ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪದವಿ ಬೇಕು, ಸಭೆ ಬೇಡ; ಇದು ಸಂಪುಟ ಸಚಿವರ ವೈಖರಿ! (Central govt | Cabinet Ministers | India | SM Krishna)
Bookmark and Share Feedback Print
 
ಸಚಿವರುಚಕ್ಕರ್ಹಾಜರಿ
ಎಂ.ಕೆ. ಅಳಗಿರಿ3714
ಮಮತಾ ಬ್ಯಾನರ್ಜಿ3219
ಸುಬೋಧ್ ಕಾಂತ್ ಸಹಾಯ್2823
ವಯಲಾರ್ ರವಿ2526
ಎಸ್.ಎಂ. ಕೃಷ್ಣ2427
ಫಾರೂಕ್ ಅಬ್ದುಲ್ಲಾ2229
ಮನಮೋಹನ್ ಸಿಂಗ್150
ಪ್ರಣಬ್ ಮುಖರ್ಜಿ348
ಅಂಬಿಕಾ ಸೋನಿ546
ವೀರಪ್ಪ ಮೊಯ್ಲಿ546
ಪಿ. ಚಿದಂಬರಂ843
ಮಲ್ಲಿಕಾರ್ಜುನ ಖರ್ಗೆ843
ಕಪಿಲ್ ಸಿಬಲ್843
ತಮಗೆ ಸಂಪುಟ ಸಚಿವ ಸ್ಥಾನವೇ ಬೇಕು ಎಂದು ಚುನಾವಣೆ ಮುಗಿಯುತ್ತಿದ್ದಂತೆ ಲಾಬಿ ಮಾಡಿ ಗಿಟ್ಟಿಸಿಕೊಂಡ ನಂತರ ಸಂಪುಟ ಸಭೆಗೆ ಚಕ್ಕರ್ ಹಾಕುವ ಕೇಂದ್ರ ಸಚಿವರುಗಳನ್ನು ಏನೆಂದು ಕರೆಯಬೇಕು? ಈ ಪ್ರಶ್ನೆಗೆ ಎಂ.ಕೆ. ಅಳಗಿರಿ ಮತ್ತು ಮಮತಾ ಬ್ಯಾನರ್ಜಿಯೇ ಇದಕ್ಕೆ ಉತ್ತರಿಸಬೇಕು. ಯಾಕೆಂದರೆ ಅವರು ಸಭೆಗೆ ಹಾಜರಾಗಿದ್ದಕ್ಕಿಂತ ದೂರ ಉಳಿದದ್ದೇ ಹೆಚ್ಚು!

ಈ ಸಾಲಿನಲ್ಲಿ ನಮ್ಮ ಕರ್ನಾಟಕದವರೇ ಆದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣರ ಹೆಸರೂ ರಾರಾಜಿಸುತ್ತಿದೆ. ಆದರೆ ಅವರು ಹೆಚ್ಚಿನ ಕಾಲ ಪ್ರವಾಸದಲ್ಲಿರುವುದರಿಂದ ಸಮರ್ಥನೆಗೆ ಕಾರಣವೂ ಇದೆ. ಸಂಪುಟ ಸಭೆಗೆ ಅವರ ಹಾಜರಾತಿ ಶೇ.47.

ಕಾಂಗ್ರೆಸ್ ನೇತೃತ್ವದ ಯುಪಿಎ-II ಅಧಿಕಾರಾವಧಿಯಲ್ಲಿ ಮೇ 30ರವರೆಗೆ ನಡೆದ ಒಟ್ಟು ಸಂಪುಟ ಸಭೆಗಳ ಸಂಖ್ಯೆ 51. ವರದಿಯೊಂದರ ಪ್ರಕಾರ ಈ ಸಭೆಗೆ ಅರ್ಧಕ್ಕಿಂತಲೂ ಹೆಚ್ಚು ಸಚಿವರುಗಳು ಚಕ್ಕರ್ ಹಾಕಿದ್ದೇ ಹೆಚ್ಚು.

ಸಂಪುಟ ಸಭೆಗಳಿಗೆ ಗರಿಷ್ಠವಾಗಿ ಗೈರು ಹಾಜರಾಗಿರುವುದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಎಂ.ಕೆ. ಅಳಗಿರಿ, ರೈಲ್ವೇ ಖಾತೆ ಸಚಿವೆ ಮಮತಾ ಬ್ಯಾನರ್ಜಿ, ಆಹಾರ ಸಂಸ್ಕರಣೆ ಸಚಿವ ಸುಬೋಧ್ ಕಾಂತ್ ಸಹಾಯ್ ಹಾಗೂ ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ. ಈ ನಾಲ್ವರು ಸಚಿವರ ಹಾಜರಿ ಶೇ.50ರ ಆಸುಪಾಸಿನಲ್ಲಿದೆ.

ಒಟ್ಟು 32 ಸಂಪುಟ ಸಚಿವರಲ್ಲಿ 12 ಮಂದಿ ಅಂದರೆ ಸರಿಸುಮಾರು ಮೂರನೇ ಒಂದು ಭಾಗದಷ್ಟು ಸಚಿವರು 51 ಸಭೆಗಳಲ್ಲಿ ಇದುವರೆಗೆ 15ಕ್ಕೂ ಹೆಚ್ಚು ಸಭೆಗಳಿಗೆ ಚಕ್ಕರ್ ಹಾಕಿದ್ದಾರೆ.

ಒಂಬತ್ತು ಸಚಿವರು ಶೇ.80ಕ್ಕಿಂತಲೂ ಹೆಚ್ಚು ಸಂಪುಟ ಸಭೆಗಳಿಗೆ ಹಾಜರಾಗಿದ್ದಾರೆ. ಇವರಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ವಿತ್ತ ಸಚಿವ ಪ್ರಣಬ್ ಸಿಂಗ್ ಪ್ರಮುಖರು. ಇಲ್ಲಿ ಕರ್ನಾಟಕದವರೇ ಆದ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆಯವರದ್ದೂ ಅತ್ಯುತ್ತಮ ಸಾಧನೆಯಿದೆ.

ಜವಳಿ ಖಾತೆ ಸಚಿವ ದಯಾನಿಧಿ ಮಾರನ್ ಮತ್ತು ನೌಕಾಯಾನ ಸಚಿವ ಜಿ.ಕೆ. ವಾಸನ್ ತಲಾ 19 ಸಭೆಗಳಿಂದ ದೂರ ಉಳಿದಿದ್ದಾರೆ. ನೂತನ ಮತ್ತು ಪುನರ್ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಫಾರೂಕ್ ಅಬ್ದುಲ್ಲಾ 22 ಸಭೆಗಳಿಗೆ ಚಕ್ಕರ್ ಹಾಕಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ