ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರ ಫೋನ್ ಕದ್ದಾಲಿಕೆ; ಲಷ್ಕರ್ ಮಾಸ್ಟರ್ ಪ್ಲಾನ್ ಬಯಲಿಗೆ (Lashkar-e-Toiba | Mumbai | Indian intelligence | phone conversations)
Bookmark and Share Feedback Print
 
ಪಾಕಿಸ್ತಾನ ಮೂಲದ ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆಯು ಮುಂಬೈ, ಕೊಲ್ಕತ್ತಾ ಸೇರಿದಂತೆ ಹಲವು ನಗರಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸುತ್ತಿರುವುದು ಫೋನ್ ಕದ್ದಾಲಿಕೆ ಮೂಲಕ ಭಾರತೀಯ ಬೇಹುಗಾರಿಕಾ ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಶ್ರೀನಗರ ಮತ್ತು ಜಮ್ಮುಗಳಲ್ಲಿ ನೂತನ ದಾಳಿಗಳನ್ನು ನಡೆಸುವುದು, ಅಗ್ರ ರಾಜಕೀಯ ನಾಯಕರ ಮೇಲೆ ದಾಳಿ, ಪ್ರಮುಖ ನಗರಗಳಾದ ದೆಹಲಿ, ಮುಂಬೈ ಮತ್ತು ಕೊಲ್ಕತ್ತಾಗಳಿಗೆ ದಾಳಿ ನಡೆಸುವ ಯೋಜನೆಗಳ ಕುರಿತು ಲಷ್ಕರ್ ಕಮಾಂಡರುಗಳು ನಡೆಸಿದ ಮಾತುಕತೆಗಳನ್ನು ಬೇಹುಗಾರಿಕಾ ಇಲಾಖೆ ಅಧಿಕಾರಿಗಳು ಫೋನ್ ಕದ್ದಾಲಿಕೆ ನಡೆಸಿ ಕೇಳಿಸಿಕೊಂಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳು ವಿಶ್ವಾಸ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಮಾತುಕತೆ ಆರಂಭಿಸಿದ ಸಂದರ್ಭದಲ್ಲಿ ಗೃಹ ಸಚಿವಾಲಯವು ಭಯೋತ್ಪಾದನಾ ದಾಳಿ ಬೆದರಿಕೆಯ ಕಟ್ಟೆಚ್ಚರ ಬಿಡುಗಡೆಗೊಳಿಸಿದ ನಂತರ ಈ ಬೆಳವಣಿಗೆಗಳು ಬಯಲಿಗೆ ಬಂದಿವೆ.

ಭಾರತದ ಪ್ರಕಾರ ಪಾಕಿಸ್ತಾನದಲ್ಲಿನ ಭಯೋತ್ಪಾದನಾ ಗುಂಪುಗಳು ಮಾತುಕತೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದು, ಅದೇ ನಿಟ್ಟಿನಲ್ಲಿ ವಿಫಲಗೊಳಿಸುವ ಯತ್ನವಾಗಿ ದಾಳಿಗಳನ್ನು ನಡೆಸಲು ಯೋಜನೆ ರೂಪಿಸುತ್ತಿವೆ.

2008ರ ಮುಂಬೈ ಭಯೋತ್ಪಾದನಾ ದಾಳಿ ರೂವಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾರತ ಮಾತುಕತೆಯ ಸಂದರ್ಭದಲ್ಲಿ ಪಾಕಿಸ್ತಾನವನ್ನು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ಒತ್ತಡಕ್ಕೆ ಸಿಲುಕಿದಲ್ಲಿ ಕ್ರಮಕ್ಕೆ ಮುಂದಾಗಬಹುದು ಎನ್ನುವುದು ಉಗ್ರರ ಯೋಚನೆ. ಅಲ್ಲದೆ ಮಾತುಕತೆಯನ್ನು ಹಿಂದಿನಿಂದಲೂ ವಿರೋಧಿಸುತ್ತಾ ಬಂದಿರುವ ಭಯೋತ್ಪಾದಕರು, ವಿಫಲಗೊಳಿಸಲು ಈ ಹಿಂದೆಯೂ ಯತ್ನಿಸಿದ ಹಲವಾರು ಉದಾಹರಣೆಗಳಿವೆ.

ಹಾಗಾಗಿ ಭಾರತವು ಹೆಚ್ಚು ಜಾಗರೂಕತೆಯಿಂದ ವ್ಯವಹರಿಸುತ್ತಿದೆ. ಬೇಹುಗಾರಿಕಾ ದಳಗಳೂ ಕಣ್ಣಲ್ಲಿ ಕಣ್ಣಿಟ್ಟು ಭಯೋತ್ಪಾದಕರ ಚಲನವಲನಗಳನ್ನು ಗಮನಿಸುತ್ತಿವೆ. ದೇಶದ ಪ್ರಮುಖ ನಗರಗಳ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿರುವುದರಿಂದ ರಾಜ್ಯಗಳಿಗೆ ಹೆಚ್ಚಿನ ತಪಾಸಣೆಗಳನ್ನು ನಡೆಸುವಂತೆ ಗೃಹ ಸಚಿವಾಲಯವು ಸೂಚನೆ ನೀಡಿದೆ ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ