ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಗತ್ತಿನ ಎಲ್ಲಾ ಭಾಷೆಗಳಿಗೂ ತಮಿಳು ತಾಯಿ: ಕರುಣಾನಿಧಿ (Tamil | Sanskrit | M Karunanidhi | World Classical Tamil conference)
Bookmark and Share Feedback Print
 
'ದೇವ ಭಾಷೆ' ಸಂಸ್ಕೃತಕ್ಕಿಂತಲೂ ತಮಿಳು ಭಾಷೆ ಹಳೆಯದು ಮತ್ತು ಜಗತ್ತಿನ ಎಲ್ಲಾ ಭಾಷೆಗಳಿಗೂ ಇದು ತಾಯಿ. ಇದಕ್ಕಾಗಿ ನಾವು ಹೆಮ್ಮೆ ಪಡಬೇಕಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅಭಿಪ್ರಾಯಪಟ್ಟಿದ್ದಾರೆ.

ವೇದಗಳಲ್ಲಿ ಸುಮಾರು 20 ತಮಿಳು ಪದಗಳಿರುವುದನ್ನು ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಲು ಅವಿರತ ಶ್ರಮವಹಿಸಿದ ಭಾಷಾ ತಜ್ಞ ರಾಬರ್ಟ್ ಕಾಲ್ಡ್‌ವೆಲ್ ಪತ್ತೆ ಹಚ್ಚಿದ್ದರು. ಇದು ಸಂಸ್ಕೃತಕ್ಕಿಂತಲೂ ಮೊದಲು ತಮಿಳು ಅಸ್ತಿತ್ವದಲ್ಲಿತ್ತು ಎಂಬುದನ್ನು ಸೂಚಿಸುತ್ತದೆ ಎಂದು ಕೊಯಂಬತ್ತೂರಿನಲ್ಲಿ ನಡೆದ ವಿಶ್ವ ತಮಿಳು ಸಮ್ಮೇಳನದಲ್ಲಿ ಕರುಣಾನಿಧಿ ನುಡಿದರು.

ತಮಿಳು ಕೇವಲ ಅಂತಾರಾಷ್ಟ್ರೀಯ ಭಾಷೆ ಮಾತ್ರವಲ್ಲ, ಇದು ವಿಶ್ವದ ಎಲ್ಲಾ ಭಾಷೆಗಳಿಗೂ ತಾಯಿ. ಜಗತ್ತಿನ ಶಾಸ್ತ್ರೀಯ ಭಾಷೆಗಳಲ್ಲಿ ತಮಿಳು ಪ್ರಮುಖವಾದದ್ದು ಎಂದು ತಮಿಳು ವಿಧ್ವಾಂಸ ದೇವಾನೇಯ ಪವನಾರ್ ಕೂಡ ಹೇಳಿದ್ದಾರೆ ಎಂದರು.

ವಿವಿಧ ರೀತಿಯ ಮಾರ್ಪಾಡುಗಳೊಂದಿಗೆ ವಿಶ್ವದ ಹಲವು ಭಾಷೆಗಳಲ್ಲಿ ತಮಿಳಿನ ಮೂಲ ಶಬ್ಧಗಳು ಅಡಕವಾಗಿದ್ದು, ಅದೇ ಅರ್ಥವನ್ನು ಉಳಿಸಿಕೊಂಡಿವೆ. ಜಾಗತಿಕ ಭಾಷೆಗಳಲ್ಲಿ ತಮಿಳು ಶಬ್ದಗಳ ಕೆಲವು ಸಂಬಂಧಗಳು ಇರುವುದು ಹೌದಾದರೂ, ಮೂಲ ಶಬ್ಧವನ್ನು ಪತ್ತೆ ಹಚ್ಚುವುದು ಕಷ್ಟಕರ. ಆದರೂ ವಿಶ್ವದ ಭಾಷೆಗಳಿಗೆ ತಮಿಳು ಮಾತೃಭಾಷೆ ಎಂಬ ಘನತೆಯಿದೆ ಎಂದು ಸ್ವತಃ ಸಾಹಿತಿಯಾಗಿರುವ ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಮಂತ್ರಕ್ಕೆ ತಿರುಮಂತ್ರ, ಇದು ಕಲೈಜ್ಞಾರ್ ಕುತಂತ್ರ...
ಹೌದು, ವಿಶ್ವ ತಮಿಳು ಸಮ್ಮೇಳನಕ್ಕೆ ಅಂತಾರಾಷ್ಟ್ರೀಯ ಸಮಿತಿಯು ಅನುಮತಿಯನ್ನು ನೀಡದೇ ಇದ್ದರೂ, ಹೊಸ ಹೆಸರಿನೊಂದಿಗೆ ಸಮ್ಮೇಳನ ನಡೆಸಿದ್ದಲ್ಲದೆ ಸಂಘಟನೆಯೊಂದನ್ನೂ ಕಲೈಜ್ಞಾರ್ (ಕಲೈಂಞಾರ್) ಖ್ಯಾತಿಯ ಕರುಣಾನಿಧಿ ಹುಟ್ಟು ಹಾಕಿದ್ದಾರೆ.

ಈ ಹಿಂದೆ ನಡೆದಿರುವುದು ವಿಶ್ವ ತಮಿಳು ಸಮ್ಮೇಳನ. ಅದನ್ನು ನಡೆಸಲು ಅಂತಾರಾಷ್ಟ್ರೀಯ ಸಮಿತಿಯು (ಐಎಟಿಆರ್) ಕರುಣಾನಿಧಿಗೆ ಅನುಮತಿ ನೀಡಿರಲಿಲ್ಲ. ಅದಕ್ಕೆಂದು ಅವರು 'ವಿಶ್ವ ಶಾಸ್ತ್ರೀಯ ತಮಿಳು ಸಮ್ಮೇಳನ' ಎಂಬ ಹೆಸರಿನಲ್ಲಿ ತಮಿಳರನ್ನು ಒಗ್ಗೂಡಿಸಿ ಸಮಿತಿಯ ಅಸ್ತಿತ್ವಕ್ಕೆ ಬಲವಾದ ಹೊಡೆತ ನೀಡಿದ್ದಾರೆ.

ವಿಶ್ವ ತಮಿಳು ಶಾಸ್ತ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದಲ್ಲದೆ, 'ವಿಶ್ವ ತೋಲ್ಪಾಪಿಯಾರ್ ಕ್ಲಾಸಿಕಲ್ ತಮಿಳ್ ಸಂಗಮ್' ಎಂಬ ವಿಶ್ವ ಸಂಘಟನೆಯನ್ನೂ ಕರುಣಾ ಹುಟ್ಟು ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಸಂಘಟನೆಯು ವಿಶ್ವ ಶಾಸ್ತ್ರೀಯ ತಮಿಳು ಸಮ್ಮೇಳನಗಳನ್ನು ನಡೆಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ