ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತೀಯ ಯೋಧನನ್ನು ಲಿಬೀರಿಯಾದಲ್ಲಿ ಕೊಂದ ಪಾಕ್ ? (CRPF | Liberia | Lt Murad | Pakistani officer)
Bookmark and Share Feedback Print
 
ಭಾರತದ ಕೇಂದ್ರ ಮೀಸಲು ಪೊಲೀಸ್ ಪಡೆಗೆ ಸೇರಿದ ಯೋಧನೊಬ್ಬನನ್ನು ಲಿಬೀರಿಯಾದಲ್ಲಿ ಕೊಂದು ಹಾಕಲಾಗಿದೆ. ಈ ಕೃತ್ಯ ನಡೆಸಿರುವುದು ಪಾಕಿಸ್ತಾನದ ಅಧಿಕಾರಿಯೆಂಬುದು ಪ್ರಾಥಮಿಕ ಮಾಹಿತಿ. ಪಾಕಿಸ್ತಾನಕ್ಕೆ ಸೇರಿದ ಗನ್ನಿನಿಂದ ಈ ಗುಂಡಿನ ದಾಳಿ ನಡೆಸಲಾಗಿತ್ತು ಎನ್ನುವುದೇ ಇದಕ್ಕೀಗ ಸಿಕ್ಕಿರುವ ಪುರಾವೆ.

ಹಿಂಸಾಚಾರ ಪೀಡಿತ ಲಿಬೀರಿಯಾದಲ್ಲಿ ಶಾಂತಿ ಮರುನೆಲೆಗೊಳಿಸಬೇಕೆಂಬ ಉದ್ದೇಶದಿಂದ ವಿಶ್ವಸಂಸ್ಥೆ ಕರೆಸಿಕೊಂಡಿರುವ ಹಲವು ರಾಷ್ಟ್ರಗಳ ಭದ್ರತಾ ಸಿಬ್ಬಂದಿಗಳು ಲಿಬೀರಿಯಾ ರಾಜಧಾನಿ ಗ್ರಾಂಡ್ ಗೆಡ್ಡಾ ಕಂಟ್ರಿಯಲ್ಲಿ ತಂಗಿದ್ದರು.

ಜೂನ್ ಎಂಟರಂದು ಮುಂಜಾನೆ 4.45ರ ಹೊತ್ತಿಗೆ ಇಲ್ಲಿನ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಗಳಿದ್ದ ಶಿಬಿರದ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆದಿತ್ತು. ಈ ಸಂದರ್ಭದಲ್ಲಿ ಜೀತ್ ಸಿಂಗ್ ಮತ್ತು ಕಪ್ತಾನ್ ಸಿಂಗ್ ಎಂಬ ಇಬ್ಬರು ಯೋಧರು ಕರ್ತವ್ಯದಲ್ಲಿದ್ದರು. ವರದಿಗಳ ಪ್ರಕಾರ ಅಪರಿಚಿತ ವ್ಯಕ್ತಿಯೋರ್ವ ಭಾರತೀಯ ಯೋಧರು ತಂಗಿದ್ದ ಶಿಬಿರದ ಮೇಲೆ ಅಪ್ರಚೋದಿತವಾಗಿ ಯದ್ವಾತದ್ವಾ ಗುಂಡು ಹಾರಿಸಿದ್ದ.

ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಪರಾರಿಯಾದ ಅಪರಿಚಿತ ತನ್ನ ಬಂದೂಕನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದ. ಅದು ಪಾಕಿಸ್ತಾನದ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಮುರಾದ್‌ಗೆ ಸೇರಿದ್ದು ಎಂದು ತನಿಖೆಯಿಂದ ತಿಳಿದು ಬಂದಿದೆ. ಹಾಗಾಗಿ ಆತನೇ ಗುಂಡು ಹಾರಿಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಘಟನೆಯನ್ನು ಸಿಆರ್‌ಪಿಎಫ್ ಮಹಾ ನಿರ್ದೇಶಕ ವಿಕ್ರಮ್ ಶ್ರೀವಾತ್ಸವ ಖಚಿತಪಡಿಸಿದ್ದಾರೆ. ಪಾಕಿಸ್ತಾನಿ ಅಧಿಕಾರಿ ಪಾಲ್ಗೊಂಡಿದ್ದಾನೆ ಎಂದು ಹೇಳಲಾಗಿರುವ ಘಟನೆಯಲ್ಲಿ ನಮ್ಮ ಓರ್ವ ಯೋಧ ಸಾವನ್ನಪ್ಪಿರುವುದು ಹೌದು. ಈ ಸಂಬಂಧ ನಾವು ಲಿಬೀರಿಯಾ ಕಚೇರಿಯಿಂದ ಪಡೆದುಕೊಂಡ ಮಾಹಿತಿಯನ್ನು ವಿಶ್ವಸಂಸ್ಥೆಯ ಬಾಹ್ಯ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿಯವರಿಗೆ ರವಾನಿಸಿದ್ದೇವೆ ಎಂದಿದ್ದಾರೆ.

ವಿಶ್ವಸಂಸ್ಥೆಯ ಲಿಬೀರಿಯಾ ಘಟಕ ನಡೆಸಿರುವ ತನಿಖೆಗಳ ಪ್ರಕಾರ ಅಲ್ಲಿ ಪತ್ತೆಯಾಗಿರುವುದು ಪಾಕಿಸ್ತಾನಿ ಅಧಿಕಾರಿ ಮುರಾದ್‌ಗೆ ಸೇರಿದ ಬಂದೂಕು. ಅಲ್ಲಿ 40 ಸುತ್ತು ಗುಂಡುಗಳನ್ನು ಹಾರಿಸಲಾಗಿರುವ ಪುರಾವೆಗಳು ಸಿಕ್ಕಿವೆ. ಇದೂ ಪಾಕಿಸ್ತಾನಿ ಅಧಿಕಾರಿಗೆ ನೀಡಲಾಗಿದ್ದ ಗುಂಡುಗಳು. ಆತನನ್ನು ವಿಚಾರಣೆಗೊಳಪಡಿಸಲಾಗಿದೆ.

ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳ ಸುಮಾರು 9,644 ಭದ್ರತಾ ಸಿಬ್ಬಂದಿಗಳು ಲಿಬೀರಿಯಾದಲ್ಲಿ ವಿಶ್ವಸಂಸ್ಥೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತದಿಂದ ಸಿಆರ್‌ಪಿಎಫ್ ಯೋಧರನ್ನು ಲಿಬೀರಿಯಾಕ್ಕೆ ಕಳುಹಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ