ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇವಲ 500 ಉಗ್ರರಷ್ಟೇ ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ..! (500 militants active in Kashmir | Jammu and Kashmir | Kuldeep Khoda | terrorists)
Bookmark and Share Feedback Print
 
ಭಯೋತ್ಪಾದಕರ ಸಂಖ್ಯೆಯಲ್ಲಿ ಈ ಹಿಂದಿನ ವರ್ಷಗಳಿಗಿಂತ ಪ್ರಸಕ್ತ ವರ್ಷ ಕುಸಿತ ಕಂಡಿದ್ದು, ಈಗ ಕೇವಲ 500 ಮಂದಿಯಷ್ಟೇ ಜಮ್ಮು-ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ. ಅವರಲ್ಲಿ ಶೇ.40ರಷ್ಟು ಮಂದಿ ವಿದೇಶಿ ಉಗ್ರರು. ಕಳೆದ ಮೂರು ವರ್ಷಗಳಲ್ಲಿ ಹಿಂಸಾಚಾರ ಪ್ರಮಾಣ ಕೂಡ ಕಡಿಮೆಯಾಗಿದ್ದು, ಈ ರಾಜ್ಯವು ಶಾಂತಿಯತ್ತ ಸಾಗುತ್ತಿದೆ ಎಂದು ಅಲ್ಲಿನ ಪೊಲೀಸ್ ಮುಖ್ಯಸ್ಥ ಕುಲದೀಪ್ ಖೋಡಾ ತಿಳಿಸಿದ್ದಾರೆ.

2008ರಲ್ಲಿ ಸುಮಾರು ಒಂದು ಸಾವಿರ ಉಗ್ರರು ಜಮ್ಮು-ಕಾಶ್ಮೀರದಲ್ಲಿ ಸಕ್ರಿಯರಾಗಿದ್ದರು. ಇದು 2009ಕ್ಕೆ 700-800ಕ್ಕೆ ಇಳಿಕೆಯಾಗಿತ್ತು. ಪ್ರಸಕ್ತ ಕೇವಲ 500 ಭಯೋತ್ಪಾದಕರಷ್ಟೇ ಈ ಪ್ರಾಂತ್ಯದಲ್ಲಿ ಸಕ್ರಿಯರಾಗಿದ್ದಾರೆ ಎಂದು ದೆಹಲಿಯಲ್ಲಿನ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಖೋಡಾ ವಿವರಣೆ ನೀಡಿದ್ದಾರೆ.

ಇವರಲ್ಲಿ ಶೇ.40ರಷ್ಟು ಅಂದರೆ ಸುಮಾರು 200 ಮಂದಿ ವಿದೇಶೀಯರು. ಅವರಲ್ಲೂ ಬಹುತೇಕ ಮಂದಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದವರು ಎಂದು ಅವರು ವಿವರಣೆ ನೀಡಿದ್ದಾರೆ.

ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದೀನ್ ಮತ್ತು ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆಗಳು ರಾಜ್ಯದಲ್ಲಿ ಸಕ್ರಿಯವಾಗಿವೆ. ಆದರೂ ರಾಜ್ಯದ ಒಟ್ಟಾರೆ ಭದ್ರತಾ ಪರಿಸ್ಥಿತಿ ಸುಧಾರಣೆ ಕಾಣುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಹಿಂಸಾಚಾರವೂ ಕಡಿಮೆಯಾಗಿದೆ ಎಂದರು.

2007ರಲ್ಲಿ ಶೇ.20ರಷ್ಟು, 2008ರಲ್ಲಿ ಶೇ.28ರಷ್ಟು ಹಾಗೂ 2009ರಲ್ಲಿ ಶೇ.30ರಷ್ಟು ಹಿಂಸಾಚಾರ ಪ್ರಕರಣಗಳು ಕಡಿಮೆಯಾಗಿವೆ ಎಂದೂ ಅವರು ಅಂಕಿ-ಅಂಶಗಳನ್ನು ನೀಡಿದರು.

ಭಯೋತ್ಪಾದನಾ ಸಂಬಂಧಿ ಪ್ರಕರಣಗಳಲ್ಲಿ ನಾಗರಿಕರು ಸಾವನ್ನಪ್ಪುತ್ತಿರುವುದು ಕೂಡ ಕಡಿಮೆಯಾಗುತ್ತಿದೆ. ಅಧಿಕೃತ ಮಾಹಿತಿಗಳ ಪ್ರಕಾರ 2009ರಲ್ಲಿ 500ಕ್ಕಿಂತ ಕಡಿಮೆ ಉಗ್ರ ಕೃತ್ಯಗಳು ನಡೆದಿವೆ. ಇವುಗಳಲ್ಲಿ 239 ಉಗ್ರರು, 71 ನಾಗರಿಕರು ಹಾಗೂ 79 ಭದ್ರತಾ ಸಿಬ್ಬಂದಿಗಳು ಕೊಲ್ಲಲ್ಪಟ್ಟಿದ್ದಾರೆ. 2008ರಲ್ಲಿ 339 ಉಗ್ರರು, 91 ನಾಗರಿಕರು ಹಾಗೂ 85 ಭದ್ರತಾ ಸಿಬ್ಬಂದಿಗಳು ಕೊಲ್ಲಲ್ಪಟ್ಟಿದ್ದರು. ಆ ವರ್ಷ 708 ಭಯೋತ್ಪಾದನಾ ಸಂಬಂಧಿ ಘಟನೆಗಳು ನಡೆದಿದ್ದವು.
ಸಂಬಂಧಿತ ಮಾಹಿತಿ ಹುಡುಕಿ