ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕನ್ನಡಿಗ ಕಾರ್ಟೂನಿಸ್ಟ್ ಲಕ್ಷ್ಮಣ್‌ಗೀಗಲೂ ಚಿತ್ರ ಬಿಡಿಸುವಾಸೆ! (Cartoonist | R K Laxman | Breach Candy hospital | Mysore)
Bookmark and Share Feedback Print
 
ಈಗಷ್ಟೇ ಸುಧಾರಿಸಿಕೊಳ್ಳುತ್ತಿರುವ ಕರ್ನಾಟಕ ಸಂಜಾತ ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ. ಲಕ್ಷ್ಮಣ್, ನನಗೆ ಪೆನ್ನು ಮತ್ತು ಪೇಪರ್ ಬೇಕೆಂದು ಕೇಳುವಷ್ಟು ಸುಧಾರಿಸಿದ್ದಾರೆ ಎಂದು ಅವರ ಸೊಸೆ ತಿಳಿಸಿದ್ದಾರೆ.

ಅವರಿಗೀಗ ಚಿತ್ರ ಬಿಡಿಸಲು ಪೆನ್ನು ಮತ್ತು ಪೇಪರ್ ಬೇಕಾಗಿದೆ. ತನ್ನ ಕಾಗದದ ಮೇಲೆ ತನ್ನ ಸಹಿಯನ್ನು ಹಾಕಲೂ ಅವರು ಯತ್ನಿಸುತ್ತಿದ್ದಾರೆ. ಅವರಿಗೆ ನಾನು ಅವರ ಡ್ರಾಯಿಂಗ್ ಪ್ಯಾಡ್ ನೀಡಿದ್ದು, ಇಲ್ಲಿ ನೀವು ಚಿತ್ರ ಬಿಡಿಸಿ ಎಂದಿದ್ದೇನೆ. ಈ ಹಿಂದಿಗಿಂತ ಈಗ ಅವರ ಸ್ಥಿತಿ ಸುಧಾರಿಸಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಲಕ್ಷ್ಮಣ್ ಸೊಸೆ ಉಷಾ ವಿವರಣೆ ನೀಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಪುಣೆಯಲ್ಲಿ ನೆಲೆಸಿರುವ ಲಕ್ಷ್ಮಣ್‌ ಮೂರು ಲಘು ಪಾರ್ಶವಾಯು ಹೊಡೆತಕ್ಕೊಳಗಾದ ನಂತರ ಅವರನ್ನು ತುರ್ತು ವಿಮಾನದ ಮೂಲಕ ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅದಕ್ಕೂ ಮೊದಲು ಅವರನ್ನು ಪುಣೆಯಲ್ಲಿನ ಸಹ್ಯಾದ್ರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅವರಿಗೆ ಎರಡು ಬಾರಿ ಲಕ್ವ ಹೊಡೆತಕ್ಕೊಳಗಾಗಿದ್ದರಿಂದ ಅವರ ದೇಹದ ಬಲಭಾಗಕ್ಕೆ ತೊಂದರೆಯಾಗಿತ್ತು. ಅಲ್ಲದೆ ಅವರ ಮಾತನಾಡುವ ಶಕ್ತಿಯೂ ಕುಂಠಿತವಾಗಿತ್ತು.

ಮಧುಮೇಹ ರೋಗಿಯಾಗಿರುವ ಲಕ್ಷ್ಮಣ್, ಮೂತ್ರಪಿಂಡ ಸಮಸ್ಯೆಯನ್ನೂ ಹೊಂದಿದ್ದಾರೆ. ಇದರ ಜತೆ ಹಲವು ಇನ್ನಿತರ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳೂ ಸೇರಿಕೊಂಡಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇವರು ಮೈಸೂರಿನವರು...
ಕನ್ನಡದ 'ಕೊರವಂಜಿ' ಪತ್ರಿಕೆ ಮೂಲಕ ಬೆಳಕಿಗೆ ಬಂದ ಲಕ್ಷ್ಮಣ್ ಕುಂಚ ಕಲೆ ಪ್ರಸಿದ್ಧಿ ಪಡೆದದ್ದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ. ಶ್ರೀ ಸಾಮಾನ್ಯ ಎಂದು ಅವರು ತನ್ನ ವ್ಯಂಗ್ಯಚಿತ್ರದಲ್ಲಿ ಸೃಷ್ಟಿಸಿದ ಪಾತ್ರ ಭಾರೀ ಜನಪ್ರಿಯತೆ ಪಡೆದಿತ್ತು. ಅವರ ಹಿಂದಿನ ಕಾರ್ಟೂನ್‌ಗಳು ಇಂದಿಗೂ ಅಷ್ಟೇ ಗಮನ ಸೆಳೆಯುತ್ತಿರುವುದು ಅದಕ್ಕೆ ಉದಾಹರಣೆ.

ಇಂತಹ ಶ್ರೀ ಸಾಮಾನ್ಯನ ಸೃಷ್ಟಿಕರ್ತ ಲಕ್ಷ್ಮಣ್ ಜನಿಸಿದ್ದು 1924ರ ಅಕ್ಟೋಬರ್ 23ರಂದು ಮೈಸೂರಿನಲ್ಲಿ. ಇಲ್ಲೇ ವಿದ್ಯಾಭ್ಯಾಸವನ್ನೂ ಮಾಡಿದ್ದ ಅವರು ನಂತರದ ದಿನಗಳಲ್ಲಿ ಶಿವಸೇನಾ ವರಿಷ್ಠ ಬಾಳಾ ಠಾಕ್ರೆ ಸೇರಿದಂತೆ ಹಲವು ಪ್ರಸಿದ್ಧ ವ್ಯಕ್ತಿಗಳ ಜತೆ ಕೆಲಸ ಮಾಡಿದವರು.
ಸಂಬಂಧಿತ ಮಾಹಿತಿ ಹುಡುಕಿ