ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೈಲ್ವೇ ನೇಮಕಾತಿ ಹಗರಣ; ಹಲವು ಅಧಿಕಾರಿಗಳ ಬಂಧನ (RRB scam | CBI | S N Sharma | Railway Recruitment Board)
Bookmark and Share Feedback Print
 
ಬಹುಕೋಟಿ ರೈಲ್ವೇ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ ರೈಲ್ವೇ ನೇಮಕಾತಿ ಮಂಡಳಿಯ ಅಮಾನತುಗೊಂಡಿರುವ ಅಧ್ಯಕ್ಷ ಎಸ್.ಎನ್. ಶರ್ಮಾ ಸೇರಿದಂತೆ ಹಲವು ಅಧಿಕಾರಿಗಳನ್ನು ಸಿಬಿಐ ಬಂಧಿಸಿದೆ.

ಶರ್ಮಾ ಪುತ್ರ ಸೇರಿದಂತೆ ಇತರ ಏಳು ಮಂದಿ ಪಾಲ್ಗೊಂಡಿದ್ದ ನೇಮಕಾತಿ ಹಗರಣದಲ್ಲಿ ಶರ್ಮಾ ಪಾತ್ರಕ್ಕಾಗಿ ಇದೀಗ ಆತನನ್ನು ಬಂಧಿಸಲಾಗಿದೆ.

ರಾಯ್ಪುರದಲ್ಲಿನ ಹಿರಿಯ ವಿಭಾಗೀಯ ಅಧಿಕಾರಿ ಜಿ. ಸೇಥಿಯನ್ನು ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಸಿಬಿಐ ಬಂಧಿಸಿದೆ. ಬಂಧಿತ ಇಬ್ಬರನ್ನೂ ನಾಳೆ ಸಿಬಿಐ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತದೆ ಎಂದು ಸಿಬಿಐ ಡಿಐಜಿ ವಿವಿ ಲಕ್ಷ್ಮಿ ನಾರಾಯಣ ತಿಳಿಸಿದ್ದಾರೆ.

ಪ್ರಶ್ನೆ ಪತ್ರಿಕೆಗಳ ಸೋರಿಕೆ ಕುರಿತು ವಿಚಾರಣೆ ನಡೆಸಲು ಶರ್ಮಾ ಮತ್ತು ಸೇಥಿಯನ್ನು ಮುಂಬೈ ಮತ್ತು ರಾಯ್ಪುರಗಳಿಂದ ಕರೆಸಿಕೊಳ್ಳಲಾಗಿತ್ತು ಎಂದು ಅವರು ವಿವರಣೆ ನೀಡಿದ್ದಾರೆ.

ಇದೇ ಪ್ರಕರಣ ಸಂಬಂಧ ಕೆಲ ದಿನಗಳ ಹಿಂದಷ್ಟೇ ಎಂಟು ಮಂದಿಯನ್ನು ಸಿಬಿಐ ಬಂಧಿಸಿತ್ತು. ಅವರಿಗೆ ಮೂರು ದಿನಗಳ ಪೊಲೀಸ್ ಕಸ್ಟಡಿಯನ್ನು ನೀಡಲಾಗಿದೆ.

ಜೂನ್ 19ರಂದು ಹಲವು ಕಡೆ ದಾಳಿ ನಡೆಸಿದ್ದ ಸಿಬಿಐ, ಬಹುಕೋಟಿ ರೈಲ್ವೇ ನೇಮಕಾತಿ ಹಗರಣವನ್ನು ಬಯಲಿಗೆಳೆದಿತ್ತು. ಈ ಸಂದರ್ಭದಲ್ಲಿ ಶರ್ಮಾ ಪುತ್ರ ವಿವೇಕ್ ಭಾರದ್ವಾಜ್ ಶರ್ಮಾ, ಎ. ಜಗನ್ನಾಥಮ್, ರಾಯ್ಪುರ ಎಡಿಆರ್ಎಂ ಮತ್ತು ಆತನ ಪುತ್ರ ಸೃಜನ್ ಎಂಬಾತ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ