ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಲ್ಲವೂ 'ಅಲ್ಲಾಹು' ಕೈಯಲ್ಲಿದೆ: ಅಫ್ಜಲ್ ಗುರು ಕುಟುಂಬ (Afzal Guru | Parliament attack | Tabassum | BJP)
Bookmark and Share Feedback Print
 
ನಾವು ಎಲ್ಲವನ್ನೂ ಅಲ್ಲಾಹುವಿನ ಕೃಪೆಗೆ ಬಿಟ್ಟಿದ್ದೇವೆ -- ಹೀಗೆಂದು ಉಮ್ಮಳಿಸಿ ಬರುತ್ತಿರುವ ದುಃಖದೊಂದಿಗೆ ಪ್ರತಿಕ್ರಿಯೆ ನೀಡಿರುವುದು
ಸಂಸತ್ ದಾಳಿ ಮಾಡಿದ್ದ ಭಯೋತ್ಪಾದಕ ಅಫ್ಜಲ್ ಗುರು ಕುಟುಂಬಿಕರು.

ಕೇಂದ್ರ ಗೃಹ ಸಚಿವಾಲಯವು ಆತನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವಂತೆ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ಬಂದಿದೆ.
PR

ಬೆಳವಣಿಗೆಗಳ ಬಗ್ಗೆ ನಮಗೇನೂ ತಿಳಿದಿಲ್ಲ. ಕ್ಷಮಾದಾನ ಅರ್ಜಿಯ ಕುರಿತು ಗೃಹ ಸಚಿವಾಲಯವು ಯಾವುದೇ ನಿರ್ಧಾರ ತೆಗೆದುಕೊಂಡಿರುವ ಕುರಿತು ನಮಗೆ ಮಾಹಿತಿಯಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಫ್ಜಲ್ ಸಂಬಂಧಿಯೊಬ್ಬರಹೇಳಿದ್ದಾರೆ.

ಅದೇ ಹೊತ್ತಿಗೆ ಅಫ್ಜಲ್ ಗುರುವನ್ನು ತ್ವರಿತಗತಿಯಲ್ಲಿ ಸರಕಾರವು ಗಲ್ಲಿಗೆ ಹಾಕಲಾರದು ಎಂಬ ಭರವಸೆಯೂ ಅವರದ್ದು. 'ನಾವು ಎಲ್ಲವನ್ನೂ ಅಲ್ಲಾಹುವಿಗೆ ಬಿಟ್ಟಿದ್ದೇವೆ. ನ್ಯಾಯವನ್ನು ನೀಡಲು ಅಲ್ಲಾಹುವೇ ಅತ್ಯುತ್ತಮ ನ್ಯಾಯಾಧೀಶ. ನಮ್ಮ ಪ್ರಕಾರ ಆತನ ಭವಿಷ್ಯವನ್ನು ದೇವರು ಈಗಾಗಲೇ ಬರೆದಿದ್ದಾರೆ. ಹಾಗಾಗಿ ನಾವು ಎಲ್ಲವನ್ನೂ ದೇವರ ನಿರ್ಧಾರಕ್ಕೆ ಬಿಟ್ಟಿದ್ದೇವೆ' ಎಂದಿದ್ದಾರೆ.

ಅಫ್ಜಲ್ ಗುರುವಿಗೆ ಕ್ಷಮಾದಾನ ನೀಡಬೇಕೆಂದು ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸಿದ್ದ ಆತನ ಪತ್ನಿ ತಬಾಸಮ್ ಇದೀಗ ಸರಕಾರದ ನಿರ್ಧಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾಳೆ.

ಕ್ಷಮಿಸಿ, ತಬಾಸಮ್ ಈ ಕುರಿತು ಮಾತನಾಡಲು ಸಿದ್ದರಿಲ್ಲ. ಮಾತನಾಡುವ ಪರಿಸ್ಥಿತಿಯಲ್ಲಿ ಅವರಿಲ್ಲ ಎಂದು ಶ್ರೀನಗರದಿಂದ 50 ಕಿಲೋ ಮೀಟರ್ ದೋರದಲ್ಲಿರುವ ಸೊಪೋರೆಯಲ್ಲಿನ ನರ್ಸಿಂಗ್ ಹೋಮ್‌ನಲ್ಲಿ ಕೆಲಸ ಮಾಡುತ್ತಿರುವ ಅಫ್ಜಲ್ ಸಂಬಂಧಿ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಔಷಧಿ ಮತ್ತು ಶಸ್ತ್ರಚಿಕಿತ್ಸಾ ಪರಿಕರಗಳ ವ್ಯಾಪಾರಿಯಾಗಿದ್ದ ಅಫ್ಜಲ್ ಗುರು ಸಂಸತ್ ದಾಳಿ ಪ್ರಕರಣದಲ್ಲಿ ಮರಣ ದಂಡನೆ ತೀರ್ಪು ಪಡೆದುಕೊಂಡಿದ್ದ. ಎಲ್ಲಾ ನ್ಯಾಯಾಲಯಗಳೂ ಈತನ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿದ್ದವು. ಈ ಹಿನ್ನೆಲೆಯಲ್ಲಿ ಕೊನೆಯ ಯತ್ನವಾಗಿ ರಾಷ್ಟ್ರಪತಿಗಳ ಮೊರೆ ಹೋಗಲಾಗಿತ್ತು.

ತ್ವರಿತ ಗತಿ ಭರವಸೆಯಲ್ಲಿ ಬಿಜೆಪಿ...
ಗೃಹ ಸಚಿವಾಲಯವು ಕ್ಷಮಾದಾನ ಅರ್ಜಿಯನ್ನು ತಳ್ಳಿ ಹಾಕುವಂತೆ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿರುವ ವರದಿಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ, ರಾಷ್ಟ್ರಪತಿಯವರು ಈ ಅರ್ಜಿಯನ್ನು ಆದ್ಯತೆ ಮೇರೆಗೆ ತ್ವರಿತ ಗತಿಯಲ್ಲಿ ವಿಲೇವಾರಿ ಮಾಡುವ ಭರವಸೆಯಿದೆ ಎಂದಿದೆ.

ಸಾಕಷ್ಟು ವಿಳಂಬದ ನಂತರ ಗೃಹ ಸಚಿವಾಲಯವು ಕೊನೆಗೂ ಸುಪ್ರೀಂ ಕೋರ್ಟ್ ತೀರ್ಪಿನಂತೆ ಶಿಕ್ಷೆ ಜಾರಿಗೆ ತರಲು ಶಿಫಾರಸು ಮಾಡಿದೆ. ಅದರಂತೆ ರಾಷ್ಟ್ರಪತಿಯವರು ಶಿಫಾರಸನ್ನು ಪರಿಗಣಿಸುತ್ತಾರೆ ಎಂಬ ವಿಶ್ವಾಸ ನಮ್ಮದು ಎಂದು ಬಿಜೆಪಿ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಎಂ. ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ