗೊಂಡಿದ್ದೇನೆ. ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ನಾನು ಮಾಡುತ್ತೇನೆ ಎಂದು ಸಿಂಗ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ