ಜ್ಞಾನೇಶ್ವರಿ ರೈಲು ದುರಂತಕ್ಕೆ ಸಂಬಂಧಿಸಿದಂತೆ,ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
ಮಾವೋ ಪರ ಸಹಾನುಭೂತಿಯನ್ನು ಹೊಂದಿದ ಪೀಪಲ್ಸ್ ಎಗೈಸ್ಟ್ ಪೊಲೀಸ್ ಅಟ್ರೋಸೈಟಿಸ್(ಪಿಸಿಎಪಿಎ) ಸಂಘಟನೆಯ ಕಾರ್ಯಕರ್ತನಾದ ಭೋಲಾನಾಥ್ ಮಹತೋ ಎಂಬಾತನನ್ನು ಪಶ್ಚಿಮ ಮಿಡ್ನಾಪುರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಹಳಿಯಲ್ಲಿರುವ ಕ್ಲಿಪ್‌ಗಳನ್ನು ಕತ್ತರಿಸುವಲ್ಲಿ ಮಹತೋ ಪ್ರಮುಖ ಪಾತ್ರವಹಿಸಿದ್ದಾನೆ. ಕ್ಲಿಪ್‌ಗಳನ್ನು ಕಳಚಿದ್ದರಿಂದ ರೈಲು ಹಳಿ ತಪ್ಪಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೇ 28 ರಂದು ನಡೆದ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ದುರಂತದಲ್ಲಿ 148 ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದರು..