ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನಗೆ ಅಮೆರಿಕಾ ಕಾನೂನಿದೆ, ಬೈ ಇಂಡಿಯಾ ಎಂದಿದ್ದ ಪಾಪಿ! (Bhopal gas tragedy | Union Carbide | Warren Anderson | India)
Bookmark and Share Feedback Print
 
ನನಗೆ ಗೃಹಬಂಧನ ಅಥವಾ ಸೆರೆವಾಸ ಅಥವಾ ಜಾಮೀನು ಯಾವುದೂ ಇಲ್ಲ.. ನಾನು ಅಮೆರಿಕಾಕ್ಕೆ ಹೋಗಲು ಮುಕ್ತನಾಗಿದ್ದೇನೆ. ಅಲ್ಲಿ ಅಮೆರಿಕಾದ ಕಾನೂನಿದೆ... ಬೈಬೈ ಇಂಡಿಯಾ.. ಧನ್ಯವಾದಗಳು -- ಹೀಗೆಂದು ಪರಾರಿಗೆ ಸಹಕರಿಸಿದ ಭಾರತ ಮತ್ತು ನಮ್ಮ ರಾಜಕಾರಣಿಗಳಿಗೆ ದೊಡ್ಡ ನಮಸ್ಕಾರ ಹೇಳಿ ಹೊರಟು ಹೋದವನ ಹೆಸರು ವಾರೆನ್ ಆಂಡರ್ಸನ್.
PR


1984ರ ಡಿಸೆಂಬರ್ 3ರಂದು ಭೋಪಾಲದಲ್ಲಿ ನಡೆದಿದ್ದ ಘನಘೋರ ಅನಿಲ ದುರಂತದ ನಂತರ ಅದಕ್ಕೆ ಕಾರಣವಾಗಿದ್ದ ಯೂನಿಯನ್ ಕಾರ್ಬೈಡ್ ಕಂಪನಿಯ ಮುಖ್ಯಸ್ಥ ಆಂಡರ್ಸನ್ ದೇಶದಿಂದ ಪರಾರಿಯಾಗಿದ್ದ. ಇದಕ್ಕೆ ಸಹಕರಿಸಿದ್ದ ಆಗಿನ ಕಾಂಗ್ರೆಸ್ ಸರಕಾರ ಎಂಬುದು ಜನಜನಿತವಾಗಿರುವ ಹೊತ್ತಿಗೆ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದ ಅರ್ಜುನ್ ಸಿಂಗ್ ಮತ್ತು ಆಂಡರ್ಸನ್ ಆಡಿರುವ ಕೆಲವು ಮಾತುಗಳು ಇದೀಗ ಮಾಧ್ಯಮಗಳ ಕೈಗೆ ಸಿಕ್ಕಿದ್ದು, ಮರು ಪ್ರಸಾರ ಮಾಡುತ್ತಿವೆ.

ದುರಂತ ನಡೆದ ಮೂರು ದಿನಗಳ ನಂತರ ಅಂದರೆ ಡಿಸೆಂಬರ್ 7ರಂದು ಆಂಡರ್ಸನ್‌ನನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಆತನಿಗೆ ಜಾಮೀನು ನೀಡಲಾಗಿತ್ತು. ಆತನ ಮೇಲೆ ಹೊರಿಸಲಾಗಿದ್ದ ಆರೋಪಗಳಲ್ಲಿ ಗಂಭೀರವೆನಿಸಿದ್ದನ್ನು ಕೈಬಿಡಲಾಗಿತ್ತು. ಆ ಮೂಲಕ ಆತನನ್ನು ಅಮೆರಿಕಾಕ್ಕೆ ಪರಾರಿಯಾಗಲು ಸಹಕಾರ ನೀಡಲಾಗಿತ್ತು.

ಭೋಪಾಲದಿಂದ ಜಾಮೀನು ಪಡೆದುಕೊಂಡಿದ್ದ ಆಂಡರ್ಸನ್ ವಿಮಾನದಲ್ಲಿ ನವದೆಹಲಿಗೆ ಬಂದು, ಅಲ್ಲಿಂದ ಅಮೆರಿಕಾಕ್ಕೆ ಪರಾರಿಯಾಗಿದ್ದ. ಅದಕ್ಕೂ ಮೊದಲು ಹೇಳಿದ ಮಾತುಗಳಿವು. 'ನನಗೆ ಗೃಹಬಂಧನ ಅಥವಾ ಸೆರೆವಾಸ ಅಥವಾ ಜಾಮೀನು ಯಾವುದೂ ಇಲ್ಲ.. ನಾನು ಅಮೆರಿಕಾಕ್ಕೆ ಹೋಗಲು ಮುಕ್ತನಾಗಿದ್ದೇನೆ. ನನಗೆ ಅಮೆರಿಕಾದ ಕಾನೂನಿದೆ... ಬೈಬೈ ಇಂಡಿಯಾ.. ಧನ್ಯವಾದಗಳು' ಎಂದು ಇಲ್ಲಿಂದ ಆತ ಹೊರಟು ಹೋಗಿದ್ದ.

ಇದೇ ಹೊತ್ತಿನಲ್ಲಿ ಯೂನಿಯನ್ ಕಾರ್ಬೈಡ್ ಸ್ಥಾವರದ ಹೊರಗಡೆ ಬಿಳಿ ಹೆಲ್ಮೆಟ್ ಹಾಕಿ ನಿಂತಿದ್ದ ಆಗಿನ ಮುಖ್ಯಮಂತ್ರಿ ಅರ್ಜುನ್ ಸಿಂಗ್, 'ಈ ಕುರಿತು ಯಾರನ್ನೂ ಶಿಕ್ಷಿಸುವುದು ಅಥವಾ ವಿಚಾರಣೆ ನಡೆಸುವುದು, ಯಾವುದೇ ರೀತಿಯಲ್ಲಿ ಯಾರಿಗೂ ಕಿರುಕುಳ ನೀಡುವ ಇರಾದೆ ನಮಗಿಲ್ಲ..' ಎಂದಿದ್ದರು.

ಅದೇ ಕಾರಣಕ್ಕಾಗಿ ಆಂಡರ್ಸನ್‌ಗೆ ಜಾಮೀನು ದೊರೆತಿದೆ. ಆರೋಪಗಳು ಸಿದ್ಧವಾಗುವ ಹೊತ್ತಿನಲ್ಲಿ ತಾನು ನ್ಯಾಯಾಲಯಕ್ಕೆ ಹಾಜರಾಗುವುದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದ್ದರು ಎಂದು ಇದೀಗ ಮಾಧ್ಯಮಗಳು ವರದಿಯನ್ನು ಪ್ರಸಾರ ಮಾಡುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ