ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಸ್ತಿ ಕೊಡು, ಇಲ್ಲಾಂದ್ರೆ ಸಾಯಲು ಸಿದ್ಧನಾಗು; ತಂದೆಗೆ ಮಗ! (Senior citizen | Kevan Krishan | Vishal | property issue)
Bookmark and Share Feedback Print
 
ಜೀವನ ಪೂರ್ತಿ ತಮ್ಮ ರಕ್ತವನ್ನು ಹಂಚಿಕೊಂಡು ಹುಟ್ಟಿದವರಿಗಾಗಿ ಮುಡಿಪಾಗಿಡುವ ಜೀವಗಳಿಗೆ ಮಕ್ಕಳು ನೀಡುವ ಉಡುಗೊರೆಯಿದು ಎಂದು ಹೇಳದೆ ವಿಧಿಯಿಲ್ಲ. ಈ 62ರ ಹರೆಯ ವೃದ್ಧ ಕೂಡ ಅನುಭವಿಸುತ್ತಿರುವುದು ಅದೇ ಪಾಡು. ಸ್ವಂತಃ ಮಗನೇ ಜೀವ ಬೆದರಿಕೆ ಹಾಕುತ್ತಿದ್ದಾನೆ.

ಇಬ್ಬರು ಗಂಡು ಮಕ್ಕಳು ಹಾಗೂ ಮಗಳು ಜೀವನಪೂರ್ತಿ ಕೆಲಸ ಮಾಡದೆ ತಿಂದುಂಡರೂ ಮುಗಿಯದ ಆಸ್ತಿಯನ್ನು ಮಾಡಿಟ್ಟದ್ದೇ ತಪ್ಪು ಎಂಬ ಭಾವನೆ ಈಗ ದೆಹಲಿಯ ಕೇವನ್ ಕೃಷ್ಣನ್ ಅವರದ್ದು. ಇದಕ್ಕೆ ಕಾರಣ ಮಗ ವಿಶಾಲ್‌.

ಮಾಜಿ ಉದ್ಯಮಿಯಾಗಿರುವ ಕೃಷ್ಣನ್ ತನಗೆ ಲ್ಯಾಂಡ್ ಮಾಫಿಯಾ ಅಥವಾ ಗೂಂಡಾಗಳಿಂದ ಬೆದರಿಕೆ ಬಂದಾಗಲೂ ಜಗ್ಗಿದವರಲ್ಲ. ಆದರೆ ಸ್ವತಃ ಪುತ್ರನಿಂದಲೇ ಜೀವ ಬೆದರಿಕೆ ಬರುತ್ತದೆ ಎಂಬುದನ್ನು ನಿರೀಕ್ಷಿಸದೆ ಇದೀಗ ಕಂಗಾಲಾಗಿದ್ದಾರೆ, ನೊಂದುಕೊಂಡಿದ್ದಾರೆ, ಕುಗ್ಗಿ ಹೋಗಿದ್ದಾರೆ.

ವಿಶಾಲ್‌ಗೆ ನನ್ನೆಲ್ಲ ಆಸ್ತಿಯೂ ಬೇಕಂತೆ. ಆತ ಈಗಾಗಲೇ ರೌಡಿಗಳ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾನೆ. ಅಲ್ಲದೆ ನನ್ನ ಪಹರ್ಗಂಜ್‌ನಲ್ಲಿನ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾನೆ. ಈಗ ನನ್ನೆಲ್ಲಾ ಆಸ್ತಿಯನ್ನು ಆತನ ಹೆಸರಿಗೆ ಬರೆಯಬೇಕೆಂದು ಬೆದರಿಕೆ ಹಾಕುತ್ತಿದ್ದಾನೆ. ತಪ್ಪಿದಲ್ಲಿ ಗುಂಡಿಕ್ಕಿ ಸಾಯಿಸಲೂ ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳುತ್ತಿದ್ದಾನೆ ಎಂದು ಕೃಷ್ಣನ್ ಮಗನ ಮೇಲೆಯೇ ಆರೋಪ ಹೊರಿಸುತ್ತಾರೆ.

ಈಗಾಗಲೇ ನಾನು ಪೊಲೀಸ್ ಭದ್ರತೆ ಬೇಕೆಂದು ಅರ್ಜಿ ಸಲ್ಲಿಸಿದ್ದೇನೆ. ಆದರೆ ವಿಶಾಲ್ ವಿರುದ್ಧದ ತನಿಖೆ ನಡೆಸಿ, ನಿಜಾಂಶ ಕಂಡು ಬಂದರೆ ಮಾತ್ರ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳುತ್ತಾರೆ ಎಂದು ಈ ಹಿರಿಯ ನಾಗರಿಕ ಅಸಹಾಯಕತೆ ತೋಡಿಕೊಂಡಿದ್ದಾರೆ.

ವಿಶಾಲ್ ಈಗಾಗಲೇ ಎರಡು ಮದುವೆಯಾಗಿದ್ದಾನೆ. ಮೊದಲ ಪತ್ನಿ ಸ್ವಾತಿ ತನ್ನ ಮಾವ ಕೃಷ್ಣನ್ ಜತೆಗೇ ವಾಸಿಸುತ್ತಿದ್ದಳು. ನಂತರ ಮೋನಿಕಾ ಎಂಬ ಮತ್ತೊಬ್ಬ ಯುವತಿಯನ್ನು ವಿಶಾಲ್ ಮದುವೆಯಾಗಿದ್ದ.

ಸ್ವಾತಿ ತನ್ನ ಇಬ್ಬರು ಮಕ್ಕಳೊಂದಿಗೆ ನಮ್ಮೊಂದಿಗಿದ್ದಳು. ಆ ಹೊತ್ತಿನಲ್ಲಿ ಆಕೆಯ ಚಿಕ್ಕ ಮಗಳು ಖುಷ್ಬೂ ಹೆಸರಿನಲ್ಲಿ ನಾನು ಎಲ್ಐಸಿ ಖಾತೆಯೊಂದನ್ನು ತೆರೆದಿದ್ದೆ. ಸ್ವಲ್ಪ ಸಮಯದ ನಂತರ ಸ್ವಾತಿಯ ಮನವೊಲಿಸಿದ ವಿಶಾಲ್, ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಈಗ ವಿಶಾಲ್ ಪಹರ್ಗಂಜ್‌ನ ಫ್ಲಾಟ್‌ನಲ್ಲಿ ಇಬ್ಬರು ಪತ್ನಿಯರೊಂದಿಗೆ ವಾಸಿಸುತ್ತಿದ್ದಾನೆ. ಅಲ್ಲದೆ ನನ್ನ ಸಹಿಯನ್ನು ನಕಲು ಮಾಡಿ ಮೊಮ್ಮಗಳ ಹೆಸರಿನಲ್ಲಿದ್ದ ಎಲ್ಐಸಿ ಖಾತೆಯಿಂದ ಒಂದು ಲಕ್ಷ ರೂಪಾಯಿ ಲಪಟಾಯಿಸಿದ್ದಾನೆ ಎಂದೂ ವೃದ್ಧ ಆರೋಪಿಸಿದ್ದಾರೆ.

ಅಲ್ಲದೆ ತನ್ನ ದೊಡ್ಡ ಮಗನನ್ನು ವಿಶಾಲ್ ಕೊಲ್ಲಲು ಯತ್ನಿಸಿದ್ದ ಎಂದೂ ಗಂಭೀರ ಆರೋಪ ಮಾಡಿದ್ದಾರೆ ಕೃಷ್ಣನ್. ಅವರ ಪುತ್ರ ರಾಜನ್‌ನನ್ನು ಮದ್ಯವ್ಯಸನ ಶಿಬಿರಕ್ಕೆ ಸೇರಿಸಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿತ್ತು ಎಂದು ಅವರು ಹೇಳುತ್ತಾರೆ.

ಕುಟುಂಬದೊಳಗಿನ ಜಗಳ ಠಾಣೆಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ