ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಯೋತ್ಪಾದನೆ, ನಕ್ಸಲ್ ನಿಗ್ರಹಕ್ಕೆ ಕೇಂದ್ರ ವಿಫಲ: ಮಾಯಾ ಪಕ್ಷ (BSP | terrorism | Naxalism | UPA government)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಭಯೋತ್ಪಾದನೆ ಮತ್ತು ನಕ್ಸಲ್ ಸಮಸ್ಯೆಯನ್ನು ಹತ್ತಿಕ್ಕಲು ವಿಫಲವಾಗಿದೆ ಎಂದು ಆರೋಪಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವ ಬಹುಜನ ಸಮಾಜ ಪಕ್ಷ, ದೇಶ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆರಂಭಿಸುವುದಾಗಿ ಪ್ರಕಟಿಸಿದೆ.

ಕಾಂಗ್ರೆಸ್ ಮುಂದಾಳುತ್ವದ ಸರಕಾರವು ಭಯೋತ್ಪಾದನೆ ಮತ್ತು ನಕ್ಸಲ್‌ವಾದವನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಎರಡೂ ಸಮಸ್ಯೆಗಳ ಜಾಲಗಳು ದೇಶದಾದ್ಯಂತ ತನ್ನ ಕಬಂದ ಬಾಹುಗಳನ್ನು ಚಾಚುತ್ತಿವೆ. ಆದರೆ ಸರಕಾರ ಮಾತ್ರ ಪರಿಸ್ಥಿತಿಯ ಗಂಭೀರತೆಯನ್ನು ಮನದಟ್ಟು ಮಾಡಿಕೊಳ್ಳದೆ ನಿರ್ಲಕ್ಷ್ಯವಹಿಸುತ್ತಿದೆ ಎಂದು ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ನರೀಂದರ್ ಕಶ್ಯಪ್ ಆರೋಪಿಸಿದ್ದಾರೆ.

ಬಿಎಸ್‌ಪಿಯ ಪಂಜಾಬ್ ಘಟಕದ ಸಂಘಟನಾತ್ಮಕ ವ್ಯವಹಾರಗಳ ಮುಖ್ಯಸ್ಥರೂ ಆಗಿರುವ ಕಶ್ಯಪ್, ಪ್ರಸಕ್ತ ರಸ್ತೆಗಳಲ್ಲಿ ಸಾಗುತ್ತಿರುವ ವಾಹನಗಳ ಮೇಲೂ ಭಯೋತ್ಪಾದಕರ ಚಿತ್ರಗಳನ್ನು ಕಾಣಬಹುದಾಗಿದೆ ಎಂದು ಕೇಂದ್ರವನ್ನು ಲೇವಡಿ ಮಾಡಿದ್ದಾರೆ.

ಕೇಂದ್ರ ಸರಕಾರವು ಬೆಲೆಯೇರಿಕೆಯನ್ನು ನಿಯಂತ್ರಿಸುತ್ತೇನೆ ಎಂದು ನೀಡಿದ್ದ ಎಲ್ಲಾ ಭರವಸೆಗಳು ಪೊಳ್ಳು ಮತ್ತು ಆಧಾರರಹಿತವಾದದ್ದು ಎಂದೂ ಆರೋಪಿಸಿರುವ ಬಿಎಸ್‌ಪಿ ಶಾಸಕ, ಈ ಸಂಬಂಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದರು.

ಈ ಎಲ್ಲಾ ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಎಸ್‌ಪಿಯು ಜುಲೈ ತಿಂಗಳಲ್ಲಿ 'ಜನ ಜಾಗರಣ್' ಎಂಬ ಕಾರ್ಯಕ್ರಮವನ್ನು ದೇಶದಾದ್ಯಂತ ಹಮ್ಮಿಕೊಳ್ಳಲಿದೆ. ಆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಯತ್ನ ಪಕ್ಷದ್ದು ಎಂದು ಅವರು ತಿಳಿಸಿದ್ದಾರೆ.

ಸಮಾಜವಾದಿ ವರಿಷ್ಠ ಮುಲಾಯಂ ಸಿಂಗ್ ವಿರುದ್ಧವೂ ಕಶ್ಯಪ್ ಇದೇ ಸಂದರ್ಭದಲ್ಲಿ ಹರಿಹಾಯ್ದಿದ್ದಾರೆ. ಮುಲಾಯಂ ತನ್ನ ಸರ್ವಾಡಳಿತ ಮತ್ತು ಕೌಟುಂಬಿಕ ಹಿತಾಸಕ್ತಿಗಳ ಕಾರಣದಿಂದಾಗಿ ಉತ್ತರ ಪ್ರದೇಶ ರಾಜಕಾರಣದಲ್ಲಿ ಅಪ್ರಸ್ತುತರಾಗುತ್ತಿದ್ದಾರೆ. ಆ ಮೂಲಕ ನಿಧಾನವಾಗಿ ಜನಪ್ರಿಯತೆ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ