12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 2011ರ ಅಕಾಡೆಮಿಕ್ ವರ್ಷದಿಂದ ದೇಶದಾದ್ಯಂತ ಒಂದೇ ರೀತಿಯ ಪಠ್ಯವನ್ನು ರೂಪಿಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.
ಕೌನ್ಸಿಲ್ ಆಫ್ ಬೋರ್ಡ್ಸ್ ಆಫ್ ಸ್ಕೂಲ್ ಎಜ್ಯುಕೇಶನ್ ಇನ್ ಇಂಡಿಯಾ (ಸಿಒಬಿಎಸ್‌ಇ) ಕೂಡಾ, ಮುಂದಿನ ತಿಂಗಳು ಜುಲೈನಿಂದ ಒಂದೇ ರೀತಿಯ ಪಠ್ಯವನ್ನು ಜಾರಿಗೆ ತರಲಿದೆ ಎಂದು ಸಿಬಲ್ ತಿಳಿಸಿದ್ದಾರೆ.
12ನೇ ತರಗಿತಯ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗದ ಮೊದಲ ಬೋರ್ಡ್ ಪರೀಕ್ಷೆಗಳನ್ನು 2013ರಲ್ಲಿ ನಡೆಸಲಾಗುವುದು ಎಂದು ಸೆಂಟ್ರಲ್ ಬೋರ್ಡ್ ಅಡ್ವೈಸರಿ ಬೋರ್ಡ್ ಆಫ್ ಎಜ್ಯುಕೇಶನ್ ಸಭೆಯ ನಂತರ ಸಚಿವ ಕಪಿಲ್ ಸಿಬಲ್ ಮಾಹಿತಿ ನೀಡಿದ್ದಾರೆ.