ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಂಗಾಲಿ ಚೆಲುವೆಗೆ ವರುಣ್ ಗಾಂಧಿ ಬೌಲ್ಡ್, ಶೀಘ್ರವೇ ಮದುವೆ (Yamini Roy Chowdhary | Varun Gandhi | BJP | Maneka Gandhi)
Bookmark and Share Feedback Print
 
ಬೆಂಗಾಲಿ ಫ್ಯಾಷನ್ ಡಿಸೈನರ್ ಯಾಮಿನಿ ರಾಯ್ ಚೌಧರಿ ಎಂಬಾಕೆಯೊಂದಿಗೆ ಅನುರಕ್ತನಾಗಿರುವ ಬಿಜೆಪಿ 'ಫೈರ್ ಬ್ರಾಂಡ್' ನಾಯಕ ವರುಣ್ ಗಾಂಧಿ ಇದೇ ವರ್ಷದ ಡಿಸೆಂಬರ್ 11ರಂದು ಮದುವೆಯಾಗಲಿದ್ದಾರೆ ಎಂದು ವರದಿಗಳು ಹೇಳಿವೆ.

ವರದಿಗಳ ಪ್ರಕಾರ ಕಳೆದ ಹಲವಾರು ವರ್ಷಗಳಿಂದ ವರುಣ್ ಮತ್ತು ಯಾಮಿನಿ ನಡುವೆ ಗೆಳೆತನವಿತ್ತು. ಅದು ನಿಧಾನವಾಗಿ ಪ್ರೇಮಕ್ಕೆ ತಿರುಗಿತ್ತು. ಕೆಲವು ತಿಂಗಳುಗಳ ಹಿಂದೆಯೇ ಅವರ ಮದುವೆ ನಿಶ್ಚಿತಾರ್ಥವೂ ನಡೆದಿತ್ತು.

ಇದನ್ನು ವರುಣ್ ಗಾಂಧಿ ನಿರಾಕರಿಸಿದ್ದಾರೆ. ನಮ್ಮ ನಡುವೆ ಗೆಳೆತನ ಇರುವುದು ಹೌದು, ಅದು ಪ್ರೇಮವಲ್ಲ ಎಂದಿದ್ದಾರೆ. ಆದರೆ ಇವರ ಗೆಳೆಯರು ವರುಣ್-ಯಾಮಿನಿ ಸಂಬಂಧ ಮದುವೆ ಹಂತಕ್ಕೆ ಹೋಗಿರುವುದು ಹೌದು ಎಂದು ಸ್ಪಷ್ಟಪಡಿಸಿದ್ದಾರೆ.

ಸಂಜಯ್ ಗಾಂಧಿ ಮತ್ತು ಮೇನಕಾ ಗಾಂಧಿಯ 30ರ ಹರೆಯದ ಪುತ್ರ ವರುಣ್ ಮತ್ತು ಯಾಮಿನಿ ಕೆಲ ವರ್ಷಗಳ ಹಿಂದೆಯೇ ಮದುವೆಯಾಗಬೇಕಿತ್ತು. ವರದಿಗಳ ಪ್ರಕಾರ ಇವರ ಸಂಬಂಧ ಐದಾರು ವರ್ಷಗಳಿಗೂ ಹಳೆಯದಾಗಿದ್ದು, ಆಗ ವರುಣ್ ರಾಜಕೀಯವಾಗಿ ಹೆಚ್ಚು ಸಾಧನೆ ಮಾಡಿರದೇ ಇದ್ದ ಕಾರಣ ಮದುವೆ ಮುಂದಕ್ಕೆ ಹಾಕಲಾಗಿತ್ತು.

ಖ್ಯಾತ ಚಿತ್ರ ವಿಮರ್ಶಕಿ ಅರುಣಾ ವಾಸುದೇವ್ ಪುತ್ರಿಯಾಗಿರುವ ಯಾಮಿನಿ ರಾವ್ ಪ್ಯಾರಿಸ್‌ನ ಸರ್ಬೋನ್ ವಿಶ್ವವಿದ್ಯಾಲಯದಲ್ಲಿ ಲಲಿತ ಕಲೆ ಮತ್ತು ಗ್ರಾಫಿಕ್ಸ್‌ನಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಅದಕ್ಕೂ ಮೊದಲು ಚಂಡೀಗಢದ ಸನಾವರ್‌ನಲ್ಲಿನ ಸೈಂಟ್ ಸ್ಟೀಫನ್ಸ್ ಮತ್ತು ಲಾರೆನ್ಸ್ ವಿದ್ಯಾಸಂಸ್ಥೆಯಲ್ಲಿ ತತ್ವಶಾಸ್ತ್ರ ಪದವಿ ವಿದ್ಯಾಭ್ಯಾಸ ಮಾಡಿದ್ದರು.

ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಯಾಮಿನಿ ಪ್ಯಾರಿಸ್‌ನಲ್ಲಿನ ಜಾಹೀರಾತು ಸಂಸ್ಥೆಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿದ ನಂತರ ಭಾರತಕ್ಕೆ ಮರಳಿದ್ದು, ಇದೀಗ ಸ್ವಂತ ಗ್ರಾಫಿಕ್ ಡಿಸೈನಿಂಗ್ ಸಂಸ್ಥೆಯೊಂದನ್ನು ತೆರೆದಿದ್ದಾರೆ.

ಇದೇ ವರ್ಷದ ಆರಂಭದಲ್ಲಿ ವರುಣ್-ಯಾಮಿನಿ ವಿವಾಹ ನಿಶ್ಚಿತಾರ್ಥ ನಡೆದಿದ್ದು, ಡಿಸೆಂಬರ್ 11ರಂದು ಮದುವೆ ನಡೆಯಲಿದೆ ಎಂದು ಬೆಂಗಾಲಿ ಪತ್ರಿಕೆಯೊಂದು ಇದೀಗ ವರದಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ