ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆರೆಸ್ಸೆಸ್ ಅಂಗಸಂಸ್ಥೆಗೆ ಗೋಮೂತ್ರ ಔಷಧಿ ಪೇಟೆಂಟ್
(Cow urine drug | RSS body | US patent | Go Vigyan Anusandhan Kendra)
ಸಂಸ್ಕರಿತ ಗೋಮೂತ್ರದಿಂದ ಉತ್ಪಾದಿಸಿದ ಕ್ಯಾನ್ಸರ್ ನಿವಾರಕ ಮದ್ದಿಗೆ ಅಮೆರಿಕಾ ಪೇಟೆಂಟ್ ಸಿಕ್ಕಿದೆ. ಈ ಪೇಟೆಂಟ್ ಪಡೆದುಕೊಂಡಿರುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗ ಸಂಸ್ಥೆಯೆನ್ನುವುದು ವಿಶೇಷ.
ಆನುವಂಶೀಯತೆಯಿಂದ ಬರುವ ಸಮಸ್ಯೆಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿರುವ ಔಷಧಿಗಳಿಗೆ ಆರೆಸ್ಸೆಸ್ ಅಂಗಸಂಸ್ಥೆ 'ಗೋ ವಿಜ್ಞಾನ ಅನುಸಾಧನಾ ಕೇಂದ್ರ' ಪಡೆಯುತ್ತಿರುವ ಮೂರನೇ ಅಮೆರಿಕಾ ಪೇಟೆಂಟ್ ಇದಾಗಿದೆ. ಕ್ಯಾನ್ಸರ್ ನಿವಾರಕ ಮತ್ತು ರೋಗ ನಿರೋಧಕ ಶಕ್ತಿಯನ್ನು ಜೈವಿಕವಾಗಿ ವೃದ್ಧಿಸುವುದಕ್ಕಾಗಿ ಈ ಪೇಟೆಂಟ್ ನೀಡಲಾಗಿದೆ.
PR
'ಕಾಮಧೇನು ಅರ್ಕ' ಎಂಬ ಬ್ರಾಂಡ್ ಹೆಸರಿನಡಿಯಲ್ಲಿ ಗೋ ವಿಜ್ಞಾನ ಕೇಂದ್ರ ಮತ್ತು ರಾಷ್ಟ್ರೀಯ ಪರಿಸರ ನಿರ್ವಹಣಾ ಸಂಶೋಧನಾ ಸಂಸ್ಥೆ (NEERI) ಜಂಟಿಯಾಗಿ ಗೋಮೂತ್ರ ಔಷಧಿಯ ಸಂಶೋಧನೆ ನಡೆಸಲಾಗಿತ್ತು ಎಂದು ನೀರಿ ಪ್ರಭಾರ ನಿರ್ದೇಶಕ ತಪನ್ ಚಕ್ರವರ್ತಿ ವಿವರಣೆ ನೀಡಿದ್ದಾರೆ.
ಆಕ್ಸಿಡೇಟಿವ್ ಹಾನಿಯಾಗುವುದರಿಂದ ಡಿಎನ್ಎಯನ್ನು ರಕ್ಷಿಸುವುದು ಮತ್ತು ದುರಸ್ತಿ ಮಾಡುವುದಕ್ಕೆ ಮರು ಸಂಸ್ಕರಿಸಿದ ಗೋಮೂತ್ರ (ಆರ್‌ಸಿಯುಡಿ) ಸಹಕಾರಿ ಎಂಬುದನ್ನು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿತ್ತು ಎಂದು ಚಕ್ರವರ್ತಿ ಮತ್ತು ಕೇಂದ್ರದ ಸುನಿಲ್ ಮಾನ್‌ಸಿಂಗ್ ತಿಳಿಸಿದ್ದಾರೆ.
ಆಮ್ಲೀಯತೆಯಿಂದಾಗುವ ಡಿಎನ್‌ಎ ಹಾನಿಯಿಂದಾಗಿ ಅಕಾಲಿಕ ಮುಪ್ಪು, ಅರ್ಬುದ ಮತ್ತು ಇತರ ತೊಂದರೆಗಳುಂಟಾಗುತ್ತವೆ.
ಈ ಔಷಧಿಯನ್ನು ಕಂಡು ಹಿಡಿದ ನಂತರ ಮೂವರು ರೋಗಿಗಳ ಮೇಲೆ ಪ್ರಯೋಗಿಸಲಾಗಿತ್ತು. ಅವರಲ್ಲಿ ಇಬ್ಬರು ಗಂಟಲಿನ ಕ್ಯಾನ್ಸರ್ ಹೊಂದಿದ್ದರೆ, ಒಬ್ಬರು ಗರ್ಭಾಶಯ ಕ್ಯಾನ್ಸರ್ ಹೊಂದಿದ್ದರು.