ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅನೈತಿಕ ಸಂಬಂಧ; ಮರ್ಮಾಂಗ ಕತ್ತರಿಸಿದ ನರ್ಸ್ ಪತ್ನಿ..! (Wife bobbitises husband | Punjab | Baby | Jaspal)
Bookmark and Share Feedback Print
 
ಹಲವು ಮಹಿಳೆಯರ ಜತೆ ತನ್ನ ಗಂಡ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಕಾರಣಕ್ಕೆ ಮೊದಲು ಪೊಲೀಸರಿಗೆ ದೂರು ನೀಡಿದ್ದಳಾದರೂ, ಇದ್ದಕ್ಕಿದ್ದಂತೆ ಹಿಂದಕ್ಕೆ ಪಡೆದುಕೊಂಡು ತಾನೇ ಆತನಿಗೆ ಸರಿಯಾಗಿ ಬುದ್ಧಿ ಕಲಿಸುವುದಾಗಿ ಹೊರಟಿದ್ದ ಹೆಂಡತಿ ಎಸಗಿದಕೃತ್ಯವಿದು. ರಾತೋರಾತ್ರಿ ಹೆಂಡ ಕುಡಿಸಿ ಮಲಗಿಸಿದ ನಂತರ ಚೂರಿಯಿಂದ ಮರ್ಮಾಂಗವನ್ನೇ ಕತ್ತರಿಸಿ ಇದೀಗ ಜೈಲು ಸೇರಿದ್ದಾಳೆ.

ಇದು ನಡೆದಿರುವುದು ಪಂಜಾಬ್‌ನ ಕಪುರ್ತಲಾ ಜಿಲ್ಲೆಯ ಭೋಲಾತ್ ಎಂಬಲ್ಲಿ. ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಬೇಬಿ ಎಂಬಾಕೆಯೇ ಗಂಡ ಜಸ್ಪಾಲ್ ಮರ್ಮಾಂಗಕ್ಕೆ ಕತ್ತರಿ ಹಾಕಿದವಳು.

ರಿಕ್ಷಾ ಚಾಲಕನಾಗಿರುವ ಜಸ್ಪಾಲ್ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ನರ್ಸ್ ಬೇಬಿ ಮೊದಲು ಪೊಲೀಸರಿಗೆ ದೂರು ನೀಡಿದ್ದಳು. ಆದರೆ ತನ್ನ ನಿರ್ಧಾರ ಬದಲಾಯಿಸಿದ ಬೇಬಿ ದೂರನ್ನು ಹಿಂದಕ್ಕೆ ಪಡೆದುಕೊಂಡು, ಗಂಡನಿಗೆ ತಾನೇ ಬುದ್ಧಿ ಕಲಿಸುವುದಾಗಿ ಹೇಳಿದ್ದಳು.

ಮನೆಗೆ ಬಂದವಳೇ ಮದ್ಯದ ಜತೆ ಮತ್ತಷ್ಟು ಅಮಲು ಪದಾರ್ಥ ಮಿಶ್ರಣ ಮಾಡಿ ರಾತ್ರಿ ಜಸ್ಪಾಲ್‌ಗೆ ನೀಡಿದ್ದಳು. ನಂತರ ಚೂರಿಯಿಂದ ಗಂಡನ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ಬಳಿಕ ಭೋಲಾತ್ ಠಾಣೆಗೆ ತೆರಳಿ ಪೊಲೀಸರಲ್ಲಿ ತಾನು ಎಸಗಿದ ಕೃತ್ಯವನ್ನು ವಿವರಿಸಿ ತಪ್ಪೊಪ್ಪಿಗೆ ನೀಡಿದ್ದಾಳೆ.

ಏಳು ವರ್ಷಗಳ ಹಿಂದೆ ದಾಂಪತ್ಯಕ್ಕೆ ಅಡಿಯಿಟ್ಟಿದ್ದ ಜಸ್ಪಾಲ್-ಬೇಬಿ ದಂಪತಿಗೆ ಮೂವರು ಮಕ್ಕಳು. ಇತ್ತೀಚಿನ ಕೆಲ ಸಮಯದಿಂದ ಗಂಡ ಸಂಸಾರದಿಂದ ಹೊರಗೆ ಸರಿಯುತ್ತಿರುವುದನ್ನು ಮನಗಂಡಿದ್ದ ಪತ್ನಿ, ಪತಿಯ ಜತೆ ಜಗಳ ಕಾಯುತ್ತಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.

ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಬಲಿಪಶು ಜಸ್ಪಾಲ್‌ನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಅಲ್ಲಿಂದ ಜಲಂಧರ್‌ನಲ್ಲಿನ ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ಹೇಳಿವೆ.

ಜಸ್ಪಾಲ್ ತಂದೆ ಪಿಯೇರಾ ಲಾಲ್ ನೀಡಿರುವ ದೂರಿನಂತೆ ಬೇಬಿ ವಿರುದ್ಧ ಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ