ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರೀತಿಸಿ ಮದುವೆಯಾದರು, ಐದೇ ದಿನದಲ್ಲಿ ಬೇರೆಯಾದರು! (marriage | Haryana | Sonu | Sonia)
Bookmark and Share Feedback Print
 
ಹದಿಹರೆಯದ ಹುಡುಗ-ಹುಡುಗಿಯರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು, ಅದೂ ಅಂತರ್ಜಾತಿ ವಿವಾಹ. ಊರಿಗೆ ಊರೇ ಅಚ್ಚರಿಯಲ್ಲಿ ಮುಳುಗಿತ್ತು. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಪಂಚಾಯಿತಿ ಮಾತುಕತೆ ನಡೆಸುತ್ತಿದ್ದಂತೆ ತಮ್ಮ ದಾಂಪತ್ಯವನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಜೋಡಿ ಬಂದಿದೆ.

ಹುಡುಗಿ ಸೋನಿಯಾ ಎಂಬ ದಲಿತ ಸಮುದಾಯಕ್ಕೆ ಸೇರಿದವಳು. ಹುಡುಗ ಸೋನು ಯಾನೆ ಸುನಿಲ್ ಮೇಲ್ಜಾತಿಯವನು. ಜೂನ್ 16ರಂದು ಗುಟ್ಟಾಗಿ ಮದುವೆಯಾದ ನಂತರ ನೋಂದಣಿಯನ್ನೂ ಮಾಡಿಸಿದ್ದಾರೆ. ಆ ನಂತರ ಊರಿಗೆ ಬಂದಿಲ್ಲ.

ಆದರೆ ಅವರು ಕೇವಲ ಐದೇ ದಿನದಲ್ಲಿ ತಮ್ಮ ಮದುವೆಯನ್ನು ಮುರಿದುಕೊಳ್ಳಲು ನಿರ್ಧರಿಸಿದ್ದಾರೆ. ಈ ಘಟನೆ ನಡೆದಿರುವುದು ಹರ್ಯಾಣದ ಹಿಸಾರ್ ಜಿಲ್ಲೆಯ ಸತ್ರೋಡ್ ಕಲಾನ್ ಗ್ರಾಮದಲ್ಲಿ.

ಸೋನು ಮತ್ತು ಸೋನಿಯಾ, ಇಬ್ಬರ ಹೆತ್ತವರೂ ಈ ಅಂತರ್ಜಾತೀಯ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅವರಿಬ್ಬರೂ ಊರವರ ಕಣ್ಣಿಗೆ ಮಣ್ಣೆರಚಿ ಇಲ್ಲಿನ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಇದೀಗ ಬೇರೆಯಾಗಲು ನಿರ್ಧರಿಸಿದ್ದಾರೆ. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಎಂದು ಇಲ್ಲಿನ ಜಾತಿ ಪಂಚಾಯಿತಿ ಸ್ಪಷ್ಟಪಡಿಸಿದೆ.

ಕೆಳಜಾತಿಯ ಹುಡುಗಿಯನ್ನು ಮದುವೆಯಾದ ಸೋನುವಿಗೆ ಜಾತಿ ಪಂಚಾಯಿತಿ ನೋಟೀಸ್ ಜಾರಿ ಮಾಡಿದ್ದು, ಅದರ ಪ್ರಕಾರ ಹುಡುಗ ಮತ್ತು ಆತನ ಕುಟುಂಬ ಗ್ರಾಮ ಬಿಟ್ಟು ತೊಲಗಬೇಕು. ಆದರೆ ನಾವು ಯಾವುದೇ ನೋಟೀಸ್ ನೀಡಿಲ್ಲ ಎಂದು ಪಂಚಾಯಿತಿ ಜಾರಿಕೊಂಡಿದೆ.

ಹುಡುಗ ಬ್ಲ್ಯಾಕ್‌ಮೇಲ್ ಮಾಡಿದ್ದ...
ಹೀಗೆಂದು ಪ್ರಕರಣಕ್ಕೆ ಹೊಸ ತಿರುವು ನೀಡಿರುವುದು ಮದು ಮಗಳು ಸೋನಿಯಾ. ತನ್ನನ್ನು ಮದುವೆಯಾಗದೇ ಇದ್ದರೆ ನಿನ್ನ ಸಹೋದರನನ್ನು ಕೊಲೆ ಮಾಡುತ್ತೇನೆ ಎಂದು ಸೋನು ಬೆದರಿಕೆ ಹಾಕಿದ್ದ, ಹಾಗಾಗಿ ನಾನು ಮದುವೆಗೆ ನಿರ್ಧರಿಸಿದೆ ಎಂದು ಸೋನಿಯಾ ದೂರಿಕೊಂಡಿದ್ದಾಳೆ.

ನನಗೆ ಸೋನುವನ್ನು ಮದುವೆಯಾಗಲು ಇಚ್ಛೆಯಿರಲಿಲ್ಲ. ನಾನು ಆತನನ್ನು ಪ್ರೀತಿಸುತ್ತಲೂ ಇರಲಿಲ್ಲ. ಆದರೆ ನನ್ನ ತಮ್ಮನನ್ನು ಕೊಂದು ಹಾಕುತ್ತೇನೆ ಎಂದು ಸೋನು ಬೆದರಿಕೆ ಹಾಕಿದ. ಇದರಿಂದಾಗಿ ನಾನು ಅನಿವಾರ್ಯವಾಗಿ ಆತನನ್ನು ಮದುವೆಯಾಗಬೇಕಾಯಿತು ಎಂದು ಆಕೆ ಹೇಳಿಕೆ ನೀಡಿದ್ದಾಳೆ.

ಈ ನಡುವೆ ನನ್ನ ಒಡವೆಯನ್ನು ಕೂಡ ಪರಿತ್ಯಕ್ತ ಗಂಡ ಎಗರಿಸಿದ್ದಾನೆ ಎಂದು ಸೋನಿಯಾ ದೂರಿದ್ದಾಳೆ. ಹೇಳಿಕೆಯನ್ನು ಗಮನಕ್ಕೆ ತೆಗೆದುಕೊಂಡಿರುವ ಹಿಸಾರ್ ಪೊಲೀಸ್ ವರಿಷ್ಠಾಧಿಕಾರಿ, ಸೋನಿಯಾ ಆರೋಪಗಳು ನಿಜವೇ ಆಗಿದ್ದರೆ ಸೋನು ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ನಮಗೆ ಬೆದರಿಕೆ ಹಾಕಲಾಗಿತ್ತು...
ನನ್ನ ಮಗ ದಲಿತ ಯುವತಿಯನ್ನು ಮದುವೆಯಾಗಿರುವುದಕ್ಕೆ ಗ್ರಾಮ ಬಿಟ್ಟು ಹೋಗಬೇಕೆಂದು ಜಾತಿ ಪಂಚಾಯಿತಿ ಆದೇಶ ನೀಡಿತ್ತು ಎಂದು ಸೋನುವಿನ ತಾಯಿ ಬಹಿರಂಗಪಡಿಸಿದ್ದಾರೆ.

ನನ್ನ ಮಗ ಮಾಡಿರುವುದು ಸರಿ ಎಂದು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಆತ ಮುಗ್ಧ ಮತ್ತು ಅಪ್ರಬುದ್ಧ. ಆ ಹುಡುಗಿ ಕೂಡ ಅದೇ ಸ್ಥಿತಿಯಲ್ಲಿದ್ದಾಳೆ. ಆದರೆ ನಾನು ಮನೆ ಬಿಟ್ಟು ಗ್ರಾಮದಿಂದ ಹೊರ ಹೋಗಲು ಶಕ್ತಳಲ್ಲ. ನನ್ನ ಗಂಡ ಈಗ ಎರಡು ತಿಂಗಳ ಹಿಂದಷ್ಟೇ ತೀರಿಕೊಂಡಿದ್ದಾರೆ ಎಂದು ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

ಅಲ್ಲದೆ ಈ ಮದುವೆಯ ನಂತರ ಮಗ ಮನೆಗೆ ಬಂದಿಲ್ಲ. ಎಲ್ಲಿಗೆ ಹೋಗಿದ್ದಾನೆಂದು ತಿಳಿದಿಲ್ಲ, ದಯವಿಟ್ಟು ಆತನನ್ನು ಹುಡುಕಿಕೊಡಿ ಎಂದು ಸೋನು ತಾಯಿ ಮನವಿ ಮಾಡಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ