ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2014ರಲ್ಲಿ ರಾಹುಲ್‌ ಗಾಂಧಿಗೆ ಪ್ರಧಾನಿ ಪಟ್ಟ:ರೋಶಯ್ಯ (Rahul Gandhi | Prime Minister | K Rosaiah | Nehru-Gandhi | Andhra Pradesh)
Bookmark and Share Feedback Print
 
PTI
ಕಾಂಗ್ರೆಸ್ ಸಂಸದ ಹಾಗೂ ಸೋನಿಯಾ ಪುತ್ರ ರಾಹುಲ್ ಗಾಂಧಿಯವರ 40ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಕೆ.ರೋಶಯ್ಯ ಮಾತನಾಡಿ, ರಾಹುಲ್‌ಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳಿದ್ದು,ಮುಂಬರುವ 2014ರಲ್ಲಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೆದಕ್ ಜಿಲ್ಲೆಯ ಕುಲಚರಮ್ ಪಟ್ಟಣದಲ್ಲಿರುವ 76 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ರಾಹುಲ್ ಗಾಂಧಿಯವರಿಗೆ ಪ್ರಧಾನಿಯಾಗುವ ಅರ್ಹತೆಗಳಿದ್ದು, ದೇಶಕ್ಕೆ ಅವರ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಕಳೆದ ಎರಡು ಬಾರಿ ರಾಹುಲ್ ಗಾಂಧಿಯವರಿಗೆ ಪ್ರದಾನಿಯಾಗುವ ಅವಕಾಶಗಳು ದೊರೆತರೂ ಅವರು ನಿರಾಕರಿಸಿದ್ದಾರೆ. ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನವನ್ನು ವಹಿಸಿಕೊಳ್ಳಲು ಕೂಡಾ ಅವರು ಸಿದ್ಧರಿಲ್ಲ ಎಂದು ರಾಹುಲ್ ಗಾಂಧಿಯವರ ತ್ಯಾಗ ಮನೋಭಾವನೆಯನ್ನು ಸ್ಮರಿಸಿದರು.

ಜವಾಹರ ಲಾಲ್ ಇಂದಿರಾ ಗಾಂಧಿ,ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರಂತಹ ಗುಣಗಳನ್ನು ಹೊಂದಿರುವ ರಾಹುಲ್, ಸರಳ ಸ್ವಭಾವ ಹಾಗೂ ಗುರಿಯನ್ನು ಸಾಧಿಸಲು ಹವಣಿಸುವ ವ್ಯಕ್ತಿಯಾಗಿದ್ದಾರೆ.

2014ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಲು, ಕಾಂಗ್ರೆಸ್ ಪಕ್ಷದ ಗೆಲುವಿಗೆ ಜನತೆ ಮತ ನೀಡಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ.ರೋಶಯ್ಯ ಕರೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ