ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲರು ಭಯೋತ್ಪಾದಕರಲ್ಲ, ನಮ್ಮ ಜನ: ಸುನಿಲ್ ಶೆಟ್ಟಿ (Naxals | terrorists | Suniel Shetty | Red Alert - The War Within)
Bookmark and Share Feedback Print
 
ಮಾವೋವಾದಿಗಳು ಹಿಂಸಾಚಾರ ನಡೆಸುತ್ತಿರುವುದನ್ನು ತಾನು ಖಂಡಿಸುತ್ತೇನೆ. ಆದರೆ ಗೆರಿಲ್ಲಾಗಳು ಭಯೋತ್ಪಾದಕರು ಎಂದು ಹೇಳುವುದು ಸರಿಯಲ್ಲ ಎಂದು ಕರ್ನಾಟಕ ಮೂಲದ ಚಿತ್ರನಟ ಸುನಿಲ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ನಕ್ಸಲರು ಬಹುತೇಕ ಶೋಷಣೆಗೊಳಗಾದ ಅಸಹಾಯಕ ಮಂದಿ. ಅವರಿಗೆ ಸೇರಬೇಕಾದ ಖನಿಜ ಸಂಪತ್ತುಗಳನ್ನು ವಶಪಡಿಸಿಕೊಂಡಿರುವುದರಿಂದ ನಿರಾಸೆಗೊಳಗಾಗಿದ್ದಾರೆ. ಅವರ ಬೆದರಿಕೆಯಡಿಯಲ್ಲೇ ಬದುಕುತ್ತಿದ್ದಾರೆ. ಅವರನ್ನು ಕೊಂದು ಹಾಕುವುದು ಅಥವಾ ಅವರ ವಿರುದ್ಧ ಕಠೋರವಾಗಿ ವರ್ತಿಸುವುದು ಸರಿಯಲ್ಲ. ಯಾಕೆಂದರೆ ಅವರು ನಮ್ಮದೇ ಜನಗಳು, ಭಯೋತ್ಪಾದಕರಲ್ಲ ಎಂದು ಶೆಟ್ಟಿ ತಿಳಿಸಿದ್ದಾರೆ.

'ರೆಡ್ ಅಲರ್ಟ್- ದಿ ವಾರ್ಟ ವಿದಿನ್' ಎಂಬ ರೈತನೊಬ್ಬನ ನಿಜ ಜೀವನದ ಕಥೆಯನ್ನು ಅನಂತ್ ಮಹಾದೇವನ್ ಸಿನಿಮಾ ಮಾಡಿದ್ದು, ಇದರಲ್ಲಿ ಶೆಟ್ಟಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರ ನಕ್ಸಲ್ ಸಮಸ್ಯೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಅದೇ ಹೊತ್ತಿಗೆ ನಕ್ಸಲರು ನಡೆಸುತ್ತಿರುವ ಹಿಂಸಾಚಾರದಿಂದ ಭಾರೀ ಹಾನಿ ಸಂಭವಿಸುತ್ತಿದ್ದು, ಇದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಹಿಂಸಾಚಾರದ ಫಲಿತಾಂಶ ಹಿಂಚಾಚಾರವೇ ಆಗಿರುತ್ತದೆ. ಈ ಪರಿಸ್ಥಿತಿಯಿಂದ ಹೊರಗೆ ಬರಲು ನಾವು ಯತ್ನಿಸಬೇಕಾಗಿದೆ ಎಂದು ಅವರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜುಲೈ 9ರಂದು 'ರೆಡ್ ಅಲರ್ಟ್- ದಿ ವಾರ್ಟ ವಿದಿನ್' ಚಿತ್ರ ಬಿಡುಗಡೆಯಾಗುತ್ತಿದ್ದು, ದಕ್ಷಿಣ ಏಷಿಯಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಇದನ್ನು ಪ್ರದರ್ಶಿಸಲಾಗಿತ್ತು. ಅಲ್ಲಿ ಸುನಿಲ್ ಶೆಟ್ಟಿಯನ್ನು ಶ್ರೇಷ್ಠ ನಟ ಎಂದು ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಚಿತ್ರವನ್ನು ಇಂಗ್ಲೀಷ್, ಹಿಂದಿ, ತೆಲುಗು ಮತ್ತು ಛತ್ತೀಸ್‌ಗಢ್ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಬೆಂಗಾಲಿ ಭಾಷೆಗೂ ಇದೀಗ ಡಬ್ ಮಾಡುವ ಕುರಿತು ಯೋಜನೆಗಳು ರೂಪುಗೊಳ್ಳುತ್ತಿವೆ ಎಂದು ಶೆಟ್ಟಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ