ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಳುಗಡೆಯ ಭೀತಿಯಲ್ಲಿ ಜಗತ್‌ಪ್ರಸಿದ್ಧ ಕೋನಾರ್ಕ ದೇವಾಲಯ (Konark Sun Temple | Flood | Orissa)
Bookmark and Share Feedback Print
 
PR
ವಿಶ್ವ ಪ್ರಸಿದ್ಧ ಕೋನಾರ್ಕದ ಸೂರ್ಯ ದೇವಾಲಯ ಇದೀಗ ಮುಳುಗಡೆಯ ಭೀತಿ ಎದುರಿಸುತ್ತಿದೆ. ಭಾರೀ ಮಳೆಗೆ ಸಿಕ್ಕಿ ನಲುಗಿರುವ ಈ ಇತಿಹಾಸ ಪ್ರಸಿದ್ಧ ಅಪರೂಪದ ದೇವಾಲಯಕ್ಕೆ ಇದೀಗ ಭಾರೀ ಮಳೆಯಿಂದ ನೀರು ನುಗ್ಗಿದೆ.

ಈ ದೇವಾಲಯಕ್ಕೆ ಹೀಗೆ ನೀರು ನುಗ್ಗುತ್ತಿರುವುದು ಇದೇ ಮೊದಲಲ್ಲ. ಕಳೆದ 12 ವರ್ಷಗಳಿಂದ ಪ್ರತಿ ಬಾರಿಯ ಮಳೆಯಲ್ಲೂ ದೇವಾಲಯಕ್ಕೆ ನೀರು ನುಗ್ಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದಕ್ಕೆ ನಗರದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಕಾರಣ ಎಂದು ಸ್ಥಳೀಯರು ಆಪಾದಿಸುತ್ತಾರೆ. ಇದೇ ರೀತಿ ನೀರು ನುಗ್ಗುವುದು ಮುಂದುವರಿದಲ್ಲಿ ದೇವಸ್ಥಾನಕ್ಕೆ ಹಾನಿಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒರಿಸ್ಸಾದಲ್ಲಿರುವ ಈ ದೇವಾಲಯ 13ನೇ ಶತಮಾನದ್ದಾಗಿದ್ದು ಇದಕ್ಕೆ ಬ್ಲಾಕ್ ಪಗೋಡಾ ಎಂಬ ಹೆಸರೂ ಇದೆ. ಪ್ರವಾಸಿಗರು ಇದೀಗ ದೇವಸ್ಥಾನವನ್ನು ದೂರದಿಂದಲೇ ನೋಡಿ ಹಿಂತಿರುಗಬೇಕಾದ ಪರಿಸ್ಥಿತಿ ಬಂದಿದೆ. ಹತ್ತಿರಕ್ಕೆ ಹೋಗಲೂ ಕೂಡಾ ಸಾಧ್ಯವಾಗುತ್ತಿಲ್ಲ.

ಎಚ್ಚೆತ್ತ ಸರ್ಕಾರ: ಇದೀಗ ಸರ್ಕಾರ ಎಚ್ಚೆತ್ತುಕೊಂಡಿದ್ದು ದೇವಾಲಯದ ಸಮೀಕ್ಷೆಗಾಗಿ ತಜ್ಞರ ತಂಡವೊಂದನ್ನು ಕಳುಹಿಸಿದೆ. ಆರು ಜನರ ಈ ಸಮಿತಿಯಲ್ಲಿ ಎಂಜಿನಿಯರುಗಳು ಹಾಗೂ ನಿರ್ಮಾಣ ತಂತ್ರಜ್ಞರಿದ್ದು ಶೀಘ್ರದಲ್ಲೇ ಈ ಬಗ್ಗೆ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ನೀಡಲಿದ್ದಾರೆ. ನಂತರ ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಿದೆ.
ಸಂಬಂಧಿತ ಮಾಹಿತಿ ಹುಡುಕಿ