ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇರಳದ ಕೆಲವು ಸಂಘಟನೆಗಳಿಗೆ ಐಎಸ್ಐ ಸಂಬಂಧ: ಸಚಿವ (ISI | Kerala | Pakistan | Mulapally Ramachandran)
Bookmark and Share Feedback Print
 
ಕೇರಳದ ಕೆಲವು ಸಂಘಟನೆಗಳ ಜತೆ ಮತ್ತು ಇತರ ಕೆಲವು ಕ್ಷೇತ್ರಗಳೊಂದಿಗೆ ಪಾಕಿಸ್ತಾನದ ಕುಖ್ಯಾತ ಬೇಹುಗಾರಿಕಾ ಸಂಸ್ಥೆ ಐಎಸ್ಐ ಜತೆ ಸಂಬಂಧವಿದೆ ಎಂದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಮುಲಪಲ್ಲಿ ರಾಮಚಂದ್ರನ್ ಬಹಿರಂಗಪಡಿಸಿದ್ದಾರೆ.

ಕೇರಳ ಮೂಲದ ಮಧ್ಯ ಪ್ರಾಚ್ಯಗಳಲ್ಲಿನ ಕೆಲವು ಸಂಘಟನೆಗಳಿಗೆ ಐಎಸ್ಐ ಸಂಬಂಧವಿರುವುದು ಗೃಹ ಸಚಿವಾಲಯಕ್ಕೆ ತಿಳಿದಿದೆಯೇ ಎಂಬ ಪ್ರಶ್ನೆಗೆ ರಾಮಚಂದ್ರನ್ ಈ ರೀತಿ ಉತ್ತರಿಸಿದರು.

ನಾವು ಹೊಂದಿರುವ ಎಲ್ಲಾ ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲು ನನಗೆ ಸಾಧ್ಯವಿಲ್ಲ. ಆದರೆ ಇಲ್ಲಿನ ಕೆಲವು ನಿರ್ದಿಷ್ಟ ಸಂಘಟನೆಗಳ ಜತೆ ಮತ್ತು ಇತರ ಕೆಲವು ಕ್ಷೇತ್ರಗಳಲ್ಲಿ ಐಎಸ್ಐ ತನ್ನ ನಿಯಂತ್ರಣ ಅಥವಾ ಆಸಕ್ತಿಯನ್ನು ಹೊಂದಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದರು.

ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಕ್ಯಾಂಪಸ್‌ನಲ್ಲಿನ ಕಾರ್ಯಕ್ರಮವೊಂದಕ್ಕಾಗಿ ಅವರು ತಿರುವನಂತಪುರಕ್ಕೆ ಆಗಮಿಸಿದ್ದರು.

ಅದೇ ಹೊತ್ತಿಗೆ 2008ರ ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭದ್ರತಾ ಪಡೆಗಳು ಕಿರುಕುಳ ನೀಡುತ್ತಿವೆ ಮತ್ತು ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಸಿಕ್ಕಿಸಿ ಹಾಕುತ್ತಿವೆ ಎಂಬ ಪಿಡಿಪಿ ನಾಯಕ ಅಬ್ದುಲ್ ನಾಸಿರ್ ಮದನಿ ಆರೋಪವನ್ನು ತಳ್ಳಿ ಹಾಕಿರುವ ಸಚಿವರು, ಈ ಹೇಳಿಕೆ ನಿಜವಲ್ಲ ಎಂದುತ್ತರಿಸಿದ್ದಾರೆ.

ಮದನಿ ಮುಗ್ಧನಾಗಿದ್ದರೆ, ನಿರಪರಾಧಿಯಾಗಿದ್ದರೆ ಅವರು ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ. ಕಾನೂನಿನ ಕುಣಿಕೆಯಿಂದ 100 ಮಂದಿ ಕ್ರಿಮಿನಲ್‌ಗಳು ತಪ್ಪಿಸಿಕೊಂಡರೂ, ಓರ್ವ ಮುಗ್ಧ ವ್ಯಕ್ತಿಯನ್ನು ಶಿಕ್ಷೆಗೊಳಪಡಿಸುವುದು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟ ಎಂದರು.

ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಮದನಿಯ ಕೈವಾಡವಿಲ್ಲ, ಅವರನ್ನು ಸಿಕ್ಕಿಸಿ ಹಾಕಲಾಗುತ್ತಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸುತ್ತಿದ್ದ ರಾಮಚಂದ್ರನ್, ಅವರು ನಿರಪರಾಧಿಯಾಗಿದ್ದರೆ ಭಯ ಯಾಕೆ? ಹಾಗಿದ್ದರೆ ಅವರು ಅದನ್ನು ನ್ಯಾಯಾಲಯದಲ್ಲಿ ನಿರೂಪಿಸಲಿ ಎಂದರು.
ಸಂಬಂಧಿತ ಮಾಹಿತಿ ಹುಡುಕಿ