ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಂದಿರಾ ಗಾಂಧಿ ಕರಾಳ ತುರ್ತು ಪರಿಸ್ಥಿತಿಗೆ 35ರ ಬರ್ತ್‌ಡೇ! (Emergency | India | democracy | Indira Gandhi)
Bookmark and Share Feedback Print
 
ಕಾಂಗ್ರೆಸ್ ಸರಕಾರದಲ್ಲಿನ 'ಏಕೈಕ ಗಂಡಸು' ಎಂದು ಕರೆಸಿಕೊಂಡಿದ್ದ ಇಂದಿರಾ ಗಾಂಧಿ ತನ್ನ ವೈಯಕ್ತಿಕ ಕಾರಣಗಳಿಗಾಗಿ ದೇಶದ ಮೇಲೆ ಹೇರಿದ್ದ ಕರಾಳ ತುರ್ತು ಪರಿಸ್ಥಿತಿಗೆ ಬರೋಬ್ಬರಿ 35 ವರ್ಷಗಳು ತುಂಬಿವೆ. ಆದರೂ ಜನತೆ ಅಂದಿನ ಆ ಕರಾಳ ಅಧ್ಯಾಯವನ್ನು ಮರೆತಿಲ್ಲ. ಕಹಿ ಅನುಭವಗಳನ್ನು ಈಗಲೂ ಬೆಚ್ಚಗೆ ಹಂಚಿಕೊಳ್ಳುತ್ತಿದ್ದಾರೆ.

ಚುನಾವಣೆಯಲ್ಲಿ ಅಕ್ರಮ ನಡೆಸಿದ್ದಕ್ಕಾಗಿ ನ್ಯಾಯಾಲಯವು ಲೋಕಸಭಾ ಸದಸ್ಯತ್ವವನ್ನು ಅನೂರ್ಜಿತಗೊಳಿಸಿದ್ದನ್ನೇ ಮುಂದಿಟ್ಟುಕೊಂಡು ಹತಾಶರಾಗಿದ್ದ ಇಂದಿರಾ ಗಾಂಧಿ 1975ರ ಜೂನ್ 25ರಂದು ತುರ್ತು ಪರಿಸ್ಥಿತಿ ಘೋಷಿಸಿದ್ದರು. ಇದು 21 ತಿಂಗಳುಗಳ ಕಾಲ ಅಂದರೆ 1977ರ ಮಾರ್ಚ್ 21ರವರೆಗೆ ಮುಂದುವರಿದಿತ್ತು.
PTI

ಇಂದು ಅಂದರೆ 2010ರ ಜೂನ್ 25ಕ್ಕೆ ತುರ್ತು ಪರಿಸ್ಥಿತಿಗೆ 35 ವರ್ಷ ತುಂಬಿದೆ. ಈ ಹೊತ್ತಿನಲ್ಲಿ ಹಲವು ರಾಜಕೀಯ ಪಕ್ಷಗಳ ನಾಯಕರು ಅಂದಿನ ಕಾಂಗ್ರೆಸ್ ಸರಕಾರ ಹೇರಿದ್ದ ತುರ್ತು ಪರಿಸ್ಥಿತಿಯಿಂದಾಗಿ ದೇಶ ಎದುರಿಸಿದ್ದ ಸಮಸ್ಯೆ ಮತ್ತೆ ಮರುಕಳಿಸುವುದೇ ಮುಂತಾದ ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಇಂದಿರಾ ಗಾಂಧಿ ಅನುಸರಿಸಿದ ಈ ಕೆಟ್ಟ ತಂತ್ರವನ್ನು ಮುಂದಿನ ಯಾವುದೇ ಪ್ರಧಾನಿ ಅನುಸರಿಸುವುದಿಲ್ಲ ಎಂದು ಹೇಳಲಾಗದು ಎಂದು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದ ಬಿಜೆಪಿ ಮುಖಂಡ ಒ. ರಾಜಗೋಪಾಲ್ ಹೇಳಿದ್ದಾರೆ.

ಆಡಳಿತ ಪಕ್ಷವೊಂದು ಒಬ್ಬನೇ ವ್ಯಕ್ತಿಯಿಂದ ಅಥವಾ ಒಂದು ಕುಟುಂಬದಿಂದ ನಿಯಂತ್ರಿಸಲ್ಪಡುತ್ತಿರುವಾಗ, ತನಗೆ ಸಿಗುತ್ತಿರುವ ಬೆಂಬಲ ನಿಧಾನವಾಗಿ ಕಡಿಮೆಯಾಗುತ್ತಿದೆ ಎಂಬ ಭಾವನೆಯುಂಟಾದರೆ ಮತ್ತೊಂದು ತುರ್ತು ಪರಿಸ್ಥಿತಿ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಕೇರಳದ ರಾಜಕೀಯ ಮುತ್ಸದ್ಧಿ ಅಭಿಪ್ರಾಯಪಟ್ಟಿದ್ದಾರೆ.

ಇಂದಿರಾ ಗಾಂಧಿ ಸರಕಾರವು 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದಂತೆ ಮುಂದೆ ಇತರ ಯಾವುದೇ ಆಡಳಿತ ಮುಖ್ಯಸ್ಥ ನಡೆದುಕೊಳ್ಳಬಾರದೆಂಬ ನಿಟ್ಟಿನಲ್ಲಿ ಸಂವಿಧಾನದಲ್ಲಿ 1978ರಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿತ್ತು.

ಆದರೂ ಅಂತಹ ಪರಿಸ್ಥಿತಿಯನ್ನು ಬಯಸುವ ಸಂದರ್ಭವಿದ್ದರೆ ತುರ್ತು ಪರಿಸ್ಥಿತಿಯನ್ನು ಹೇರುವ ಅಧಿಕಾರ ಈಗಲೂ ಸಂವಿಧಾನದಲ್ಲಿದೆ ಎಂದು ಪಿಆರ್ಎಸ್ ಶಾಸಕಾಂಗ ಅಧ್ಯಯನ ಸಂಸ್ಥೆಯ ಎಂ.ಆರ್. ಮಾಧವನ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಇದನ್ನು ಕಾಂಗ್ರೆಸ್ ಸಂಸದ ಬೇನಿ ಪ್ರಸಾದ್ ವರ್ಮಾ ನಿರಾಕರಿಸುತ್ತಾರೆ. ಅವರ ಪ್ರಕಾರ ಭಾರತ ಮತ್ತೊಂದು ತುರ್ತು ಪರಿಸ್ಥಿತಿಯನ್ನು ಕಾಣುವುದು ಅಸಾಧ್ಯ. ಈ ಹಿಂದಿಗಿಂತ ಇಗಿನ ಪ್ರಜಾಪ್ರಭುತ್ವ ಸಂಸ್ಥೆಗಳು ಬಲಯುತಗೊಂಡಿವೆ ಎಂದು 1970ರ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದ ವರ್ಮಾ ತಿಳಿಸಿದ್ದಾರೆ.

ಇತಿಹಾಸದ ಆ ಕರಾಳ ಅಧ್ಯಾಯವನ್ನು ಜೀವಂತವಾಗಿಡಬೇಕು. ಅದನ್ನು ಮರೆತಲ್ಲಿ ಪ್ರಜಾಪ್ರಭುತ್ವವು ಅವ್ಯವಸ್ಥೆಯತ್ತ ಸಾಗಬಹುದು ಎಂದು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಸೇರಿದ್ದ ಮತ್ತೊಬ್ಬ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ