ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಾತ್ಯತೀತತೆ ಬೋಂಗು; ನಿತೀಶ್‌ರಿಂದ ಮೋದಿ ನಿಧಿ ವಾಪಸ್ (Bihar | Kosi flood relief | Narendra Modi | Nitish Kumar)
Bookmark and Share Feedback Print
 
ಇತ್ತೀಚೆಗಷ್ಟೇ ಬಿಜೆಪಿ ಅಭಿಮಾನಿಗಳು ಪ್ರಕಟಿಸಿದ್ದ ಜಾಹೀರಾತಿನಲ್ಲಿ ನರೇಂದ್ರ ಮೋದಿ ಜತೆಗಿದ್ದ ತನ್ನ ಚಿತ್ರವನ್ನು ಪ್ರಕಟಿಸಿದ್ದಕ್ಕೆ ಮುನಿಸಿಕೊಂಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕೋಸಿ ನೆರೆ ಪರಿಹಾರ ನಿಧಿಗಾಗಿ ಗುಜರಾತ್ ಸರಕಾರ ನೀಡಿದ್ದ ಐದು ಕೋಟಿ ರೂಪಾಯಿಗಳನ್ನು ವಾಪಸ್ ಮಾಡುವ ಮೂಲಕ ತಾನು ಕೋಮುವಾದಿಯಲ್ಲ ಎಂಬ ಸಂದೇಶವನ್ನು ಸಾರಲು ಯತ್ನಿಸಿದ್ದಾರೆ.

ಎನ್‌ಡಿಎ ಪಾಲುದಾರ ಮತ್ತು ಬಿಹಾರ ಸರಕಾರದಲ್ಲಿ ಬಿಜೆಪಿ ಬೆಂಬಲ ಪಡೆದುಕೊಂಡಿರುವ ಹೊರತಾಗಿಯೂ ಕಳೆದ ಕೆಲವು ವರ್ಷಗಳಿಂದ ಬಿಜೆಪಿಯ 'ಫೈರ್ ಬ್ರಾಂಡ್' ಮೋದಿ ಜತೆ ವೇದಿಕೆ ಹಂಚಿಕೊಳ್ಳುವುದನ್ನು ನಿತೀಶ್ ಕುಮಾರ್ ತಪ್ಪಿಸಿಕೊಂಡೇ ಬಂದಿದ್ದರು. ಇದಕ್ಕಿದ್ದ ಪ್ರಮುಖ ಕಾರಣ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರನ್ನು ಜೆಡಿಯುನತ್ತ ಸೆಳೆದುಕೊಳ್ಳುವುದು.
PR

ಆದರೆ ಇದಕ್ಕೆ ತಣ್ಣೀರೆರಚುವಂತೆ ಇತ್ತೀಚೆಗಷ್ಟೇ ಜಾಹೀರಾತೊಂದು ಪ್ರಕಟವಾಗಿತ್ತು. ಅದರಲ್ಲಿ ನಿತೀಶ್ ಕುಮಾರ್ ಮತ್ತು ನರೇಂದ್ರ ಮೋದಿ ಜತೆಗೆ ನಿಂತು ಕೈ ಎತ್ತಿರುವ ಚಿತ್ರವನ್ನು ಮುದ್ರಿಸಲಾಗಿತ್ತು. ಇದರಿಂದ ಕುಗ್ಗಿ ಹೋದ ನಿತೀಶ್, ಬಿಜೆಪಿಯ ಮುಖಂಡರಿಗೆ ಏರ್ಪಡಿಸಿದ್ದ ಔತಣ ಕೂಟವನ್ನೂ ರದ್ದು ಮಾಡಿದ್ದರು.

2008ರ ಕೋಸಿ ಪ್ರವಾಹದ ಸಂದರ್ಭದಲ್ಲಿ ಮಾಡಿದ ಸಹಾಯ ಸೇರಿದಂತೆ ಆ ಜಾಹೀರಾತಿನಲ್ಲಿ ಬಿಹಾರ ಜನತೆಗೆ ಗುಜರಾತ್ ನೀಡಿದ ಸಹಕಾರವನ್ನು ಸ್ಮರಿಸಿಕೊಳ್ಳಲಾಗಿತ್ತು. ಇದೆಲ್ಲದರಿಂದ 'ಜಾತ್ಯತೀತ' ಮುಖವಾಡ ಧರಿಸಿಕೊಳ್ಳಲು ಯತ್ನಿಸುತ್ತಿದ್ದ ನಿತೀಶ್‌ಗೆ ಆಶಾಭಂಗವಾಗಿತ್ತು. ಅದನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಾಹೀರಾತು ಏಜೆನ್ಸಿಗಳ ಮೇಲೆ ದಾಳಿಯನ್ನೂ ಮಾಡಿಸಿದ್ದರು.

ಮುಂದಿನ ಹಂತವಾಗಿ ಗುಜರಾತ್ ನೀಡಿದ್ದ ಐದು ಕೋಟಿ ರೂಪಾಯಿ ಪರಿಹಾರ ನಿಧಿಯ ಹಣವನ್ನೂ ವಾಪಸ್ ಮಾಡಿದ್ದಾರೆ. ಮಾಡಿದ ಸಹಾಯವನ್ನು ಕೊಚ್ಚಿಕೊಳ್ಳುವುದು ಅನಾಗರಿಕತೆ ಎಂದೂ ನಿತೀಶ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಅದೇ ಹೊತ್ತಿಗೆ ನಿಧಿಯನ್ನು ವಾಪಸ್ ಮಾಡಿರುವ ಕ್ರಮವನ್ನು ಬಿಹಾರ ವಿಪತ್ತು ನಿರ್ವಹಣಾ ಸಚಿವ ದಿವೇಶ್ ಚಾಂದ್ ಠಾಕೂರ್ ಸಮರ್ಥಿಸಿಕೊಂಡಿದ್ದಾರೆ. ಮೋದಿಯವರು ಮಾಡಿರುವ ಸಹಾಯವನ್ನು ತನ್ನೆಲ್ಲ ಪೋಸ್ಟರ್‌ಗಳಲ್ಲಿ ನಮೂದಿಸುತ್ತಿದ್ದಾರೆ. ಇದು ಜಾತ್ಯತೀತ ಇಮೇಜ್ ಹೊಂದಿರುವ ಜೆಡಿಯುಗೆ ಸರಿ ಹೊಂದುತ್ತಿಲ್ಲ ಎಂದಿದ್ದಾರೆ.

ಅಲ್ಲದೆ ಇದೇ ವರ್ಷದ ಅಂತ್ಯದಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೋದಿಗೆ ಪ್ರಚಾರ ಮಾಡಲು ಅವಕಾಶ ನೀಡುವುದಿಲ್ಲ ಎಂದು ಮುನ್ಸೂಚನೆ ನೀಡಿದ್ದಾರೆ ಠಾಕೂರ್.

ಮೋದಿ ಬಿಜೆಪಿಯ ಬಹುದೊಡ್ಡ ನಾಯಕರಾಗಿರಬಹುದು. ಆದರೆ ಅವರು ಜಾತ್ಯತೀತ ವಿರೋಧಿ ಇಮೇಜ್ ಹೊಂದಿದ್ದಾರೆ. ಹಾಗಾಗಿ ಅವರನ್ನು ಬಿಹಾರ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಬಳಸಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

2009ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಮೋದಿಯನ್ನು ಬಿಹಾರದಲ್ಲಿ ಪ್ರಚಾರಕ್ಕೆ ಬಿಟ್ಟಿರಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ