ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತೀಯ ರೂಪಾಯಿಗೊಂದು ಲಾಂಛನ; ಇಂದು ನಿರ್ಧಾರ (Rupee symbol | Indian currency | US dollar | British pound)
Bookmark and Share Feedback Print
 
ಜಾಗತಿಕ ವಲಯದಲ್ಲಿ ಗಮನ ಸೆಳೆಯುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗುತ್ತಿರುವುದು ಇತ್ತೀಚಿನ ವರ್ಷಗಳ ಬೆಳವಣಿಗೆ. ಅದರಂತೆ ಇತರ ಹಲವು ಪ್ರಮುಖ ರಾಷ್ಟ್ರಗಳು ಹೊಂದಿರುವಂತೆ ಭಾರತೀಯ ರೂಪಾಯಿಗೂ ಒಂದು ಲಾಂಛನ ಬೇಕೆಂಬ ಕೂಗು ಇಂದು ನಿನ್ನೆಯದಲ್ಲ, ಕೊನೆಗೂ ಅದು ಈಡೇರುವ ಲಕ್ಷಣಗಳು ಕಾಣಿಸಿಕೊಂಡಿವೆ.

ಇಂದು ಸಭೆ ಸೇರಲಿರುವ ಕೇಂದ್ರ ಸಚಿವ ಸಂಪುಟವು ಭಾರತೀಯ ರೂಪಾಯಿಗಾಗಿನ ಲಾಂಛನವನ್ನು ಆಯ್ಕೆ ಮಾಡಲಿದೆ. ಈಗಾಗಲೇ ಹಲವು ಲಾಂಛನಗಳನ್ನು ಸಿದ್ಧಪಡಿಸಲಾಗಿದ್ದು, ಭಾರತಕ್ಕೆ ಹೊಂದಾಣಿಕೆಯಾಗುವ ಸಿಂಬಲ್ ಅಧಿಕೃತವೆನಿಸಲಿದೆ.

ಆ ಮೂಲಕ ಜಾಗತಿಕ ಕರೆನ್ಸಿಗಳಾದ ಅಮೆರಿಕನ್ ಡಾಲರ್ ($), ಬ್ರಿಟೀಷ್ ಪೌಂಡ್ (£), ಐರೋಪ್ಯ ಒಕ್ಕೂಟದ ಯೂರೋ (€) ಮತ್ತು ಜಪಾನ್‌ನ ಯೆನ್ (¥) ಗುಂಪಿಗೆ ಭಾರತದ ರೂಪಾಯಿಯೂ ಸೇರ್ಪಡೆಯಾಗಲಿದೆ.

ವಿದೇಶಿ ಕರೆನ್ಸಿಗಳು ಸ್ವಂತ ಸಂಕೇತಾಕ್ಷರಗಳ (USD, GDP, JPY, EUR) ಜತೆ ಲಾಂಛನಗಳನ್ನೂ ಹೊಂದಿವೆ. ಆದರೆ ಭಾರತವು ತನ್ನ ರೂಪಾಯಿಗೆ ಇದುವರೆಗೆ ಹೊಂದಿರುವುದು ಕೇವಲ ಸಂಕೇತಾಕ್ಷರಗಳನ್ನು ಮಾತ್ರ. 'Rs', 'Re', 'INR' ಎನ್ನುವುದೇ ಈ ಸಂಕೇತಾಕ್ಷರಗಳು. ಅದಕ್ಕಿಂತಲೂ ಗೊಂದಲದ ವಿಚಾರವೆಂದರೆ ಇವುಗಳಲ್ಲಿ ಮೊದಲೆರಡನ್ನು ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾಗಳೂ ಬಳಸುತ್ತಿರುವುದು. ಹಾಗಾಗಿ ಭಾರತಕ್ಕೆ ತನ್ನದೇ ಆದ ಲಾಂಛನ ಹೊಂದಿರಬೇಕಾದ ಅಗತ್ಯವಿದೆ.

ರೂಪಾಯಿಗೆ ಲಾಂಛನವೊಂದನ್ನು ರೂಪಿಸುವ ನಿರ್ಧಾರಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಾಕರವು ಕಳೆದ ವರ್ಷವೇ ಬಂದಿತ್ತು. ಈ ಸಂಬಂಧ ಸಾರ್ವಜನಿಕರಿಂದಲೇ ಹೊಸ ಲಾಂಛನದ ವಿನ್ಯಾಸಗಳನ್ನೂ ಆಹ್ವಾನಿಸಲಾಗಿತ್ತು. ಅದಕ್ಕಾಗಿ ಸರಕಾರ ರಚಿಸಿದ್ದ ಸಮಿತಿಯು ಇದೀಗ ಹಿಂದಿ ಅಕ್ಷರ 'र' ಹೊಂದಿರುವ ವಿನ್ಯಾಸಗಳನ್ನು ಅಂತಿಮಗೊಳಿಸಿದ್ದು, ಅವುಗಳಲ್ಲಿ ಸೂಕ್ತವಾದ ಒಂದನ್ನು ಇಂದು ಸಂಪುಟವು ಆಯ್ಕೆ ನಡೆಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ