ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಐಟಿ ಮತ್ತು ಟ್ರಾಫಿಕ್ ಜಾಮ್‌ಗಳಿಗೆ ಬೆಂಗಳೂರು ಫೇಮಸ್: ರೆಡ್ಡಿ (Bangalore | IT | traffic jams | Jaipal Reddy)
Bookmark and Share Feedback Print
 
ಬೆಂಗಳೂರು ಯಾವುದಕ್ಕೆ ಹೆಚ್ಚು ಖ್ಯಾತಿವೆತ್ತಿರುವುದು ಎಂದರೆ ಬಹುತೇಕ ಜನರ ಬಾಯಲ್ಲಿ ಬರುವ ಮೊದಲ ಉದ್ಘಾರವಿದು. ಅದನ್ನೇ ಕೇಂದ್ರ ಸಚಿವ ಜೈಪಾಲ್ ರೆಡ್ಡಿಯೂ ಪುನರುಚ್ಛರಿಸಿದ್ದಾರೆ. ಮಾಹಿತಿ ತಂತ್ರಜ್ಞಾನದಷ್ಟೇ ಟ್ರಾಫಿಕ್ ಜಾಮ್‌ಗೂ ಬೆಂಗಳೂರು ಹೆಸರುವಾಸಿ ಎಂಬುದು ಅವರ ಅನಿಸಿಕೆ.

ಬಿಸಿನೆಸ್ ಸ್ಟ್ಯಾಂಡರ್ಡ್ ಮೂಲಭೂತ ವ್ಯವಸ್ಥೆ ಸಮಾವೇಶ 2010ಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ನಗರಾಭಿವೃದ್ಧಿ ಸಚಿವ ರೆಡ್ಡಿ, 'ಈ ನಗರದಲ್ಲಿ ಸಾಕಷ್ಟು ಸಂಚಾರ ದಟ್ಟಣೆಯಿದೆ. ಇದಕ್ಕೆ ಕಾರಣ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಪ್ರಗತಿ ಸಾಧಿಸಿರುವುದು' ಎಂದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಶರವೇಗದ ಪ್ರಗತಿ ಸಾಧಿಸಿರುವುದು ಸಂತಸದ ಸುದ್ದಿ. ಆದರೆ ಜನ ಪ್ರತಿ ದಿನ ಎದುರಿಸುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಗಳಿಗೂ ಇದೇ ಪ್ರಮುಖ ಕಾರಣ ಎಂಬ ವಾಸ್ತವವನ್ನು ನಾವು ಅರಿವಿಗೆ ತೆಗೆದುಕೊಳ್ಳಬೇಕು ಎಂದು ಸಚಿವ ರೆಡ್ಡಿ ಸಲಹೆ ನೀಡಿದ್ದಾರೆ.

ಪ್ರಗತಿಯ ಸಂಕೇತಗಳಾದ ಕೈಗಾರಿಕೆಗಳು, ಆಧುನಿಕ ತಂತ್ರಜ್ಞಾನ ಅಥವಾ ಶೈಕ್ಷಣಿಕ ಸಂಸ್ಥೆಗಳ ಹೆಚ್ಚಳ ಮುಂತಾದುವುಗಳಿಂದಾಗಿ ಸಂಚಾರ ದಟ್ಟಣೆ ಸಹಜ. ಈಗ ಬೆಂಗಳೂರು ಕೇವಲ ಮಾಹಿತಿ ತಂತ್ರಜ್ಞಾನಕ್ಕಷ್ಟೇ (ಐಟಿ) ಹೆಸರುವಾಸಿಯಲ್ಲ. ಜತೆಗೆ ಟ್ರಾಫಿಕ್ ಜಾಮ್‌ಗಳಿಗೂ ಎನ್ನುವ ಪರಿಸ್ಥಿತಿ ನೆಲೆಸಿದೆ. ಹಾಗಾಗಿ ಈ ನಗರಕ್ಕೆ ಮೆಟ್ರೋ ರೈಲು ಸಂಚಾರದ ಅಗತ್ಯ ಇತರ ನಗರಗಳಿಗಿಂತ ಹೆಚ್ಚು ಇದೆ ಎಂದರು.

ಬೆಂಗಳೂರು ಮೆಟ್ರೋ ರೈಲು ಯೋಜನೆಯ ಮೊದಲ ಹಂತ ಇದೇ ವರ್ಷಾಂತ್ಯದೊಳಗೆ ಮುಕ್ತಾಯ ಕಾಣಲಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕೇಂದ್ರದಿಂದ ನಡೆಸಲ್ಪಡುವ ನಗರಗಳ ಆಧುನೀಕರಣ ಯೋಜನೆ 'ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ಪುನರ್ ನವೀಕರಣ ಯೋಜನೆ'ಗಾಗಿ ಸರಕಾರವು 28 ಹೊಸ ನಗರಗಳನ್ನು ಆಯ್ಕೆ ನಡೆಸಲಿದೆ. 2001ರಲ್ಲಿ ಐದು ಲಕ್ಷ ಜನಸಂಖ್ಯೆಯನ್ನು ದಾಟಿರುವ ಹುಬ್ಬಳ್ಳಿಯನ್ನೂ ಸೇರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ