ವರ್ಷದಲ್ಲಿನ ಅತ್ಯಂತ ಕಡಿಮೆ ರಾತ್ರಿಯುಳ್ಳ ದಿನ ಮತ್ತು ವರ್ಷದ ಸುದೀರ್ಘ ಹಗಲುಳ್ಳ ದಿನ ಇಂದು (ಸೋಮವಾರ) ದಾಖಲಾಗಲಿದೆ. ಖಗೋಳ ವಿಜ್ಞಾನಿಗಳು ಈ ವಿಸ್ಮಯದ ಅಧ್ಯಯನಕ್ಕೆ ಸಿದ್ಧತೆ ನಡೆಸಿದ್ದಾರೆ.
ಫಿಲಿಪೈನ್ಸ್ ರಾಷ್ಟ್ರದಲ್ಲಿ ಸುದೀರ್ಘಾವಾಧಿಯ ಹಗಲು ದಾಖಲಾಗಲಿದೆ ಎಂದು ಜಿಯೋಫಿಸಿಕೆಲ್ ಮತ್ತು ಖಗೋಳಶಾಸ್ತ್ರ ಸರ್ವೀಸ್ ಆಡಳಿತ (ಪಿಎಜಿಎಎಸ್‌ಎ) ತಿಳಿಸಿದೆ. ಉತ್ತರ ಗೋಳಾರ್ಧದಲ್ಲಿ ಸಾಧಾರಣವಾಗಿ ಜೂನ್ 21 ಅಥವಾ 22ರಂದು ಅಲ್ಪಾವಧಿಯ ರಾತ್ರಿ ಸಂಭವಿಸಲಿದೆ ಎಂದು ಪಿಎಜಿಎಎಸ್‌ಎ ತಿಳಿಸಿದೆ.
ದೇಶದ ಖಗೋಳ ವಿಜ್ಞಾನಿಗಳು ಕೂಡಾ ದೀರ್ಘಾವಧಿಯ ಹಗಲುಳ್ಳ ದಿನವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಅಲ್ಲದೆ ಈ ವಿಸ್ಮಯ ವಿದ್ಯಮಾನದ ಅಧ್ಯಯನಕ್ಕೆ ಸಿದ್ಧತೆ ನಡೆಸಿದ್ದಾರೆ.
ಉತ್ತರ ಮತ್ತು ದಕ್ಷಿಣ ಗೋಳಾರ್ಧಗಳು ಸೂರ್ಯನಿಗೆ ನೇರವಾಗಿ ಮುಖ ಮಾಡುವುದರಿಂದ ಈ ವಿದ್ಯಮಾನ ಕಂಡುಬರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.