ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಲತಾಯಿ ಮದುವೆ ಅತ್ಯಾಚಾರಕ್ಕೆ ಸಮಾನ: ದಿಯೋಬಂದ್ (marriage to step-mother | Islamic seminary | Darul Uloom Deoband | Ronak Ali)
Bookmark and Share Feedback Print
 
ತಂದೆಯ ಎರಡನೇ ಪತ್ನಿ ಅಥವಾ ತಾಯಿಯಲ್ಲದ ತಂದೆಯ ಯಾವುದೇ ಪತ್ನಿಯನ್ನು ಮದುವೆಯಾಗುವುದು ಅತ್ಯಾಚಾರಕ್ಕೆ ಸಮಾನ, ಇದನ್ನು ಇಸ್ಲಾಂ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಎಂದು ಪ್ರಕರಣವೊಂದನ್ನು ಉದಾಹರಿಸಿ ದಾರುಲ್ ಉಲೂಮ್ ದಿಯೋಬಂದ್ ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ.

ಇಂತಹ ಮದುವೆಗಳನ್ನು ಇಸ್ಲಾಂ ನಿಷೇಧಿಸುತ್ತದೆ. ಶರಿಯತ್ ಕಾನೂನಿನ ಪ್ರಕಾರ ಈಗ ನಡೆದಿರುವ ಮದುವೆ ಅಪಮಾನಕಾರಿ ಮತ್ತು ಅಕ್ರಮ. ಈ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲಾಗುತ್ತದೆ ಎಂದು ದಾರೂಲ್ ಉಲೂಮ್ ದಿಯೋಬಂದ್ ಸಹಾಯಕ ಉಪಕುಲಪತಿ ಮೌಲಾನಾ ಅಬ್ದುಲ್ ಖಾಲಿಖ್ ಮದ್ರಾಸಿ ತಿಳಿಸಿದ್ದಾರೆ.

ಮಲತಾಯಿಯನ್ನೇ ಮದುವೆಯಾಗಿದ್ದ ಧೂರ್ತ..
ಉತ್ತರ ಪ್ರದೇಶದ ಬಾಗ್ಪಾತ್ ಜಿಲ್ಲೆಯ ಗೋರಿಪುರ ಗ್ರಾಮದಲ್ಲಿ ನಡೆದ ಘಟನೆಯಿದು. ಇಲ್ಲಿನ 23ರ ಹರೆಯದ ರೋನಕ್ ಆಲಿ ಎಂಬ ವಿವಾಹಿತ ತನ್ನ ಮಲತಾಯಿ, 38ರ ಹರೆಯದ ಹಸ್ನೋ ಬೇಗಂಳ ಜತೆ ಪರಾರಿಯಾಗಿ ಮದುವೆಯಾಗಿದ್ದ.

ಈ ಹಿನ್ನೆಲೆಯಲ್ಲಿ ರೋನಕ್ ತಂದೆ ಇಕ್ಬಾಲ್ ಸ್ಥಳೀಯ ಪೊಲೀಸರಲ್ಲಿ 'ಕಾಣೆಯಾಗಿದ್ದಾರೆ' ಎಂದು ದೂರು ನೀಡಿದ್ದರು.

ದೂರಿನ ಪ್ರಕಾರ ಇಕ್ಬಾಲ್ ತನ್ನ ಮೊದಲ ಪತ್ನಿಯ ಮರಣದ ನಂತರ 2005ರಲ್ಲಿ ಹಸ್ನೋ ಬೇಗಂಳನ್ನು ವಿವಾಹವಾಗಿದ್ದರು. ರೋನಕ್‌ಗೆ ವರ್ಷದ ಹಿಂದಷ್ಟೇ ಯುವತಿಯೊಬ್ಬಳ ಜತೆ ಮದುವೆಯಾಗಿತ್ತು. ಆದರೆ ತನ್ನ ತಂದೆಯ ಪತ್ನಿಯ ಜತೆಗೇ ಅನುರಕ್ತನಾಗಿದ್ದ ರೋನಕ್, ಜೂನ್ 13ರಂದು ಪರಾರಿಯಾಗಿದ್ದ.

ಮೊನ್ನೆಯಷ್ಟೇ ರೋನಕ್ ಮತ್ತು ಬೇಗಂ ಗ್ರಾಮಕ್ಕೆ ಮರಳಿದ ನಂತರ ಪತ್ನಿಗಾಗಿ ಅಪ್ಪ-ಮಗನ ನಡುವೆ ಜಗಳ ನಡೆದಿತ್ತು. ನಂತರ ಮಧ್ಯಪ್ರವೇಶಿಸಿದ್ದ ಪೊಲೀಸರು, ಮೂವರನ್ನೂ ಬಂಧಿಸಿ ಇಲ್ಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಲಾಲ್ಮಣಿ ಮಿಶ್ರಾರೆದುರು ಹಾಜರುಪಡಿಸಲಾಗಿತ್ತು.

ತಾವು ಪ್ರತ್ಯೇಕವಾಗಿ ವಾಸಿಸಲು ಅವಕಾಶ ನೀಡಬೇಕು ಎಂದು ಈ ಸಂದರ್ಭದಲ್ಲಿ ರೋನಕ್ ಮತ್ತು ಬೇಗಂ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ