ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 100 ಸ್ಥಳಗಳ ಮೇಲೆ ದಾಳಿ: ಹೆಡ್ಲಿ ಬಾಯ್ಬಿಟ್ಟ ಡೆಡ್ಲಿ ಸತ್ಯ: (Headley | LeT | India targets)
Bookmark and Share Feedback Print
 
ಪಾಕಿಸ್ತಾನಿ ಮೂಲದ ಅಮೆರಿಕನ್ ಉಗ್ರ ಡೇವಿಡ್ ಹೆಡ್ಲಿಯಿಂದ ವಿವರಗಳನ್ನು ಪಡೆದು ಭಾರತಕ್ಕೆ ಹಿಂದಿರುಗಿದ ತನಿಖಾ ತಂಡ,ದೇಶದ 100 ಪ್ರಮುಖ ಸ್ಥಳಗಳಲ್ಲಿ ಉಗ್ರರು ದಾಳಿ ನಡೆಸುವ ಸಂಚನ್ನು ಹೊಂದಿರುವ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಭಧ್ರತಾ ದಳದ ಅಧಿಕಾರಿಗಳು ಉಗ್ರ ಹೆಡ್ಲಿಯನ್ನು ತನಿಖೆಗೊಳಪಡಿಸಿದಾಗ, ಪಾಕ್ ಮೂಲದ ಲಷ್ಕರ್-ಎ-ತೊಯಿಬಾ ಉಗ್ರಗಾಮಿ ಸಂಘಟನೆ, ದೇಶದ 100 ಪ್ರಮುಖ ಸ್ಥಳಗಳನ್ನು ಗುರುತಿಸಿ, ಸಮೀಕ್ಷೆ ಹಾಗೂ ಛಾಯಾಚಿತ್ರಗಳ ವಿವರಣೆಗಳನ್ನು ಸಂಗ್ರಹಿಸಿದ್ದು,ದಾಳಿ ನಡೆಸುವ ಯೋಜನೆಗಳನ್ನು ಹೊಂದಿತ್ತು ಎಂದು ಹೆಡ್ಲಿ ಬಹಿರಂಗಪಡಿಸಿದ್ದಾನೆ.

ಮುಂಬೈನ ತಾಜ್‌ಮಹಲ್ ಹೋಟೆಲ್ ಸೇರಿದಂತೆ ದೇಶದಲ್ಲಿರುವ 30 ಸ್ಥಳಗಳ ಸಂಪೂರ್ಣ ವಿವರಗಳನ್ನು ಲಷ್ಕರ್‌ಗೆ ನೀಡಿರುವುದಾಗಿ ಹೇಳಿಕೆ ನೀಡಿದ ಹೆಡ್ಲಿ, 2006-2009ರ ಅವಧಿಯಲ್ಲಿ ಸುಮಾರು ಒಂಬತ್ತು ಬಾರಿ ಭಾರತಕ್ಕೆ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಉಗ್ರ ಡೇವಿಡ್ ಹೆಡ್ಲಿಯನ್ನು ಸುಮಾರು ಏಳು ದಿನಗಳ ಕಾಲ ತನಿಖೆ ನಡೆಸಿದ ಭಾರತದ ರಾಷ್ಟ್ರೀಯ ಭಧ್ರತಾ ದಳದ ಅದಿಕಾರಿಗಳು,ಸಂಪೂರ್ಣ ವಿವರಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಅಮೆರಿಕ ಪರಸ್ಪರ ಸಹಕಾರ ನೀಡುತ್ತಿರುವ ಹಿನ್ನೆಲೆಯಲ್ಲಿ, ಉಗ್ರ ಡೇವಿಡ್ ಹೆಡ್ಲಿಯನ್ನು ನೇರವಾಗಿ ಪ್ರಶ್ನಿಸುವ ಅವಕಾಶವನ್ನು ನೀಡಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹೆಡ್ಲಿ, ಎಲ್ಇಟಿ, ಭಾರತ, ಅಮೆರಿಕ