ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್‌ಗೆ ತೆರಳುತ್ತಿದ್ದ ಶಸ್ತ್ರಾಸ್ತ್ರ ತುಂಬಿದ ಹಡಗು ಭಾರತ ವಶಕ್ಕೆ (Karachi | Bangladesh | military hardware | M V Agean Glory)
Bookmark and Share Feedback Print
 
ಅಪಾರ ಪ್ರಮಾಣದ ಮಿಲಿಟರಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಬಾಂಗ್ಲಾದೇಶದಿಂದ ಪಾಕಿಸ್ತಾನಕ್ಕೆ ಸಾಗಿಸುತ್ತಿದ್ದ ಹಡಗೊಂದನ್ನು ಪಶ್ಚಿಮ ಬಂಗಾಲದ ಕರಾವಳಿಯಲ್ಲಿ ಭಾರತೀಯ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿದ್ದು, ಕ್ಯಾಪ್ಟನ್‌ನನ್ನು ವಿಚಾರಣೆ ನಡೆಸುತ್ತಿವೆ.

ಲಿಬೀರಿಯಾ ನೋಂದಣಿ ಹೊಂದಿರುವ ಈ ಹಡಗು ಇದೀಗ ಕೊಲ್ಕತ್ತಾ ಸಮೀಪದ ದಕ್ಷಿಣ 24 ಪರಗಣ ಜಿಲ್ಲೆಯ ಕರಾವಳಿಯಲ್ಲಿ ಲಂಗರು ಹಾಕಿದೆ. ಅದರ ಕಪ್ತಾನನ್ನು ಸಮೀಪದ ರಾಡಿಸನ್ ಫೋರ್ಟ್ ರೆಸಾರ್ಟ್‌ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಡಗಿನಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳು, ರಾಕೆಟ್ ಲಾಂಚರುಗಳು, ಸ್ಮೋಕ್ ಬಾಂಬುಗಳು ಮತ್ತು ವಿಮಾನ ನಿರೋಧಕ ಬಂದೂಕುಗಳನ್ನು ಸಾಗಿಸಲಾಗುತ್ತಿದೆ ಎಂದು ಬೇಹುಗಾರಿಕಾ ಇಲಾಖೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು.

'ಏಗನ್ ಗ್ಲೋರಿ' ಎಂಬ ಈ ಹಡಗು ಲಿಬೀರೀಯಾದ ಮನ್ರೋವಿಯಾ ಬಂದರಿನಿಂದ ಹೊರಟಿತ್ತು ಎಂದು ಹಡಗಿ ಕ್ಯಾಪ್ಟನ್ ನೀಡಿದ ದಾಖಲೆಗಳು ಹೇಳುತ್ತವೆ. ನಂತರ ಬಾಂಗ್ಲಾದೇಶದ ಚಿತ್ತಗಾಂಗ್‌ನ ಕೋಕ್ಸ್ ಬಜಾರ್ ಬಂದರಿನಲ್ಲಿ ಕೆಲವು ಕಾರುಗಳನ್ನು ಇಳಿಸಿ ಭಾರತಕ್ಕೆ ಪ್ರಯಾಣ ಬೆಳೆಸಿತ್ತು. ಇಲ್ಲಿಂದ ಕರಾಚಿಗೆ ತೆರಳಬೇಕಿತ್ತು.

ಹಡಗಿನ ಕ್ಯಾಪ್ಟನ್ ಗ್ರೀಸ್‌ನವನಾಗಿದ್ದು, ರೋಮೇನಿಯಾ, ಉಕ್ರೇನ್ ಮತ್ತು ಗ್ರೀಸ್‌ಗೆ ಸೇರಿದ ಸುಮಾರು 19 ಸಿಬ್ಬಂದಿಗಳು ಹಡಗಿನಲ್ಲಿದ್ದಾರೆ.

152.35 ಮೀಟರ್ ಉದ್ದದ ಈ ಹಡಗು ತನ್ನಲ್ಲಿನ ಕೆಲವು ಸರಂಜಾಮುಗಳನ್ನು ಕೊಲ್ಕತ್ತಾದಲ್ಲಿ ಇಳಿಸಬೇಕಾಗಿದ್ದ ಹಿನ್ನೆಲೆಯಲ್ಲಿ ಬಂಗಾಲ ಕೊಲ್ಲಿಯ ಸಂಡ್‌ಹೆಡ್‌ನಲ್ಲಿ ಶುಕ್ರವಾರ ಅಪರಾಹ್ನ ಲಂಗರು ಹಾಕಿತ್ತು. ನಂತರ ಅಲ್ಲಿಂದ ಸಾಗರ್ ಐಸ್ಲೆಂಡ್‌ಗೆ ಬಂದಿತ್ತು.

ಹಡಗಿನಲ್ಲಿ ಏನೇನಿದೆ ಎಂದು ಅಧಿಕಾರಿಗಳು ಪ್ರಶ್ನಿಸಿದಾಗ, ಕಾರು ಮತ್ತು ಕಂಟೈನರ್ ಹೊರತುಪಡಿಸಿ ಮಿಲಿಟರಿ ಸ್ಫೋಟಕ ಸೇರಿದಂತೆ ಇತರ ಶಸ್ತ್ರಾಸ್ತ್ರಗಳಿವೆ ಎಂದು ಕ್ಯಾಪ್ಟನ್ ಉತ್ತರಿಸಿದ್ದ.

ನಂತರ ಸೀಮಾ ಸುಂಕ, ನೌಕಾದಳ, ಕರಾವಳಿ ತಟರಕ್ಷಣಾ ಪಡೆ ಸೇರಿದಂತೆ ಹಲವು ಅಧಿಕಾರಿಗಳು ಹಡಗನ್ನು ತಪಾಸಣೆ ನಡೆಸಿದಾಗ ರಾಕೆಟ್ ಲಾಂಚರುಗಳು, ಸ್ಮೋಕ್ ಬಾಂಬುಗಳು, ಆಂಟಿ ಏರ್‌ಕ್ರಾಫ್ಟ್ ಗನ್‌ಗಳು ಸೇರಿದಂತೆ ಇನ್ನಿತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿರುವುದು ಪತ್ತೆಯಾಗಿತ್ತು. ಈ ಸಂಬಂಧ ದಾಖಲೆಗಳನ್ನು ಕೇಳಿದಾಗ ಕ್ಯಾಪ್ಟನ್ ಸಂಶಯಾಸ್ಪದ ವರ್ತನೆ ತೋರಿಸಿದ್ದ. ಈ ಹಿನ್ನೆಯಲ್ಲಿ ಹಡಗನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ